Thursday, May 19, 2022

ನ. 4ಕ್ಕೆ ಮುಖ್ಯಮಂತ್ರಿಯಾಗಿ ನೂರು ದಿನ ಪೂರೈಕೆ: ಅದ್ಧೂರಿ ಕಾರ್ಯಕ್ರಮ ಆಯೋಜಿಸಲು ಬೊಮ್ಮಾಯಿ ಸೂಚನೆ

Must read

ಬೆಂಗಳೂರು: ನವೆಂಬರ್​ 4ಕ್ಕೆ ಬಸವರಾಜ ಬೊಮ್ಮಾಯಿವರು ಮುಖ್ಯಮಂತ್ರಿಯಾಗಿ ನೂರು ದಿನ ಪೂರೈಸಲಿದ್ದಾರೆ. ಈ ಹಿನ್ನೆಲೆ, ಅದ್ಧೂರಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸುವಂತೆ ತಮ್ಮ ಪ್ರಧಾನ ಕಾರ್ಯದರ್ಶಿಗೆ ಸಿಎಂ ಸೂಚನೆ ನೀಡಿದ್ದಾರೆ.

ಜುಲೈ 28ರಂದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಹೀಗಾಗಿ, ಸಿಎಂ ಜುಲೈ 28ರಿಂದ ಘೋಷಿಸಿದ ಕಾರ್ಯಕ್ರಮಗಳ ಪಟ್ಟಿ ನೀಡುವಂತೆ ಮಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ವಿವಿಧ ಇಲಾಖೆಗಳಿಗೆ ಸೂಚಿಸಿದ್ದಾರೆ.

ಜಲಾನಯನ ಪ್ರದೇಶಕ್ಕೆ ಅನುದಾನ, ನೇಕಾರರ ಸಾಲ ಮನ್ನಾ, ಸ್ವಸಹಾಯ ಗುಂಪುಗಳಿಗೆ 200 ಕೋಟಿ ಸಾಲ, ಡಿಸಿಸಿ ಬ್ಯಾಂಕ್‌ಗಳಿಗೆ 2.10 ಕೋಟಿ ಹಣ, ಬರಗಾಲ ತಡೆಯುವಿಕೆ, ನೀರು ‌ಸಂಗ್ರಹಣೆ ಕಾರ್ಯಕ್ರಮ, ಕೃಷಿ‌ ಉತ್ಪಾದನೆ ಹೆಚ್ಚಳ ಕಾರ್ಯಕ್ರಮಗಳು, ಕಡತಗಳ ತ್ವರಿತ ವಿಲೇವಾರಿ ಸೇರಿದಂತೆ ಹಲವು ಯೋಜನೆಗಳನ್ನು
ನೂರರ ಸಂಭ್ರಮದ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ.

ಈಗಾಗಲೇ ರಾಜ್ಯದಲ್ಲಿ ಡೆಲ್ಟಾ ವೈರಸ್​ಗಿಂತಲೂ ವೇಗವಾಗಿ ಹರಡುವ ಕೊರೊನಾ ಹೊಸ ರೂಪಾಂತರಿ ಪತ್ತೆಯಾಗಿದೆ. ಬ್ರಿಟನ್, ಯೂರೋಪ್, ರಷ್ಯಾ ಅಮೆರಿಕಾದಲ್ಲಿ ಕೊರೊನಾ ಏರಿಕೆಗೆ ಕಾರಣವಾಗಿರುವ AY 4.2 ವೈರಸ್​ ಕರ್ನಾಟಕದಲ್ಲಿಯೂ ಪತ್ತೆಯಾಗಿದೆ. ಬೆಂಗಳೂರಲ್ಲಿ 3 ಹಾಗೂ ಇತರ ಜಿಲ್ಲೆಗಳಲ್ಲಿ 4 ಪ್ರಕರಣ ಪತ್ತೆಯಾಗಿದೆ.

ಇಂತಹ ಸಮಯದಲ್ಲಿ ಜನರಿಗೆ ಎಚ್ಚರಿಕೆ ನೀಡಬೇಕಾದ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿವರು ಬೇಜಾಬ್ದಾರಿತನದಿಂದ ಅದ್ದೂರಿ ಕಾರ್ಯಕ್ರಮ ಮಾಡಿಕೊಳ್ಳಲು ಹೊರಟಿದ್ದು, ಬೊಮ್ಮಾಯಿವರು ಪ್ರಚಾರದ ಗೀಳಿಗೆ ಬಿದ್ರಾ ಎಂಬ ಪ್ರಶ್ನೆ ಮೂಡಿದೆ.

Latest article