Wednesday, May 18, 2022

ನಾಳೆಯಿಂದ ಲಾಕ್​ಡೌನ್​ ಸಡಿಲಿಕೆ ಏನಿರುತ್ತೆ..? ಏನಿರಲ್ಲ..?

Must read

ಬೆಂಗಳೂರು: ನಾಳೆಯಿಂದ ರಾಜ್ಯದ 19 ಜಿಲ್ಲೆಗಳಲ್ಲಿ ಲಾಕ್​ಡೌನ್​ ಸಡಿಲಿಕೆಯಾಗಲಿದ್ದು, ಇನ್ನುಳಿದ 11 ಜಿಲ್ಲೆಗಳಲ್ಲಿ ಜೂನ್​ 21ರ ವರೆಗೆ ಲಾಕ್​ಡೌನ್​ ಮುಂದುವರಿಯಲಿದೆ.

ಬೆಂಗಳೂರು ಸೇರಿದಂತೆ ‌19 ಜಿಲ್ಲೆಗಳಿಗೆ ನಾಳೆಯಿಂದ ಏನಿರುತ್ತೆ ಏನಿರಲ್ಲ..?

ಎಲ್ಲ ಕಾರ್ಖಾನೆಗಳು ಶೇ.50 ಸಿಬ್ಬಂದಿಯೊಂದಿಗೆ ಕೆಲಸ ಮಾಡಬಹುದು.

ಗಾರ್ಮೆಂಟ್ಸ್ ಶೇ. 30 ಹಾಜರಾತಿಯೊಂದಿಗೆ ಓಪನ್.

ಆಹಾರ, ದಿನಸಿ, ಹಣ್ಣು, ತರಕಾರಿ, ಮಾಂಸ, ಮೀನು, ಡೈರಿ ಪ್ರಾಡೆಕ್ಟ್​ಗಳ ಅಂಗಡಿಗಳು ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ವಹಿವಾಟು ನಡೆಸಬಹುದು.

ಸಿಮೆಂಟ್ , ಸ್ಟೀಲ್ ಅಂಗಡಿ ತೆರೆಯಲು ಅವಕಾಶ.

ಪಾರ್ಕ್​ಗಳು ಬೆಳಗ್ಗೆ 5ರಿಂದ ರವೆರೆಗೆ 10 ಓಪನ್ 

ಹೋಟೆಲ್​ಗಳಲ್ಲಿ ಪಾರ್ಸೆಲ್​ಗೆ ಅವಕಾಶ

ಆಟೋ ಟ್ಯಾಕ್ಸಿಯಲ್ಲಿ ಇಬ್ಬರ ಪ್ರಯಾಣಕ್ಕೆ ಅವಕಾಶ

ಅರ್ಧದಷ್ಟು ಸಿಬ್ಬಂದಿಯೊಂದಿಗೆ ಕೃಷಿ, ಲೋಕೋಪಯೋಗಿ, ವಸತಿ, ಆರ್‌ ಟಿಒ, ಸಹಕಾರ, ನಬಾರ್ಡ್, ಕಂದಾಯ ಇಲಾಖೆ ಕೆಲಸ ಮಾಡಲು ಅವಕಾಶ.

ಆರೋಗ್ಯ ಕಾರ್ಯಕರ್ತರಿಗೆ ಕೌಶಲ್ಯ ತರಬೇತಿ ನೀಡಲು ಅವಕಾಶ

ಕನ್ನಡಕದ ಅಂಗಡಿಗಳು ತೆರೆಯಲು ಅವಕಾಶ

ಅಂತರಾಜ್ಯ ಮತ್ತು ಅಂತರ್ ಜಿಲ್ಲೆ ಓಡಾಟಕ್ಕೆ ಅವಕಾಶ

ಮದುವೆಗಳಲ್ಲಿ 40 ಜನರಿಗೆ ಮಾತ್ರ ಭಾಗಿಯಾಗಲು ಅವಕಾಶ

ಅಂತ್ಯಕ್ರಿಯೆಗೆ 5 ಜನರಿಗೆ ಮಾತ್ರ ಅವಕಾಶ

ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರಕ್ಕೆ ನಿರ್ಬಂಧ

ಮೆಟ್ರೋ ಸಂಚಾರ ಬಂದ್​

ಅಗತ್ಯ ಪರಿಸ್ಥಿತಿ ಹೊರತುಪಡಿಸಿ ವಾರಾಂತ್ಯದ ವೇಳೆ ಅನಗತ್ಯ ಓಡಾಟಕ್ಕೆ ಅವಕಾಶ ಇಲ್ಲ

ರಾತ್ರಿ ಪಾಳಿಯ ಕಂಪನಿಗಳು ಕೆಲಸ ಮಾಡಬಹುದು, ಸಿಬ್ಬಂದಿ ಐಡಿ ಕಾರ್ಡ್ ಇಟ್ಟುಕೊಂಡು ಸಂಚಾರ ಮಾಡಬಹುದು

ಟೆಲಿಕಾಂ, ಅಂತರ್ಜಾಲ ಸೇವೆ ಸಲ್ಲಿಸುವ ವ್ಯಕ್ತಿಗಳ ಓಡಾಟಕ್ಕೆ ಅವಕಾಶ ಇದೆ.

ಆರೊಗ್ಯ ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿ ಓಡಾಟಕ್ಕೆ ಅವಕಾಶ

ಸರಕು ಸಾಗಣೆ ಮತ್ತು ಈ ಸರ್ವೀಸ್ ಗೆ ನಿರ್ಬಂಧ ಇಲ್ಲ

ರೈಲು ಮತ್ತು ವಿಮಾನ ಸಂಚಾರ ಇರಲಿದೆ.

ಇನ್ನು ಮುಖ್ಯವಾಗಿ ಅನ್​ಲಾಕ್​ ಆದ ಜಿಲ್ಲೆಗಳಲ್ಲಿ ಸಹ ವೀಕೆಂಡ್​ ಲಾಕ್​ಡೌನ್​ ಜಾರಿಯಲ್ಲಿರುತ್ತದೆ.

Latest article