Thursday, January 20, 2022

ಪೊಲೀಸರನ್ನ ಬೆಂಬಿಡದ ಕೊರೊನಾ ಸೋಂಕು: ಒಂದೇ ದಿನ 114 ಸಿಬ್ಬಂದಿಗೆ ಸೋಂಕು

Must read

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ಪೊಲೀಸರಲ್ಲೂ ಸೋಂಕು ವ್ಯಾಪಕವಾಗಿ ಹರಡುತ್ತಿದೆ.

ನಗರದಲ್ಲಿ ಈ ವರೆಗೆ 618 ಜನ ಪೊಲೀಸರಿಗೆ ಸೊಂಕು ದೃಢಪಟ್ಟಿದ್ದು, ಇಂದು ಒಂದೇ ದಿನ 114 ಮಂದಿ ಪೊಲೀಸರಿಗೆ ಸೋಂಕು ಕಾಣಿಸಿಕೊಂಡಿದೆ.ಈ‌ವರೆಗೆ ಕೇವಲ 36 ಜನ ಸಿಬ್ಬಂದಿ ಮಾತ್ರ ಕೋವಿಡ್ ನಿಂದ ಗುಣಮುಖರಾಗಿದ್ದು, 23 ಜನ ಪೊಲೀಸರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

618 ಪೊಲೀಸರಲ್ಲಿ ಓರ್ವ ಸಿಬ್ಬಂದಿ ಮಾತ್ರ ಕೊರೊನಾ ಲಸಿಕೆ ತೆಗೆದುಕೊಳ್ಳದೇ ಇರುವುದು ಪತ್ತೆಯಾಗಿದೆ. ಇನ್ನು ವಾಹನ ತಪಾಸಣೆ ಮತ್ತು ಮಾಸ್ಕ್ ಫೈನ್ ಹಾಕುವ ಸಿಬ್ಬಂದಿಗೆ ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೀಡುಮಾಡಿದೆ.

Latest article