ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಸ್ನೇಹಿತರ ಮೇಲೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ ಸಪ್ಲೈಯರ್ ಮೇಲೆ ದರ್ಶನ್ ಮತ್ತು ಸ್ನೇಹಿತರು ಹಲ್ಲೆ ಮಾಡಿ, ಬಳಿಕ ಸೆಟ್ಲಮೆಂಟ್ ಮಾಡಿಕೊಂಡಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಗೃಹ ಸಚಿವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್, ನಟ ದರ್ಶನ್, ರಾಕೇಶ್ ಪಾಪಣ್ಣ ಅಂತೆ, ಮೆಲಂಟಾ ಅಂತೆ, ಅವ್ರು ಮೂರು ಜನ ತಲೆ ಸೀಳ್ತಿನಿ ಅನ್ನೋ ಮೂರು ದಿನಗಳ ಮುಂಚೆ. ಸಂದೇಶ್ ಪ್ರಿನ್ಸ್ ಹೋಟೆಲ್ ಅಲ್ಲಿ ಒಂದು ದೊಡ್ಡ ಗಲಾಟೆ ಮಾಡಿದ್ದಾರೆ. ಒಬ್ಬ ಸಪ್ಲೈಯರ್ಗೆ ಹೊಡೆದಿದ್ದಾರೆ. ಈ ಬಗ್ಗೆ ಸಾಕ್ಷಿ ನನ್ನ ಹತ್ರ ಇದೆ. ಅದರ ಬಗ್ಗೆ ಗೃಹ ಸಚಿವರಿಗೆ ಮನವಿ ನೀಡಿದ್ದೇನೆ. ಅವರು ಕೂಡ ಆ್ಯಕ್ಷನ್ ತೆಗೆದುಕೊಳ್ತೀನಿ ಅಂದಿದ್ದಾರೆ. ಸಪ್ಲೈಯರ್ ಕಣ್ಣಿಗೆ ಗಂಭೀರ ಗಾಯವಾಗಿದೆ. ಈ ಫ್ಯಾಮಿಲಿ ನ್ಯಾಯ ಕೊಡ್ಸಿ ಅಂದಾಗ ಸಂಟ್ಲಮೆಂಟ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ತನಿಖೆ ಮಾಡಿಲ್ಲ ಅಂದ್ರೆ ಇವರು ಬುದ್ಧಿ ಕಲಿಯಲ್ಲ. ಯಾಕೆಂದ್ರೆ ಇವರು ಬಳಸುತ್ತಿರುವ ಭಾಷೆ ಎಂತಹದ್ದು, ಹೊಡೆದಾಟದ ನಂತರ ಮತ್ತೆ ಮಾಧ್ಯಮ ಮುಂದೆ ತಲೆ ಸಿಳ್ತೀನಿ, ಹೊಡಿತ್ತೀನಿ ಅಂತಾರೆ. ಅದು ಯಾರೂ ಪಾಪಣ್ಣ ಅಂತೆ, ಅವರು ಸಿದ್ದರಾಮಯ್ಯ ಶಿಷ್ಯ ಅಂತೆ. ಮೈಸೂರಲ್ಲಿ ದೂರು ಕೊಡು ಇಲ್ಲಿ ಪೊಲೀಸರು ನನ್ನ ಕೈಯಲ್ಲಿ ಇದ್ದಾರೆ ಅಂತ ಹೇಳ್ತಾನಂತೆ. ಇಂತಹ ಘಟನೆಗಳು ದುರಂತ. ಹೀಗಾಗಿ ಪೊಲೀಸರು ಇಂತವರ ವಿರುದ್ಧ ಆಕ್ಷನ್ ತಗೋಳಿ, ತನಿಖೆ ನಡೆಸಿ ತಪ್ಪಿತಸ್ಥರನ್ನ ಕರಿಸಿ ತನಿಖೆ ನಡೆಸಿ ಎಂದು ಆಗ್ರಹಿಸಿದ್ದಾರೆ.