Tuesday, May 17, 2022

ಮೂರನೇ ಪೀಠ ಕಟ್ಟೋರು ಮೂರಾಬಟ್ಟೆಯಾಗ್ತಾರೆ: ನಿರಾಣಿ ವಿರುದ್ಧ ಯತ್ನಾಳ್​ ಗುಡುಗು

Must read

ಬೆಂಗಳೂರು: ಮೂರನೇ ಪೀಠ ಕಟ್ಟೋರು ಮೂರಾಬಟ್ಟೆಯಾಗ್ತಾರೆ. ಸ್ವಹಿತಾಸಕ್ತಿಗಾಗಿ ಅವರು ಮಾಡ್ತಿದ್ದಾರೆ. ಇವರು ಏನ್ಮಾಡ್ತಿದ್ದಾರೆ ಎಲ್ಲವೂ ಹೈಕಮಾಂಡ್​ಗೆ ಗೊತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಹೇಳಿಕೆ ನೀಡಿದ್ದಾರೆ.

ನಿರಾಣಿ ಮೂರನೇ ಪೀಠ ಕಟ್ಟುವ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜ ಒಡೆಯುವವರು ಯಾರೂ ಉಳಿಯಲ್ಲ. ಸಿದ್ದರಾಮಯ್ಯ, ಎಂಬಿಪಿ ಲಿಂಗಾಯತರನ್ನು ಒಡೆಯೋಕೆ ಹೋದರು. ಯಾರೇ ಒಡೆಯೋಕೆ ಹೋದರೂ ಅವರು ನಾಶವಾಗ್ತಾರೆ. ನಿರಾಣಿ ಯಾವಾಗ ಸಿಎಂ ಆಗ್ತಾರೆ. ಈಗ ಬಸವರಾಜ ಬೊಮ್ಮಾಯಿ ಸಿಎಂ ಆಗಿಲ್ವೇ, ಅವರು ಎಲ್ಲಿ ಪಾಕಿಸ್ತಾನಕ್ಕೆ ಆಗ್ತಾರಾ ಎಂದು ಮುರುಗೇಶ್​ ನಿರಾಣಿ ವಿರುದ್ಧ ಗುಡುಗಿದ್ದಾರೆ.

ನಿರಾಣಿ ಇರಲಿ, ಗುರಾಣಿ ಇರಲಿ. ದಾಖಲೆಗಳನ್ನ ಬಹಿರಂಗ ಪಡಿಸಲಿ. ಎಷ್ಟು ಮಂದಿ ಸಿಎಂ ಆಗ್ತೇನೆ ಅಂತ ಹೋದ್ರು. ನಿರಾಣಿಯವರಿಗೆ ಪ್ಲಸ್ ಎಲ್ಲೂ ಇಲ್ಲ, ಎಲ್ಲವೂ ಮೈನಸ್​. ಭ್ರಷ್ಟಾಚಾರದ ಬಗ್ಗೆ ನಾನು ಮಾತನಾಡ್ತೇನೆ. ಯಾರೂ ಅದನ್ನ ತಡೆಯೋಕೆ ಆಗಲ್ಲ ಎಂದರು. ವಿಜಯೇಂದ್ರ ಮಂತ್ರಿಯಾಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರೆಲ್ಲಾ ಕೋಟ್ ಹೊಲಿಸಿಕೊಂಡಿದ್ದಾರೋ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ಅವೆಲ್ಲ ಆಗಲ್ಲ. ನನ್ನನ್ನ ಹುಲಿನೂ ಅನ್ಬೇಡಿ, ನಾಲಿಗೆ ಹರಿಬಿಟ್ಟ ಯತ್ನಾಳ್ ಅನ್ನಬೇಡಿ. ಹಣೆಬರಹವಿದ್ರೆ ಮುಂದೆ ಸಿಎಂ ಆಗ್ತೇನೆ. ಇಲ್ಲ ಅಂದ್ರೆ ನಿಮ್ಮ ಜೊತೆ ಬಾಯಿ ಬಡಿದುಕೊಂಡೇ ಹೋಗ್ತೇನೆ ಎಂದರು.

Latest article