Tuesday, May 17, 2022

ಯಾವ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ, ಆ ಸಮುದಾಯವನ್ನೇ ಟಾರ್ಗೆಟ್ ಮಾಡಿ ಮೀಸಲಾತಿ ನೀಡ್ತೀವಿ: ಕಟೀಲ್​

Must read

ಬೆಂಗಳೂರು: ಸಿದ್ದರಾಮಯ್ಯ ಅಹಿಂದ ನಾಯಕ ಅಂತಾರೆ. ಆದರೆ, ಸಿದ್ದರಾಮಯ್ಯ ಹಿಂದುಳಿದವರನ್ನು ಮಲಗಿಸಿದವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕನಗರ ಯಡಿಯೂರಪ್ಪ ನೇತೃತ್ವದಲ್ಲಿ ಅಭಿವೃದ್ಧಿ ಆಯ್ತು. ಟಿಪ್ಪು ಜಯಂತಿ ಮಾಡಿ ಹಿಂದೂ ಸಮುದಾಯವನ್ನ ಒಡೆದರು. ಶಾದಿ ಭಾಗ್ಯ ಅಂತ ಮಾಡಿ, ಲೆಕ್ಕವನ್ನು ಮಾಡಿ ಕೆಲವೇ ಮುಸ್ಲಿಮರಿಗೆ ಮಾತ್ರ ನೀಡಿದರು. ಪತ್ರಕರ್ತರಿಗೆ ಹಿಂದುಳಿದ ವರ್ಗದವರಿಗೆ ಲ್ಯಾಪ್​ಟಾಪ್ ನೀಡಿ, ಉಳಿದವರಿಗೆ ಅನ್ಯಾಯ ಮಾಡಿದರು. ಹಿಂದುಳಿದವರಿಗೆ ಅನ್ಯಾಯ ಮಾಡಿದ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ.

ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ಬಿಜೆಪಿ ಈಗಿರೋದಕ್ಕಿಂತ ಅತಿ ಹೆಚ್ಚು ಪರ್ಸಂಟೇಜ್ ಮೀಸಲಾತಿಯನ್ನ OBCಗೆ ನೀಡ್ತೀವಿ. ಇತರೆ ಸಮುದಾಯಗಳಿಗೂ ಅನ್ಯಾಯ ಮಾಡದಂತೆ ಮಾಡ್ತೀವಿ. ಯಾವ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ, ಆ ಸಮುದಾಯವನ್ನೇ ಟಾರ್ಗೆಟ್ ಮಾಡಿ ಅವರಿಗೆ ಮೀಸಲಾತಿ ನೀಡ್ತೀವಿ. ಸಿದ್ದಿ ಸಮುದಾಯಕ್ಕೆ ಯಾವುದೇ ನ್ಯಾಯ ಸಿಕ್ಕಿರಲಿಲ್ಲ, ಆದ್ರೆ ಕಾಡಿನಲ್ಲಿದ್ದ ಸಿದ್ದಿಯವರನ್ನ MLC ಮಾಡಿದೆವು. ಅಶೋಕ್ ಗಸ್ತಿಯನ್ನ ಹುಡುಕಿ ಮಾಡಿದ್ದೇವೆ. ಕಾರ್ಯಕರ್ತ ಅಂತ ಆದ್ರೆ, ಅವರನ್ನು ಗುರುತಿಸಿ ಶಾಸಕರನ್ನು ಮಾಡ್ತೀವಿ.

ಕಾಂಗ್ರೆಸ್​ನಲ್ಲಿ‌ ಆ ರೀತಿ ಸಾಧ್ಯವಿಲ್ಲ, ಅಲ್ಲಿ ಪೇಮೆಂಟ್ ಸೀಟುಗಳು ಮಾತ್ರ ಇದೆ. ನಾನು, ಯಡಿಯೂರಪ್ಪ, ಸಿಎಂ ರಾಜ್ಯ ಪ್ರವಾಸ ಮಾಡಿದೆವು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಆಗಲಿ, ಎಲ್ಲೆಡೆ ಬಿಜೆಪಿ ಪರವಾದ ವಾತಾವರಣ ಇದೆ. ರಾಜ್ಯದಲ್ಲಿ 150+ ಸೀಟು ಗೆಲ್ತೀವಿ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜಗಳದಿಂದಲೇ ನಮಗೆ 50 ಸೀಟುಗಳು ಬರುತ್ತವೆ.

ಈಗಾಗಲೇ ಕುರ್ಚಿಗೆ ಗಲಾಟೆ ಶುರುವಾಗಿದೆ. ಪರಮೇಶ್ವರ್ ಅವರನ್ನ ಮುಗಿಸಿದ್ದು ಯಾರೂ ಅಲ್ಲ,‌ ಕಾಂಗ್ರೆಸ್​. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಹೋಗಿ, ಎಲ್ಲರನ್ನೂ ಮುಗಿಸಿದ್ದಾರೆ. ಈಗ ಡಿ.ಕೆ ಶಿವಕುಮಾರ್ ಅವರನ್ನೂ ಮುಗಿಸ್ತಾರೆ. ಈಗ ಅವರಲ್ಲಿ ಸಮಿತಿ ಮಾಡಿದ್ದಾರೆ. 150 ಕಾರ್ಯಾಧ್ಯಕ್ಷ, 150 ಉಪಾಧ್ಯಕ್ಷ, ಕಾರ್ಯದರ್ಶಿಗಳನ್ನ ಮಾಡಿದ್ದಾರೆ. ಸಾಲುತ್ತಿಲ್ಲ ಅಂತ ಮತ್ತೊಂದು ಪಟ್ಟಿ ಕೂಡ ಸಿದ್ದವಾಗಿದೆ. ಬೂತ್ ಮಟ್ಟಕ್ಕೂ ಒಬ್ಬ ರಾಷ್ಟ್ರೀಯ ಕಾರ್ಯದರ್ಶಿ ಮಾಡಿಬಿಡಿ ಅಂತ ಕಾಂಗ್ರೆಸ್ ಕಾಲೆಳೆದರು.

Also read:  ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ-ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

ಹತ್ತು ವರ್ಷ ಗರೀಬಿ ಹಟಾವೋ ಕರೆ ನೀಡಿ, ಭಾಷಣ ಮಾಡಿದ್ರಿ ಹೋಯ್ತಾ? ಆದರೆ, ನರೇಂದ್ರ ಮೋದಿ ಒಬ್ಬೊಬ್ಬ ರೈತನ ಅಕೌಂಟಿಗೆ ಒಂದು ಲಕ್ಷದಿಂದ ಮೂರು ಲಕ್ಷದ ವರೆಗೂ ಹಾಕಿದ್ದಾರೆ. ನಮ್ಮಮ್ಮ ಮೊನ್ನೆ ಹೇಳ್ತಿದ್ರು, ನನ್ನ ಅಕೌಂಟಿನಲ್ಲಿ ಒಂದು ಲಕ್ಷ ಇದೆ ಅಂತ.ಹೇಗೆ ಬಂತು ಅಂದಿದ್ದಕ್ಕೆ ಸರ್ಕಾರ ಕೊಟ್ಟಿದೆ ಅಂತ ಹೇಳಿದ್ರು. ಅರ್ಜಿ ಹಾಕದೆಯೇ ಮನೆಯಲ್ಲಿರುವ ರೈತನ ಅಕೌಂಟಿಗೂ ಹಣ ಹಾಕಿರೋದು ನಮ್ಮ ನರೇಂದ್ರ ಮೋದಿ ಸರ್ಕಾರ ಎಂದರು.

 

 

 

 

 

 

 

 

 

 

 

 

 

 

Also read:  ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ-ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

 

 

 

Latest article