Tuesday, October 26, 2021

ರಾಜಸ್ತಾನದಿಂದ ಹೆರಾಯಿನ್ ತಂದು ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

Must read

ಬೆಂಗಳೂರು: ರಾಜಸ್ತಾನದಿಂದ ಹೆರಾಯಿನ್ ತಂದು ನಗರದ ಹೊರವಲಯದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.

ರಾಜಸ್ತಾನದ ಜಲೋರ್ ಜಿಲ್ಲೆಯ ದಾವಲ್‌ ಗ್ರಾಮದವನಾದ ಆರೋಪಿ, ಕಳೆದ ಒಂದು ವರ್ಷದ ಹಿಂದೆ ಹೆಬ್ಬಗೋಡಿಯ ಬೊಮ್ಮಸಂದ್ರದಲ್ಲಿ ವಾಸವಾಗಿದ್ದ. ಅಕ್ರಮ ಹಣ ಸಂಪಾದನೆಗಾಗಿ ಡ್ರಗ್ಸ್ ದಂಧೆಕೋರರ ಜೊತೆ ಸಂಪರ್ಕ ಹೊಂದಿದ್ದ ಆರೋಪಿ, ಮನೆಯಲ್ಲಿ ಸಣ್ಣ ಹೆರಾಯಿನ್ ಪ್ಯಾಕೇಟ್​ಗಳನ್ನು ಮಾಡಿ ಮಾರಾಟ ಮಾಡುತ್ತಿದ್ದ.

ಸದ್ಯ ಬಂಧಿತನಿಂದ 35 ಲಕ್ಷ ಮೌಲ್ಯದ 440 ಹೆರಾಯಿನ್, ಬೈಕ್ ಹಾಗೂ ಮೊಬೈಲ್​ ಜಪ್ತಿ ಮಾಡಕೊಳ್ಳಲಾಗಿದೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

More articles

Latest article