Tuesday, August 16, 2022

ಹೆಲ್ಮೆಟ್​ ಹಾಕದೇ ರೀಲ್ಸ್ ಮಾಡಿದ್ದ ಟಿಕ್​ಟಾಕ್ ​ಸ್ಟಾರ್​​ಗೆ 17,500 ರೂ. ದಂಡ..!

Must read

ಬೆಂಗಳೂರು: ರೀಲ್ಸ್​ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ಅಪ್​ಲೋಡ್​ ಮಾಡುವವರ ಮೇಲೇ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಅದರಲ್ಲೂ ಬೈಕ್ ರೀಲ್ಸ್ , ವೀಲಿಂಗ್ ಮಾಡುವವರು ಇನ್ಮುಂದೆ ಎಚ್ಚರ ವಹಿಸಬೇಕಾಗಿದೆ.

ಹೆಲ್ಮೆಟ್​ ಹಾಕದೇ ಬೈಕ್ ಬಳಸಿ, ರೀಲ್ಸ್ ಮಾಡಿದರೂ ಕೂಡ ಇನ್ಮುಂದೆ ದಂಡ ಬಿಳಲಿದೆ. ಇದೇ ಕಾರಣಕ್ಕೆ ಬೆಂಗಳೂರಿನ ಖ್ಯಾತ ಟಿಕ್​ಟಾಕ್ ​ಸ್ಟಾರ್​​ ಧನುಗೆ ಸಂಚಾರಿ ಪೊಲೀಸರು ಬರೋಬ್ಬರಿ 17,500 ರೂ. ದಂಡ ವಿಧಿಸಿದ್ದಾರೆ. ಹೆಲ್ಮೆಟ್​ ಹಾಕದೇ ರೀಲ್ಸ್ ಮಾಡಿರುವುದೇ ಈತನಿಗೆ ಸಂಕಷ್ಟ ತಂದೊಡ್ಡಿದೆ. ಟಿಕ್​ಟಾಕ್ ​ಸ್ಟಾರ್​​ ಧನು ಇನ್​ಸ್ಟಾಗ್ರಾಮ್​ನಲ್ಲಿ ಅಪ್​ಲೋಡ್​ ಮಾಡಿರುವ ವಿಡಿಯೋ ಆಧಾರಗಳ ಮೇಲೆ ಹೆಲ್ಮೆಟ್​ ಹಾಕದೇ ಇರುವುದನ್ನು ಗಮನಿಸಿ ದಂಡ ವಿಧಿಸಲಾಗಿದೆ.

ಸಂಚಾರಿ ಪೊಲೀಸರ ಸೋಶಿಯಲ್ ಮೀಡಿಯಾ ಸೆಲ್ ಇನ್​ಸ್ಟಾಗ್ರಾಮ್​ನಲ್ಲಿ ಮಾನಿಟರಿಂಗ್ ಮಾಡುತ್ತಿದ್ದು, ಕಳೆದ ವರ್ಷ ಸೋಶಿಯಲ್ ಮೀಡಿಯಾ ನೋಡಿ ಒಟ್ಟು 44 ಕೇಸ್ ದಾಖಲಾಗಿವೆ. ಕಳೆದ ವಾರದಲ್ಲಿ 40 ವೀಲಿಂಗ್ ಕೇಸ್ ದಾಖಲಿಸಲಾಗಿದೆ.

Latest article