ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ರಾಜಕಾರಣಿಗಳಲ್ಲಿ ಪ್ರಮುಖರು ,ನವಕರ್ನಾಟಕದ ನಿರ್ಮಾತೃವಾಗಿರುವ ಎಸ್. ನಿಜಲಿಂಗಪ್ಪನವರ 118 ಜನ್ಮ ದಿನ ಹಿನ್ನಲೆ ವಿಧಾನಸೌಧದ ಪಶ್ಚಿಮಧ್ವಾರದಲ್ಲಿರುವ ನಿಜಲಿಂಗಪ್ಪನವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಎಸ್. ನಿಜಲಿಂಗಪ್ಪನವರ ಭಾವಚಿತ್ರಕ್ಕೆ ಸಿಎಂ ಪುಷ್ಪಾರ್ಚನೆ ಮಾಡಿ, ಶಾಂತ ಸ್ವಭಾವಕ್ಕೆ ಮತ್ತು ಸಜ್ಜನಿಕೆಗೆ ಪ್ರಸಿಧ್ಧರಾದ ದೇಶಪ್ರೇಮಿ ಮತ್ತು ರಾಜಕಾರಣಿಯಾಗಿರುವಂತಹ ಎಸ್. ನಿಜಲಿಂಗಪ್ಪನವರ ಕುರಿತಾದ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಇನ್ನೂ ಈ ಕಾರ್ಯಕ್ರಮದಲ್ಲಿ ಎಸ್.ನಿಜಲಿಂಗಪ್ಪ ಕುಟುಂಬಸ್ಥರು ಕೂಡಾ ಭಾಗಿಯಾಗಿದ್ದರು.