Thursday, May 19, 2022

ಮ್ಯಾಟ್ರಿಮೋನಿಯಲ್ಲಿ ಸ್ನೇಹ ಬೆಳೆಸುವ ಮುನ್ನ ಹುಷಾರ್​: ಯುವತಿಗೆ ಬ್ಲಾಕ್​ಮೇಲ್​ ಮಾಡುತ್ತಿದ್ದ ಆರೋಪಿ ಅರೆಸ್ಟ್​​..!

Must read

ಬೆಂಗಳೂರು: ಯುವತಿಯ ಖಾಸಗಿ ಫೋಟೋಗಳನ್ನು ಬಳಸಿಕೊಂಡು ಬ್ಲಾಕ್​ಮೇಲ್​ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಕುಮಾರ್ ಬಂಧಿತ ಆರೋಪಿ.

ವಿಜಯಕುಮಾರ್ ಕನ್ನಡ ಮ್ಯಾಟ್ರಿಮೋನಿಯಲ್ಲಿ ತನ್ನ ಪ್ರೊಫೈಲ್ ಕ್ರಿಯೇಟ್ ಮಾಡಿಕೊಂಡು ಸಂತ್ರಸ್ತ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ನಂತರ ಇಬ್ಬರು ಆಗಾಗ ಭೇಟಿಯಾಗಿದ್ದು, ಮದುವೆಯಾಗುವುದಾಗಿ ಭರವಸೆ ನೀಡಿದ ಕಾರಣ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಅಲ್ಲದೇ ಆರೋಪಿ ಯುವತಿಯ ಜೊತೆ ಒಂದಿಷ್ಟು ಖಾಸಗಿ ಪೋಟೋಗಳನನ್ನು ತೆಗೆಸಿಕೊಂಡಿದ್ದನ್ನು. ಅಲ್ಲಿಂದ ತನ್ನ ಅಸಲಿ ಆಟ ಶುರುಮಾಡಿದ ವಿಜಯ್ ಕುಮಾರ್, 50,000 ರೂಪಾಯಿ ಕೊಡದಿದ್ದಲ್ಲಿ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಯುವತಿಗೆ ಬೆದರಿಕೆ ಹಾಕಿದ್ದಾನೆ. ಬಳಿಕ ಹಣ ನೀಡದೇ ಇದ್ದಾಗ  ನಕಲಿ ಇನ್ಸ್ಟಾಗ್ರಾಮ್​​ ಖಾತೆ ತೆರೆದು ಖಾಸಗಿ ಫೊಟೋಗಳನ್ನು ಅಪ್ಲೋಡ್ ಮಾಡಿ ಯುವತಿಯ ಕುಟುಂಬಸ್ಥರಿಗೆ ಹಾಗೂ ಸ್ನೇಹಿತರಿಗೆ ಕಳುಹಿಸಿದ್ದಾನೆ. ನಂತರ ಹಣ ನೀಡಿದ ಬಳಿಕ ಫೋಟೋ ಡಿಲೀಟ್ ಮಾಡಿದ್ದಾನೆ.

ಅಷ್ಟಕ್ಕೇ ಸುಮ್ಮನಾಗದ ಆರೋಪಿ ಮತ್ತೆ ಹಣಕ್ಕಾಗಿ ಬ್ಲಾಕ್​ಮೇಲ್​ ಮಾಡಿದ್ದು, ವಿಜಯ್​​ ವಿರುದ್ಧ ಸಂತ್ರಸ್ತ ಯುವತಿ ಈಶಾನ್ಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಆರೋಪಿ ವಿಜಯ್ ಕುಮಾರ್​​ನನ್ನು ಪೊಲೀಸರು ಬಂಧಿಸಿದ್ದಾರೆ.

Latest article