ಬೆಂಗಳೂರು: ಯಡಿಯೂರಪ್ಪ, ವಿಶ್ವನಾಥ್ ನನಗಿಂತ ಹಿರಿಯರು. ಅವರು ಸೋತಿದ್ದಾರೆ, ಗೆದ್ದಿದ್ದಾರೆ. ಆದರೆ, ನಾನು ಸೋತವನೇ ಅಲ್ಲ ಎಂದು ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಎಲ್ಲ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ಯಡಿಯೂರಪ್ಪಗೆ 79 ವರ್ಷ ಇರಬೇಕು, ಸಿದ್ದರಾಮಯ್ಯಗೆ 72 ಇರಬಹುದು. ಮೊದಲು ಇದಕ್ಕಿಂತ ಹಿರಿಯರು ಸದನದಲ್ಲಿದ್ದರು. ಸುದೀರ್ಘ 40 ವರ್ಷ ನಾನು ಎಂಎಲ್ಸಿಯಾಗಿದ್ದೇನೆ. ಇಷ್ಟು ದೀರ್ಘಕಾಲ ಯಾರು ಆಗಿಲ್ಲ. ಹಿಂದೆ ಕಾಂಗ್ರೆಸ್ನವರು ಪಕ್ಷಕ್ಕೆ ಕರೆದಿದ್ದರು ಎಂದರು.
ರಾಜೀನಾಮೆಗೆ ಕೆಲವು ತಾಂತ್ರಿಕ ಸಮಸ್ಯೆಗಳಾಗಿವೆ. ಹೀಗಾಗಿ, ಬಿಜೆಪಿ ಸೇರ್ಪಡೆ ಬಗ್ಗೆ ಸಮಯ ನಿಗದಿಯಾಗಿಲ್ಲ. ಕೊನೆಯ ಘಟ್ಟದಲ್ಲಿ ಇಮೇಜ್ ಡ್ಯಾಮೇಜ್ ಎಂಬ ಪ್ರಶ್ನೆಗೆ ಉತ್ತರಿಸಿ, ಅಂತಹ ಸ್ಥಿತಿ ನಿರ್ಮಾಣವಾಗಲ್ಲ. ಜನರು ಹೇಗೆ ಒಪ್ಪುತ್ತಾರೆ ಅದರಂತೆ ಆಗಲಿದೆ. ಎಲ್ಲವೂ ಜನರಿಗೆ ಸೇರಿದೆ. ನನಗೆ ಎಲ್ಲಾ ಕಡೆಯೂ ಉತ್ತಮ ಸ್ನೇಹಿತರಿದ್ದಾರೆ.