Tuesday, August 16, 2022

ಜೆಡಿಎಸ್​ಗೆ ಗುಡ್​ ಬೈ ಹೇಳಿದ ಅಗಿಲೆ ಯೋಗೇಶ್: ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ

Must read

ಬೆಂಗಳೂರು: ಜೆಡಿಎಸ್ ನಾಯಕ ಅಗಿಲೆ ಯೋಗೇಶ್ ಪಕ್ಷಕ್ಕೆ ಗುಡ್ ಬೈ ಹೇಳಿ, ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಶಾಸಕ ಪ್ರೀತಂಗೌಡ ವಿರುದ್ಧ ತಿರುಗಿ ಬಿದ್ದಿದ್ದ ಯೋಗೇಶ್, ಇಂದು ಪಕ್ಷದ ಕಚೇರಿಯಲ್ಲಿ ಆಪ್ ಸೇರ್ಪಡೆಯಾಗಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮೂರು ಪಕ್ಷಗಳು ಭ್ರಷ್ಟಚಾರ ರಹಿತವಾಗಿಲ್ಲ. ಭ್ರಷ್ಟಚಾರ ರಹಿತ ಆಡಳಿತ ನೀಡುವಲ್ಲಿ ವಿಫಲವಾಗಿವೆ. ಹಾಸನ ಜಿಲ್ಲೆಯ ಜನರ ಅಶೋತ್ತರ ಈಡೇರಿಸಬೇಕು. ಆಪ್ ಪಾರದರ್ಶಕ ಆಡಳಿತ ನೀಡಲಿದೆ.

ನಾನು ಹಿಂದಿನಿಂದಲೂ ನೋಡಿದ್ದೇವೆ. ಹಜಾರೆ, ಕೇಜ್ರಿವಾಲರನ್ನು ಗಮನಿಸಿದ್ದೇನೆ. ಹಾಗಾಗಿ, ಇಂದು ಪಕ್ಷ ಸೇರಿದ್ದೇನೆ. ಹಾಸನದಲ್ಲಿ ಪಕ್ಷವನ್ನ ಸಂಘಟಿಸುತ್ತೇನೆ ಎಂದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ ಬಳಿಕ ತಿಳಿಸಿದರು.

Latest article