ಬೆಂಗಳೂರು: ಡ್ರಗ್ಸ್ ದಂಧೆಯಲ್ಲಿ ಪೊಲೀಸರೇ ಭಾಗಿಯಾದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.
ಪ್ರಕರಣದ ಆರೋಪಿಗಳಾದ ಸಂತೋಷ್ ಮತ್ತು ಶಿವಕುಮಾರ್ ವಿರುದ್ಧ ಕೋರಮಂಗಲ ಇನ್ಸ್ಪೆಕ್ಟರ್ ಬಿ.ಕೆ ರವಿ ಮೊದಲೇ ಡಿಸಿಪಿಗೆ ವರದಿ ನೀಡಿದ್ದರು ಎನ್ನಲಾಗಿದೆ. ಆದರೆ ಯಾವುದೇ ಕ್ರಮ ತೆಗೆದುಕೊಳ್ಳದ ಡಿಸಿಪಿ ಶ್ರೀನಾಥ್ ಜೋಷಿ ಆರೋಪಿಗಳನ್ನೇ ಸಿಎಂ ನಿವಾಸದ ಭದ್ರತೆಗೆ ನಿಯೋಜನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಈಗಾಗಲೇ ಶೋಕಾಸ್ ನೋಟಿಸ್ ನೀಡಿದ್ದು, ವರದಿ ನೀಡುವಂತೆ ಆದೇಶಿಸಿದ್ದಾರೆ.
ಇನ್ನು ಡ್ರಗ್ಸ್ ಪ್ರಕರಣ ಸಂಬಂಧ ಅರೆಸ್ಟ್ ಆಗಿದ್ದ ಪೊಲೀಸ್ ಸಿಬ್ಬಂದಿ ನಾಲ್ಕೇ ದಿನದಲ್ಲಿ ಜಾಮೀನು ಪಡೆದು ಹೊರ ಬಂದಿದ್ದಾರೆ. ಕಾನ್ಸ್ಟೇಬಲ್ಗಳಿಗೆ ಬಿಡುಗಡೆಯಾಗಲು ಅನುಕೂಲಕರ ಕಾಯ್ದೆ ದಾಖಲಿಸಿರುವ ಅಶ್ವತ್ ಗೌಡ ಮಾರಾಟ ಮಾಡಿದರೂ ಕೂಡ ಡ್ರಗ್ಸ್ ಸೇವನೆ ಎಂದು ಎಫ್ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ಸರಿಯಾದ ತನಿಖೆ ನಡೆಸದೇ ಆರೋಪಿ ಪೊಲೀಸರಿಗೆ ಜಾಮೀನಿಗೆ ದಾರಿ ಮಾಡಿಕೊಟ್ಟ ಕಾರಣ ಸದ್ಯ ಅಶ್ವತ್ ಗೌಡ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.