ಸಂಬರಗಿ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಚಕ್ರವರ್ತಿ ಚಂದ್ರಚೂಡ್

ಸಂಬರಗಿ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಚಕ್ರವರ್ತಿ ಚಂದ್ರಚೂಡ್

ಬೆಂಗಳೂರು: ಕನ್ನಡ ಬಿಗ್​ಬಾಸ್​ ಸೀಸನ್​​ 8ರ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಅವರು, ಸಾಮಾಜಿಕ ಹೋರಾಟಗಾರ ಪ್ರಶಾಂತ್​ ಸಂಬರಗಿ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ..?
ಪ್ರಶಾಂತ್ ಸಂಬರಗಿ ಯಾವುದೇ ಆಧಾರವಿಲ್ಲದೆ ನಟ-ನಟಿಯರನ್ನು ಟಾರ್ಗೆಟ್​ ಮಾಡುತ್ತಿದ್ದಾರೆ. 3 ವರ್ಷಗಳ ಹಿಂದೆ ಮೀಟೂ ಪ್ರಕರಣದಲ್ಲಿ ಗಾಳಿಯಲ್ಲಿ ಗುಂಡು ಹೊಡೆದಿದ್ದರು. ಶೃತಿ ಹರಿಹರನ್​ಗೆ ಕ್ರೈಸ್ತ ಮಿಷನರಿಯಿಂದ ಕೊಟ್ಯಾಂತರ ರೂ. ಹಣ ಸಂದಾಯವಾಗಿದೆ ಎಂದಿದ್ದರು. ಆದರೆ, ಯಾವುದೇ ದಾಖಲೆ ನೀಡಿರಲಿಲ್ಲ.

ಜಮೀರ್ ಅಹ್ಮದ್ ತೆರಿಗೆ ಹಣದಲ್ಲಿ ಶ್ರೀಲಂಕಾ ಕ್ಯಾಸಿನೋಗೆ ಹೋಗಿ ಮೋಜು,ಮಸ್ತಿ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಅದಕ್ಕೂ ದಾಖಲೆ ನೀಡದೆ ಬ್ಲಾಕ್​ಮೇಲ್​ ಮಾಡಿದ್ದರು. ಡ್ರಗ್ಸ್ ಪ್ರಕರಣದಲ್ಲಿ ನಟಿಯರು ಡ್ರಗ್ಸ್​ನಿಂದಲೇ ಹಣ ಸಂಪಾದನೆ ಮಾಡುತ್ತಿದ್ದಾರೆ. ಅದರ ಮೂಲ ಗೊತ್ತು ಎಂದಿದ್ದರು. ಈ ಬಗ್ಗೆಯೂ ದಾಖಲೆ ಕೊಟ್ಟಿಲ್ಲ. ಇದರಿಂದ ಕನ್ನಡ ಚಿತ್ರರಂಗದ ಮಾನವನ್ನು ದೇಶದಾದ್ಯಂತ ಹರಾಜು ಹಾಕಿದ ಹಾಗಾಗಿದೆ. ಇದುವರೆಗೂ ಮಾಧ್ಯಮದ ಮುಂದೆ ಹೇಳಿದ ಹೇಳಿಕೆಗೆ ದಾಖಲೆಗಳನ್ನು ಕೊಟ್ಟಿಲ್ಲ.

ನಿರೂಪಕಿ ಅನುಶ್ರೀ ಕೊಟ್ಯಾಂತರ ರೂಪಾಯಿ ಮನೆ ಕಟ್ಟಿದ್ದಾರೆ ಎಂದು ಹೇಳಿದ್ದರು. ಕುರಿತಾಗಿಯೂ ದಾಖಲೆ ಕೊಟ್ಟಿಲ್ಲ. ಶುಗರ್ ಡ್ಯಾಡಿ ಬಗ್ಗೆಯೂ ದಾಖಲೆಗಳನ್ನು ಯಾವೊಬ್ಬ ಅಧಿಕಾರಿಗಳಿಗೂ ನೀಡಿಲ್ಲ. ಈ ಎಲ್ಲಾ ಪ್ರಕರಣ ಗಮನಿಸಿದಾಗ ಪ್ರಶಾಂತ್​ ಸಂಬರಗಿ ಬ್ಲಾಕ್​ಮೇಲ್​ ದಂಧೆಯಲ್ಲಿ ತೊಡಗಿದ್ದಾರೆಂದು ಅನುಮಾನವಿದೆ. ಈ ಕಾರಣಕ್ಕೆ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

Related Stories

No stories found.
TV 5 Kannada
tv5kannada.com