Wednesday, May 18, 2022

ಪೊಲೀಸರ ವಿಚಾರಣೆ ವೇಳೆ ಡ್ರಗ್​ ಪೆಡ್ಲರ್​ ಹೆಸರು ಬಾಯ್ಬಿಟ್ಟ ವಿಷ್ಣು ಭಟ್..!

Must read

ಬೆಂಗಳೂರು: ಭೀಮಾ ಜ್ಯುವೆಲರ್ಸ್ ಮಾಲೀಕರ ಮಗ ವಿಷ್ಣು ಭಟ್ ಸದ್ಯ ಪೊಲೀಸರ ವಶದಲ್ಲಿದ್ದು, ವಿಚಾರಣೆ ವೇಳೆ ಡ್ರಗ್​​ ದಂಧೆ ವಿಚಾರವಾಗಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ವಿಷ್ಣು ಭಟ್ ಹಲಸೂರು ಉಪವಿಭಾಗದ ಪೊಲೀಸರ ಮುಂದೆ ಪ್ಪು ಒಪ್ಪಿಕೊಂಡಿದ್ದು, ಬಾಣಸವಾಡಿಯ ಕಮ್ಮನಹಳ್ಳಿ ಬಳಿಯಿಂದ ಗಾಂಜಾ ತರುತ್ತಿದ್ದೆ. ನೈಜೀರಿಯಾ ಮೂಲದ ಡೇವಿಡ್ ಎಂಬಾತ  ಯಾವ ಡ್ರಗ್ಸ್ ಕೇಳುತ್ತೇನೋ ಅದನ್ನ ತಂದುಕೊಡುತ್ತಿದ್ದ. ವಾಟ್ಸ್​ಆ್ಯಪ್​ ಕಾಲ್​ ಮೂಲಕ ಲೊಕೇಶನ್ ಹಾಗೂ ಯಾವ ಡ್ರಗ್​ ಬೇಕು ಎನ್ನುವ ವಿಚಾರವನ್ನು ತಿಳಿಸುತ್ತಿದ್ದೆ. ಇಂದಿರಾನಗರದ ಮನೆಯಲ್ಲಿ 50 ಗ್ರಾಂ ಗಾಂಜಾ ಎಲೆಗಳನ್ನು ತಂದು ಇಟ್ಟಿದೆ.20 ಗ್ರಾಂನಷ್ಟು ಗಾಂಜಾ ಸಿಗರೇಟಿಗೆ ಹಾಕಿ ಸೇದಿದ ಬಳಿಕ ಶ್ರೀಕಿಯನ್ನು ಭೇಟಿಯಾಗಲು ಹೋಗಿದ್ದೆ. ಮನೆಯಲ್ಲಿ ನೀವು ಸೀಜ್ ಮಾಡಿರೋದು ನನ್ನ ಬಳಿ ಉಳಿದಿದ್ದ 30 ಗ್ರಾಂ ಗಾಂಜಾ ಅಷ್ಟೇ. ಈ ಹಿಂದಿನಿಂದಲೂ ಮಾದಕ ವಸ್ತುಗಳಿಗೆ ಅಡಿಕ್ಟ್ ಆಗಿದ್ದೆ. ನನ್ನ ತಂದೆ ಕೃಷ್ಣಭಟ್ಟರು ಕೆಲವೇ ದಿನದ ಹಿಂದೆ ತೀರಿಕೊಂಡಿದ್ದಾರೆ. ಅದೇ ನೋವಿನಲ್ಲಿ ಗಾಂಜಾ ಹೊಡೆದಿದ್ದೇನೆ. ಪ್ರತಿಷ್ಟಿತ ಕುಟುಂಬದಿಂದ ಬಂದವನು ಸರ್ ನನ್ನನ್ನು ಬಿಟ್ಟು ಬಿಡಿ ಎಂದು ಗೋಗರೆದಿದ್ದಾನೆ ಎನ್ನಲಾಗಿದೆ.

ಸದ್ಯ ವಿಷ್ಣುಭಟ್​ನನ್ನು ನಾಲ್ಕು ದಿನ ಕಸ್ಟಡಿಗೆ ಪಡೆದಿರುವ ಪೊಲೀಸರು ಡ್ರಗ್​ ಪೆಡ್ಲರ್​ ಡೇವಿಡ್​ಗಾಗಿ ಬಲೆ ಬೀಸಿದ್ದಾರೆ.

Latest article