ಬೆಂಗಳೂರು: ಇತ್ತೀಚೆಗಷ್ಟೇ ಕಾಂಗ್ರೆಸ್ಗೆ ಗುಡ್ ಬೈ ಹೇಳಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಸಿಎಂ ಇಬ್ರಾಹಿಂ, ಇದೀಗ ಜೆಡಿಎಸ್ನಲ್ಲೂ ತಮ್ಮ ವರಾತ ಶುರು ಮಾಡಿದ್ದಾರೆ.
ಸಿಎಂ ಇಬ್ರಾಹಿಂಗೆ ಪ್ರಸ್ತುತ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯನ್ನು ನೀಡಲಾಗಿದೆ. ಹೀಗಿದ್ರೂ ಇಬ್ರಾಹಿಂ ಈಗಲೇ ಎಂಎಲ್ಸಿ ಟಿಕೆಟ್ಗಾಗಿ ಬಿಗಿಪಟ್ಟು ಹಿಡಿದಿದ್ದಾರೆ. ಜೆಡಿಎಸ್ ನಾಯಕರಿಂದ ಇಬ್ರಾಹಿಂ ಮನವೊಲಿಸುವ ಕಸರತ್ತು ನಡೆದಿದ್ದು, ನಿಮಗೆ ರಾಜ್ಯಾಧ್ಯಕ್ಷ ಸ್ಥಾನವನ್ನ ನೀಡಲಾಗಿದೆ. ಬೇರೊಬ್ಬರಿಗೆ ಅವಕಾಶ ಮಾಡಿ ಕೊಡೋಣ. ವಿಧಾನಸಭಾ ಚುನಾವಣೆಗೆ ನೀವು ಕೇಳಿದ ಕಡೆ ಟಿಕೆಟ್ ನೀಡ್ತೇವೆ. ಈಗ ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಮನವೊಲಿಕೆ ಮಾಡುತ್ತಿದ್ದಾರೆ.
ನಾಯಕರ ಮನವೊಲಿಕೆಗೆ ಇನ್ನೂ ಬೆಂಡಾಗದ, ಎಂಎಲ್ಸಿ ಟಿಕೆಟ್ಗಾಗಿ ಪಟ್ಟು ಹಿಡಿದಿದ್ದಾರೆ. ಕಾಂಗ್ರೆಸ್ನಲ್ಲೂ ಪ್ರತಿಪಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಇಬ್ರಾಹಿಂ, ಸಿಗದ ಕಾರಣ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.