Thursday, January 20, 2022

ವೀಕೆಂಡ್​ ಕರ್ಫ್ಯೂ ನಿರ್ಲಕ್ಷಿಸುವವರೇ ಎಚ್ಚರ: ಒಂದೇ ದಿನ 944 ವಾಹನ ಸೀಜ್​..!

Must read

ಬೆಂಗಳೂರು: ಕೊರೊನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಾದ್ಯಂತ ವೀಕೆಂಡ್​ ಕರ್ಫ್ಯೂ ಜಾರಿ ಮಾಡಿದ್ದು, ಶುಕ್ರವಾರ ರಾತ್ರಿ 10 ಗಂಟೆಗೆ ಆರಂಭವಾದ ವೀಕೆಂಡ್​ ಕರ್ಫ್ಯೂ ಇಂದು ಬೆಳಗ್ಗೆ 5ಗಂಟೆಗೆ ಅಂತ್ಯವಾಗಿದೆ.

ಕರ್ಫ್ಯೂ ಅವಧಿಯಲ್ಲಿ ಅನಗತ್ಯವಾಗಿ ಓಡಾಡಿದ ಸಾರ್ವಜನಿಕರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದು, ಅನಾವಶ್ಯಕ ಓಡಾಟ ನಡೆಸಿದ ವಾಹನಗಳನ್ನು ಸೀಜ್​ ಮಾಡಿದ್ದಾರೆ.

ಭಾನುವಾರ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿದ್ದರು ಕೂಡ ಯಾವುದೇ ತುರ್ತು ಕಾರ್ಯ ಇಲ್ಲದೇ ರಸ್ತೆಗಿಳಿದಿದ್ದ 944 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅನಗತ್ಯ ಓಡಾಟ ಹಾಗೂ ಸೂಕ್ತ ದಾಖಲೆಗಳಿಲ್ಲದ ಆರೋಪದ ಮೇಲೆ ಎನ್​​ಡಿಎಂಎ ಆ್ಯಕ್ಟ್​​ ಅಡಿಯಲ್ಲಿ 864 ದ್ವಿಚಕ್ರವಾಹನಗಳು ಸೇರಿದಂತೆ ಒಟ್ಟು 944 ವಾಹನಗಳನ್ನು ಪೊಲೀಸರು ಸೀಜ್​ ಮಾಡಿದ್ದಾರೆ.

Latest article