ಬಿಜೆಪಿಯವರು ಇಬ್ಬಂದಿ ನೀತಿ ಅನುಸರಿಸುತ್ತಿದ್ದಾರೆ: ಈಶ್ವರ್ ಖಂಡ್ರೆ

ಬಿಜೆಪಿಯವರು ಇಬ್ಬಂದಿ ನೀತಿ ಅನುಸರಿಸುತ್ತಿದ್ದಾರೆ: ಈಶ್ವರ್ ಖಂಡ್ರೆ

ಬೆಂಗಳೂರು: ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದಾಗ ಒಂದು ರೀತಿ, ಆಡಳಿತಕ್ಕೆ ಬಂದಾಗ ಮತ್ತೊಂದು ರೀತಿ ನಡೆದುಕೊಳ್ಳುವ ಮೂಲಕ ಇಬ್ಬಂದಿ ನೀತಿ ಅನುಸರಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

ನಂಜನಗೂಡು ದೇಗುಲ ಏಕಾಏಕಿ‌ ತೆರವುಗೊಳಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರ ನಿಜಬಣ್ಣ ಬಯಲಾಗಿದೆ. ವಿರೋಧ ಪಕ್ಷವಾಗಿದ್ದಾಗ ಒಂದು ರೀತಿ, ಆಡಳಿತಕ್ಕೆ ಬಂದಾಗ ಮತ್ತೊಂದು ರೀತಿ ನಡೆದುಕೊಳ್ಳುತ್ತಾರೆ. ನಾವು ಹಿಂದೂಪರ ಅಂತಾರೆ. ಅವರದೇ ಸರ್ಕಾರವಿದೆ, ಆದರೂ ದೇವಸ್ಥಾನ ಕೆಡವಿದ್ದಾರೆ. ಬೆಲೆ ಏರಿಕೆ ಬಗ್ಗೆ ಹಾರಿಕೆ ಉತ್ತರ ಕೊಡುತ್ತಾರೆ. ಬಿಜೆಪಿಯವರು ಪ್ರತಿಯೊಂದರಲ್ಲೂ ಇಬ್ಬಂದಿ ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ ಮಾತನಾಡಿ, ಏಕಾಏಕಿ ದೇಗುಲ ಒಡೆದದ್ದು ಸರಿಯಲ್ಲ. ಹಿಂದೆಯೂ ಇಂತಹ ಸನ್ನಿವೇಶನ ನಡೆದಿವೆ. ಸ್ಥಳೀಯರ ಅಭಿಪ್ರಾಯ ಕೇಳಬೇಕಿತ್ತು. ಗಣೇಶ ಚತುರ್ಥಿಗೂ ಗೊಂದಲ ಮಾಡಿದ್ರು. ಹಿಂದೂ ಅಂತ ಮತ ಪಡೆಯೋದಷ್ಟೇ ಅವರ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related Stories

No stories found.
TV 5 Kannada
tv5kannada.com