Thursday, October 6, 2022

ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ: ರಾಜ್ಯಕ್ಕೆ ಹೆಮ್ಮೆ ತಂದ ಯುವಕನಿಗೆ ಸಚಿವರ ಅಭಿನಂದನೆ

Must read

ಬಾಗಲಕೋಟೆ: ಪ್ರತಿಷ್ಠಿತ ನೀಟ್ ಪರೀಕ್ಷೆಯಲ್ಲಿ ಬಾಗಲಕೋಟೆಯ ಯುವಕ ದೇಶದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರನ್ನ ಬೆಳಗಲಿ ಗ್ರಾಮದ ಚಿದಾನಂದ ಕುಂಬಾರ ನೀಟ್ ಪರೀಕ್ಷೆಯ ಮೆಡಿಕಲ್ ವಿಭಾಗದಲ್ಲಿ ಸಾಧನೆ ಮಾಡಿ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಸಚಿವ ಗೋವಿಂದ ಕಾರಜೋಳ ತಮ್ಮ ಕ್ಷೇತ್ರದ ಯುವಕನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಾವೇ ಸ್ವತಃ ಕರೆ ಮಾಡಿ ಅಭಿನಂದಿಸಿದ್ದಾರೆ.

ಚಿದಾನಂದ ಕುಂಬಾರ ಅವರ ಸಾಧನೆಯಿಂದ ಸಂಪೂರ್ಣ ರನ್ನ ಬೆಳಗಲಿ ಗ್ರಾಮದಲ್ಲಿ ಸಂತಸ ಮನೆ ಮಾಡಿದ್ದು, ಗ್ರಾಮಸ್ಥರು ಯುವಕನಿಗೆ ಅಭಿನಂದನೆ ತಿಳಿಸಿ ಸಂಭ್ರಮಿಸಿದ್ದಾರೆ.

Latest article