Monday, January 24, 2022

ಕಸಾಯಿ ಖಾನೆಗೆ ಸಾಗಿಸುತ್ತಿದ್ದ 28 ಹಸು, ಎಮ್ಮೆ ರಕ್ಷಣೆ..!

Must read

ಬೆಂಗಳೂರು: ಕಸಾಯಿ ಖಾನೆಗೆ ಸಾಗಿಸುತ್ತಿದ್ದ 28 ಹಸು, ಎಮ್ಮೆಗಳನ್ನು ಕೆಂಗೇರಿ ಪೊಲೀಸರು ರಕ್ಷಣೆ ಮಾಡಿದ್ದಾರೆ.

ಒಟ್ಟು 29 ಹಸು ಹಾಗೂ ಎಮ್ಮೆಗಳನ್ನು ಟ್ರಕ್​​​ ಮೂಲಕ ಮಂಡ್ಯದಿಂದ ತಮಿಳುನಾಡಿನ ಕೃಷ್ಣಗಿರಿ ಕಸಾಯಿ ಖಾನೆಗೆ ಸಾಗಿಸಲಾಗುತ್ತಿತ್ತು. ಅದರಲ್ಲಿ ಒಂದು ಹಸು ಟ್ರಕ್​ನಲ್ಲಿಯೇ ಮೃತಪಟ್ಟಿತ್ತು.

ಉಳಿದ 28 ಹಸು, ಎಮ್ಮೆಗಳನ್ನು ರಕ್ಷಿಸಿ ಪೊಲೀಸರು ಗೋಶಾಲೆಗೆ ಬಿಟ್ಟು ಬಂದಿದ್ದಾರೆ. ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Latest article