Tuesday, October 26, 2021

ಬೆಂಗಳೂರಿನಲ್ಲಿ ಮನೆಗಳ್ಳತನ ಮಾಡುತ್ತಿದ್ದ ದಂಪತಿ ಅರೆಸ್ಟ್​

Must read

ಬೆಂಗಳೂರು: ಬಾಡಿಗೆ ಮನೆ ಕೇಳುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ದಂಪತಿಯನ್ನು ಆರ್​.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.

ಪತ್ನಿ ಹಗಲಿನ ಸಮಯದಲ್ಲಿ ಬಾಡಿಗೆ ಮನೆ ಕೇಳುವ ನೆಪದಲ್ಲಿ ಕಳ್ಳತನ ಮಾಡಲು ಮನೆಗಳನ್ನು ಹುಡುಕುತ್ತಿದ್ದಳು. ಈ ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಟ್ಟುಕೊಂಡು ಬರುತ್ತಿದ್ದಳು. ರಾತ್ರಿ ವೇಳೆ ಪತಿಯೊಂದಿಗೆ ತೆರಳಿ ಮನೆಗೆ ಕನ್ನ ಹಾಕುತ್ತಿದ್ದರು. ಪತಿ ಮನೆಯೊಳಗಡೆ ಇರುವ ಹಣ, ಚಿನ್ನ ದೋಚಿದ್ರೆ, ಪತ್ನಿ ಮನೆಯಾಚೆ ನಿಂತು ಕಾಯುತ್ತಿದ್ದಳು.

ಇದೇ ರೀತಿ ಕಳ್ಳತನ ಮಾಡಿ, ದಂಪತಿ ಈ ಹಿಂದೆ‌ ಜೈಲು ‌ಸೇರಿದ್ದರು. ಜಾಮೀನಿನ ಮೇಲೆ ಹೊರಬಂದು‌ ಮತ್ತೆ ಕಳ್ಳತನಕ್ಕಿಳಿದಿದ್ದರು. ಅನ್ನಪೂರ್ಣೇಶ್ವರಿ ನಗರ, ಡಿಜೆ ಹಳ್ಳಿ, ಅಶೋಕ್ ನಗರ ಸೇರಿ ನಗರದ ಹಲವೆಡೆ ಕಳ್ಳತನ‌ ಮಾಡಿದ್ದರು. 2019ರಲ್ಲಿ ಮಲ್ಲೇಶ್ವರಂನಲ್ಲಿಯೂ ಕಳ್ಳತನ ಮಾಡಿದ್ದರು.

ಈ ವೇಳೆ ಬೆರಳಚ್ಚು ತಜ್ಞರೊಬ್ಬರು ಈ ಬಗ್ಗೆ ಪೊಲೀಸರಿಗೆ ಸುಳಿವು ನೀಡಿದ್ದರು. ಇದೇ ಮಾದರಿಯ ಕೃತ್ಯ ಆರ್.ಟಿ ನಗರದಲ್ಲೂ ಕಂಡುಬಂದ ಹಿನ್ನಲೆ, ಮತ್ತೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಸುಳಿವಿನ ಆಧಾರ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.

More articles

Latest article