Thursday, January 20, 2022

ಇನ್ಸೂರೆನ್ಸ್‌, ರಿಯಲ್ ಎಸ್ಟೇಟ್ ಫೈನಾನ್ಸ್ ಕಂಪನಿಗಳಿಗೆ ವಂಚಿಸುತ್ತಿದ್ದ ಆರೋಪಿ ಅರೆಸ್ಟ್​

Must read

ಬೆಂಗಳೂರು: ಇನ್ಸೂರೆನ್ಸ್‌, ರಿಯಲ್ ಎಸ್ಟೇಟ್ ಫೈನಾನ್ಸ್ ಕಂಪನಿಗಳಿಗೆ ಗ್ರಾಹಕರ ಲೀಡ್ಸ್ ನೀಡುವುದಾಗಿ ವಂಚಿಸುತ್ತಿದ್ದ ಆರೋಪಿಯನ್ನು ಸಿಸಿಬಿಯ ಸೈಬರ್ ಕ್ರೈಂ ಬ್ರಾಂಚ್​ನ ಪೊಲೀಸರು ಬಂಧಿಸಿದ್ದಾರೆ.

ನಿಶ್ಚಿತ್ ಸಿ.ಎಸ್ ಬಂಧಿತ ಆರೋಪಿ. ಸ್ಟಾಕ್ ಮ್ಯಾನೇಜ್ಮೆಂಟ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಹೊಂದಿದ್ದ ಆರೋಪಿ, ಇಮೇಲ್ ಮೂಲಕ ಇನ್ಸೂರೆನ್ಸ್‌, ರಿಯಲ್ ಎಸ್ಟೇಟ್ ಫೈನಾನ್ಸ್ ಕಂಪನಿಗಳನ್ನು ಸಂಪರ್ಕಿಸುತ್ತಿದ್ದ. ಬಳಿಕ ಇನ್ಫೋಸಿಸ್ ಕಂಪನಿ ಹೆಚ್.ಆರ್ ಹೆಸರಿನಲ್ಲಿ ಗ್ರಾಹಕರ ಲೀಡ್ಸ್ ಕೊಡುವುದಾಗಿ ಆಫರ್ ನೀಡುತ್ತಿದ್ದ.

ಬಳಿಕ ಹಂತ ಹಂತವಾಗಿ ಹಣ ಪಡೆದು ಲೀಡ್ಸ್ ನೀಡದೆ ವಂಚಿಸುತ್ತಿದ್ದ. ಈತನ ವಿರುದ್ಧ ವೈನಾಡು, ಮಲ್ಲೇಶ್ವರಂ, ಕೋರಮಂಗಲದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.

Latest article