Monday, January 30, 2023

ದರ್ಶನ್​-ಉಮಾಪತಿ ಸಂಧಾನ: ಬನಶಂಕರಿ ತಾಯಿಗೆ ವಿಶೇಷ ಪೂಜೆ

Must read

ಬೆಂಗಳೂರು: ನಟ ದರ್ಶನ್​ಗೆ ವಂಚನೆ ಯತ್ನ ಪ್ರಕರಣ ಸದ್ಯಕ್ಕೆ ತಣ್ಣಗಾಗಿದ್ದು, ಈ ಪ್ರಕರಣದ ಸಲುವಾಗಿ ದರ್ಶನ್​ ಹಾಗೂ ನಿರ್ಮಾಪಕ ಉಮಾಪತಿ ಸಂಧಾನ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಿರ್ಮಾಪಕ ಉಮಾಪತಿ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಿನ್ನೆ ಸುದ್ದಿಗೋಷ್ಟಿ ನಡೆಸಿದ ಉಮಾಪತಿ ಅವರು, ನಾನು ಈ ಪ್ರಕರಣದಲ್ಲಿ ನಿರಪರಾಧಿ ಬನಶಂಕರಿ ಅಮ್ಮ ನನ್ನ ಕಾಪಾಡ್ತಾಳೆ ಎಂದಿದ್ದರು. ಈಗ ಪ್ರಕರಣದಲ್ಲಿ ಕೊಂಚ ರಿಲೀಫ್ ಸಿಗ್ತಿದಂತೆ ಪತ್ನಿ ಸಮೇತ ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದರ್ಶನ್​ಗೆ ವಂಚನೆ ಯತ್ನ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ಅವರ ಹೆಸರು ಸಹ ಕೇಳಿ ಬಂದಿತ್ತು. ಈ ಬಗ್ಗೆ ಉಮಾಪತಿ ಕೂಡ ಸ್ಪಷ್ಟನೆ ನೀಡಿದ್ದರು. ಆದರೆ ನಿನ್ನೆ ದರ್ಶನ್ ಹಾಗೂ ಉಮಾಪತಿ ಪ್ರಕರಣ ಕುರಿತು ಮಾತುಕತೆ ನಡೆಸಿ ಸಂಧಾನ ಮಾಡಿಕೊಂಡಿದ್ದಾರೆ. ಅಲ್ಲದೇ ಪೊಲೀಸರ ಶೈಲಿಯಲ್ಲೇ ತನಿಖೆ ನಡೆಯಲಿ ಎನ್ನುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

Latest article