Thursday, October 6, 2022

ಬೆಂಗಳೂರು ನಗರ ಬಿಜೆಪಿ ಅಭ್ಯರ್ಥಿ ಗೋಪಿನಾಥ್ ರೆಡ್ಡಿ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

Must read

ಬೆಂಗಳೂರು: ಬೆಂಗಳೂರು ನಗರ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಬಿಜೆಪಿ ಅಭ್ಯರ್ಥಿ ಗೋಪಿನಾಥ್ ರೆಡ್ಡಿ ತಮ್ಮ ಆಸ್ತಿ ಘೊಷಣೆ ಮಾಡಿದ್ದಾರೆ. 34.68 ಕೋಟಿ ರೂ. ಸ್ಥಿರಾಸ್ತಿ ಹಾಗೂ 1.95 ಕೋಟಿ ರೂ.ಮೌಲ್ಯದ ಚರಾಸ್ತಿಯನ್ನು ಅವರು ಹೊಂದಿದ್ದಾರೆ‌.

ಗೋಪಿನಾಥ್ ರೆಡ್ಡಿ ಪ್ರಸಕ್ತ ವರ್ಷದ ವಾರ್ಷಿಕ ಆದಾಯ 44,660 ರೂಪಾಯಿಯಾಗಿದೆ. ಪತ್ನಿ ಎಸ್.ಕೆ.ಗಾಯತ್ರಿ ವಾರ್ಷಿಕ‌ ಆದಾಯ 13,26,870 ರೂಪಾಯಿಯಾಗಿದೆ. ಕೈಯಲ್ಲಿರುವ ನಗದು 3.25 ಲಕ್ಷ ರೂ.ಗಳಾಗಿದ್ದು, ಗೋಪಿನಾಥ್ ರೆಡ್ಡಿ ಬ್ಯಾಂಕ್ ಖಾತೆಯಲ್ಲಿ 39,66,563 ರೂ. ಹಣವಿದೆ. ಪತ್ನಿ ಬ್ಯಾಂಕ್ ಖಾತೆಯಲ್ಲಿ 26,61,266 ರೂ. ಹಣವಿದೆ. ಅವಿಭಜಿತ ಕುಟುಂಬದ ಹೆಸರಿನಲ್ಲಿ 98,84,663 ರೂ. ಬ್ಯಾಂಕ್​ನಲ್ಲಿದೆ. 82.50 ಲಕ್ಷ ರೂ. ಸಾಲವಿದೆ ಎಂದು ತೋರಿಸಿರುವ ಗೋಪಿನಾಥ್, ಪತ್ನಿಯ ಹೆಸರಿನಲ್ಲಿ 1.29 ಕೋಟಿ ರೂ. ಸಾಲ ತೋರಿಸಿದ್ದಾರೆ. ಕುಟುಂಬದ ಹೆಸರಿನಲ್ಲಿ 39.90 ಲಕ್ಷ ರೂ. ಸಾಲವಿದೆ.

ಒಟ್ಟು 43 ಲಕ್ಷ ರೂ. ಮೌಲ್ಯದ ಮೂರು ವಾಹನಗಳಿದ್ದು, ಒಂದು ಕಿಯಾ ಕಾರ್ನಿವಲ್ ಕಾರು, ಎರಡು ಟ್ರ್ಯಾಕ್ಟರ್​ಗಳನ್ನು ಹೊಂದಿದ್ದಾರೆ. ತಮ್ಮ ಬಳಿ 23.85 ಲಕ್ಷ ರೂ. ಮೊತ್ತದ 530 ಗ್ರಾಂ ಚಿನ್ನ, 13 ಸಾವಿರ ಮೌಲ್ಯದ 230 ಗ್ರಾಂ ಬೆಳ್ಳಿ, ಪತ್ನಿ ಬಳಿ 47.25 ಲಕ್ಷ ಮೌಲ್ಯದ 1050 ಗ್ರಾಂ ಚಿನ್ನ, 6.70 ಲಕ್ಷ ಮೌಲ್ಯದ 10 ಕೆಜಿ ಬೆಳ್ಳಿ ಇದೆ ಎಂದು ಮಾಹಿತಿ ನೀಡಿದ್ದಾರೆ.

ಗೋಪಿನಾಥ್ ರೆಡ್ಡಿ‌ ಬಳಿಯಿರುವ ಒಟ್ಟು ಚರಾಸ್ತಿ ಮೌಲ್ಯ 1.95 ಕೋಟಿ ರೂ.ಗಳಷ್ಟಿದ್ದು, ಪತ್ನಿ ಬಳಿ 2.11 ಕೋಟಿ ರೂ. ಚರಾಸ್ತಿಯಿದೆ. ಒಟ್ಟು 34.68 ಕೋಟಿ ರೂ. ಸ್ಥಿರಾಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.

Latest article