Tuesday, May 17, 2022

ಕೃಷಿ ಇಲಾಖೆ ಜಂಟಿ ನಿರ್ದೇಶಕನ ಮನೆಯಲ್ಲಿ ಸಿಕ್ತು 3 ಕೋಟಿ ಮೌಲ್ಯದ 7 ಕೆಜಿ ಚಿನ್ನದ ಗಟ್ಟಿ

Must read

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ 15 ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಎಸಿಬಿ ದಾಳಿ ವೇಳೆ ಗದಗದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರ ಮನೆಯಲ್ಲಿ ಚಿನ್ನದ ಗಟ್ಟಿ ಸಿಕ್ಕಿದೆ. ಮೂರು ಕೋಟಿ ಮೌಲ್ಯದ 7 ಕೆಜಿ ಚಿನ್ನದ ಗಟ್ಟಿ ಪತ್ತೆಯಾಗಿದ್ದು, ಅಧಿಕಾರಿಗಳೇ ಬಿಚ್ಚಿಬಿದ್ದಿದ್ದಾರೆ. ಇದರ ಜೊತೆಗೆ ಹಲವು ಚಿನ್ನದ ಆಭರಣಗಳು ಹಾಗೂ 15 ‌ಲಕ್ಷ ನಗದು ಕೂಡ ಪತ್ತೆಯಾಗಿದೆ.

ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಿದ್ದು, ಕರ್ನಾಟಕದಾದ್ಯಂತ ಒಟ್ಟು 60 ಕಡೆ ದಾಳಿ ನಡೆಸಿದ್ದಾರೆ. 8 ಎಸ್​ಪಿಗಳು ಹಾಗೂ 100 ಜನ ಅಧಿಕಾರಿಗಳು ಸೇರಿ ಒಟ್ಟು 300 ಸಿಬ್ಬಂದಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

 

Latest article