Friday, January 21, 2022

ವೀಕೆಂಡ್​​ ಕರ್ಫ್ಯೂ ಮಧ್ಯೆ ಪುಂಡರ ಅಟ್ಟಹಾಸ: ಕಾರಿನ ಗ್ಲಾಸ್​​​ ಒಡೆದು ವಿಕೃತಿ

Must read

ಬೆಂಗಳೂರು: ವೀಕೆಂಡ್​​ ಕರ್ಫ್ಯೂ ನಡುವೆಯೂ ಪುಂಡರು ಅಟ್ಟಹಾಸ ಮೆರೆದಿರುವ ಘಟನೆ ಅಶೋಕ ನಗರದ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪುಂಡರ ಗ್ಯಾಂಗ್​ ಗಾಂಜಾ ಮತ್ತಿನಲ್ಲಿ ಕಳೆದ ಮೂರು ದಿನಗಳಿಂದ ಸುತ್ತಮುತ್ತಲಿನ ಜನರಿಗೆ ತೊಂದರೆ ಕೊಡುತ್ತಿದ್ದು, ನಶೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜನ್ನು ಪುಡಿ ಪುಡಿ ಮಾಡಿದ್ದಾರೆ.

ಪುಂಡರ ಕಿಡಿಗೇಡಿತನ ಕೃತ್ಯದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆರೋಪಿಗಳ ವಿರುದ್ಧ ಕಾರು ಮಾಲೀಕರು ಅಶೋಕ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪುಂಡರಿಗಾಗಿ ಬಲೆ ಬೀಸಿದ್ದಾರೆ.

Latest article