Monday, January 24, 2022

ಒಂದು ವೇಳೆ ಖಾಲಿ ಕುರ್ಚಿ ಇದ್ದರೂ ರಸ್ತೆಯಲ್ಲಿ ತಡೆಗಟ್ಟಿದ್ದು ಯಾಕೆ?- ನಳೀನ್ ಕುಮಾರ್ ಕಟೀಲ್​

Must read

ಬೆಂಗಳೂರು; ಪಂಜಾಬ್ ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಇಲ್ಲದಿದ್ದಾಗ ಕಾಂಗ್ರೆಸ್ ಇಂತಹ ಅರಾಜಕತೆ ಸೃಷ್ಟಿ ಮಾಡುತ್ತದೆ. ದೇಶದಲ್ಲಿ ಪ್ರಧಾನಿ ಹುದ್ದೆ ಪಕ್ಷಕ್ಕೆ ಸೀಮಿತ ಅಲ್ಲ. ಪಂಜಾಬ್ ಸರ್ಕಾರ ವಿಫಲವಾಗಿದೆ, ಹಾಗಾಗಿ ವಜಾ ಮಾಡಬೇಕು. ಸುಪ್ರೀಂಕೋರ್ಟ್​ನಿಂದ ತನಿಖೆಗೆ ಆದೇಶವಾಗಿದೆ. ಒಂದು ವೇಳೆ ಖಾಲಿ ಕುರ್ಚಿ ಇದ್ದರೂ ರಸ್ತೆಯಲ್ಲಿ ತಡೆಗಟ್ಟಿದ್ದು ಯಾಕೆ? ಖಾಲಿ ಕುರ್ಚಿ ಇರುತ್ತಿದ್ದರೆ ಪಕ್ಷ ನೋಡಿಕೊಳ್ಳುತ್ತಿತ್ತು. ರಾಜ್ಯ ಸರ್ಕಾರದ ಜವಾಬ್ದಾರಿ ಏನು? ಪಂಜಾಬ್​ನಲ್ಲಿ ಗುಪ್ತಚರ ಇಲಾಖೆ ಇಲ್ಲವೇ? ತನ್ನ ಮುಖ ಉಳಿಸಿಕೊಳ್ಳಲು ಪಂಜಾಬ್ ಸರ್ಕಾರ ಬೇರೆ ರೀತಿ ಹೇಳುತ್ತಿದೆ ಎಂದರು.

ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಮಾತನಾಡಿ, ಹೋರಾಟಕ್ಕೆ ನಮ್ಮದೇನೂ ಅಭ್ಯಂತರ ಇಲ್ಲ. ನಮ್ಮ ಸರ್ಕಾರ ಯೋಜನೆ ಜಾರಿಗೆ ಬದ್ಧ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಾನೂನು ಸಮಸ್ಯೆ ಬಗೆಹರಿಸಿಕೊಂಡು ಅನುಷ್ಠಾನ ಮಾಡಲಾಗುತ್ತದೆ. ನಾವು ಮಾಡುತ್ತೇವೆ, ಅದು ನಮ್ಮ ಸರ್ಕಾರದ ಬದ್ಧತೆ. ಇದು ಬೆಂಗಳೂರಿಗೆ ನೀರು ಕೊಡಲು ಪಾದಯಾತ್ರೆ ಅಲ್ಲ.

ಕಾಂಗ್ರೆಸ್​ನಲ್ಲಿ ನಾಯಕತ್ವ ಮೇಲಾಟದಿಂದ ಪಾದಯಾತ್ರೆ ಆಗುತ್ತಿದೆ. ಕೊರೊನಾ ಜಾಸ್ತಿಯಾದರೆ ಅದು ಪಾದಯಾತ್ರೆಯಿಂದಲೇ ಎಂಬ ಎಚ್ಚರಿಕೆ ಕೊಡುತ್ತೇವೆ. ನಿಯಮ ಉಲ್ಲಂಘಿಸಿದರೆ ಅರೆಸ್ಟ್​ ಮಾಡುವ ವಿಚಾರ ಮಾತನಾಡಿ, ಕಾನೂನು ಉಲ್ಲಂಘನೆ, ಕಾನೂನು ಜಾರಿ ಬಗ್ಗೆ ಎಲ್ಲವನ್ನೂ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

Latest article