ಬೆಂಗಳೂರಿನಲ್ಲಿ ಕಿಡ್ನಿ ಮಾರಾಟ ದಂಧೆ: ನೈಜೀರಿಯಾ ಪ್ರಜೆ ಅರೆಸ್ಟ್​

ಸಾಮಾಜಿಕ ಜಾಲತಾಣದಲ್ಲಿ ಕಿಡ್ನಿ ಮಾರಾಟದ ಜಾಹಿರಾತು ನೀಡ್ತಿದ್ದ ಆರೋಪಿ
ಬೆಂಗಳೂರಿನಲ್ಲಿ ಕಿಡ್ನಿ ಮಾರಾಟ ದಂಧೆ: ನೈಜೀರಿಯಾ ಪ್ರಜೆ ಅರೆಸ್ಟ್​

ಬೆಂಗಳೂರು: ಕಿಡ್ನಿ ಮಾರಾಟ ದಂಧೆಯಲ್ಲಿ ತೊಡಗಿಕೊಂಡಿದ್ದ ನೈಜೀರಿಯಾ ಪ್ರಜೆಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಡ್ನೂಡಿಮ್ ಓಬಿನ್ನಾ ಕಿಂಗ್ ಲೈ ಬಂಧಿತ ಆರೋಪಿ.

ಆರೋಪಿ ವ್ಯಾಪಾರ ವೀಸಾದ ಅಡಿ ಭಾರತಕ್ಕೆ ಬಂದಿದ್ದು, ಕಿಡ್ನಿ ಮಾರಾಟ ಮತ್ತು ಖರೀದಿ ಮಾಡುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ನೀಡುತ್ತಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೇ ಈತನೊಂದಿಗೆ ವ್ಯವಹಾರಕ್ಕೆ ಬಂದಿರುವವರ ಬಳಿ ವೈದ್ಯಕೀಯ ಪರೀಕ್ಷೆಯ ನೆಪದಲ್ಲಿ ಮುಂಗಡ ಹಣ ಪಡೆದು ವಂಚನೆ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಾಗಲೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯಿಂದ ಮೂರು ಲ್ಯಾಪ್ ಟಾಪ್, ಹತ್ತು ಮೊಬೈಲ್, ಹಾಗೂ ಹಾರ್ಡ್ ಡಿಸ್ಕ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲು ಮಾಡಿರುವ ಬಾಗಲೂರು ಪೊಲೀಸರು ತನಿಖೆ ಮುಂದುವರೆಸಿದ್ದಾರೆ

Related Stories

No stories found.
TV 5 Kannada
tv5kannada.com