Thursday, January 27, 2022

ಅಧಿಕಾರದಲ್ಲಿದ್ದಾಗ ಗಂಡಸ್ತನ ಎಲ್ಲಿ ಹೋಗಿತ್ತು, ಈಗ ಗಂಡಸ್ತನದ ಬಗ್ಗೆ ಮಾತನಾಡ್ತೀರಾ-ಎಂ.ಪಿ.ರೇಣುಕಾಚಾರ್ಯ

Must read

ಬೆಂಗಳೂರು: ಅಧಿಕಾರದಲ್ಲಿದ್ದಾಗ ಗಂಡಸ್ತನ ಎಲ್ಲಿ ಹೋಗಿತ್ತು. ಈಗ ಗಂಡಸ್ತನದ ಬಗ್ಗೆ ಮಾತನಾಡ್ತೀರಾ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ನಿವಾಸದ ಬಳಿ ಮಾತನಾಡಿದ ಅವರು, ಬೊಮ್ಮಾಯಿ ಸಿಎಂ ಆದ ಮೇಲೆ ನಾನು ನಮ್ಮ ಕ್ಷೇತ್ರಕ್ಕೆ ಮೂರುವರೆ ಕೋಟಿ ಅನುದಾನ ನೀಡಿದ್ದೇನೆ. ವೇದಿಕೆಯಲ್ಲಿ ಬಹಿರಂಗವಾಗಿ ನನಗೆ ಆಶೀರ್ವಾದ ಮಾಡಿ ಕೇಳಿದ್ದೀನಿ. ನಮಗೆ ಯಾರು ಓಟು ಹಾಕುತ್ತೀರಾ ಎಂದು ಕೇಳಿದ್ದೇನೆ, ಇದು ತಪ್ಪಾ? ಕೋವಿಡ್​ನಿಂದ ಮೃತಪಟ್ಟವರಿಗೆ ತಲಾ 10 ಸಾವಿರ ಕೊಡುತ್ತೇನೆ ಎಂದು ಹೇಳಿದ್ದೆ. ಬಿಎಸ್​ವೈ ಸಿಎಂ ಆಗಿದ್ದಾಗ 1 ಲಕ್ಷ ಕೊಡುತ್ತೇವೆ ಎಂದು ಹೇಳಿದ್ದರು. ಒಂದು ಲಕ್ಷ ಕೊಟ್ಟವರಿಗೆ ನಾನು ನನ್ನ ಕಡೆಯಿಂದ 10 ಸಾವಿರ ಕೊಟ್ಟಿದ್ದೇನೆ. ಮನೆ ಬಿದ್ದವರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದೇನೆ. ನಾನು ಇಂತಹ ಆರೋಪಗಳಿಗೆ ಜಗ್ಗುವುದಿಲ್ಲ. ನಾನು ಮಾಡಿರುವ ಕೆಲಸಗಳಿಗೆ ಆಶೀರ್ವಾದ ಮಾಡಿ ಎಂದು ಹೇಳಿದ್ದೇನೆ ಎಂದರು.

ಕಾಂಗ್ರೆಸ್ ಮೇಕೆದಾಟು ಯೋಜನೆ ಪಾದಯಾತ್ರೆ ವಿಚಾರವಾಗಿ ಮಾತನಾಡಿ, ಇದು‌ ರಾಜಕೀಯ ಪೇರಿತ ಪಾದಯಾತ್ರೆ. ನಿಮ್ಮ ಸರ್ಕಾರ ಇದ್ದಾಗ ಯಾಕೆ ಮೇಕೆದಾಟು ಯೋಜನೆ ಮಾಡಿಲ್ಲ. ತಾಕತ್ತು, ಗಂಡಸ್ತನ, ಪೌರುಷದ ಮಾತುಗಳು ಈಗ ಯಾಕೆ. ಅಧಿಕಾರದಲ್ಲಿದ್ದಾಗ ಗಂಡಸ್ತನ ಎಲ್ಲಿ ಹೋಗಿತ್ತು. ಈಗ ಗಂಡಸ್ತನ ಬಗ್ಗೆ ಮಾತನಾಡ್ತೀರಾ. ನಮ್ಮ ಜ್ಞಾನೇಂದ್ರ ಬಗ್ಗೆ ಆರಗ ಅಲ್ಲ, ಅಜ್ಞಾನ ಅಂತೀರಾ. ಈ ದೊಂಬಾರಾಟದ ಮಾತು ನಿಲ್ಲಿಸಿ. ಅಭಿವೃದ್ಧಿ ವಿಚಾರದಲ್ಲಿ ಗಂಡಸ್ತನ ತೋರಿಸಿ. ಮೇಕೆದಾಟು ವಿಚಾರದಲ್ಲಿ ನೀವು ಸರ್ಕಾರಕ್ಕೆ ಸಲಹೆ ನೀಡಿ. ದೇಶದಲ್ಲಿ ರಾಜ್ಯದಲ್ಲಿ ನಿಮ್ಮ ಅಡ್ರೆಸ್ ಇಲ್ಲ. ಭ್ರಮಾ ಲೋಕದಲ್ಲಿ ತೆಲಬೇಡಿ. ಅಧಿಕಾರಕ್ಕೆ ಬರುತ್ತೇವೆಂದು ಹಗಲುಗನಸು ಕಾಣಬೇಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

Latest article