Wednesday, May 18, 2022

ಜೂನ್-21 ರಿಂದ ಬಸ್​​, ಮೆಟ್ರೋ ಸಂಚಾರ ಆರಂಭ..?

Must read

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹಾಗೂ ಪಾಸಿಟಿವಿಟಿ ರೇಟ್ ಇಳಿಕೆಯಾಗುತ್ತಿದೆ. ಹೀಗಾಗಿ ಸೋಂಕು ಇಳಿಕೆ ಬೆನ್ನಲ್ಲೇ ಇನ್ನಷ್ಟು ಕ್ಷೇತ್ರಗಳಿಗೆ ರಿಲೀಫ್ ನೀಡಿ ಎನ್ನುವ ಒತ್ತಾಯ ಕೇಳಿಬಂದಿದೆ. ಮೊದಲ ಅನ್ ಲಾಕ್ ನಲ್ಲಿ ಕೆಲವೇ ಕ್ಷೇತ್ರಗಳಿಗೆ ವಿನಾಯಿತಿ ನೀಡಿ ಸುಮ್ಮನೆ ಆಗಿದ್ದ ಸರ್ಕಾರ ಎರಡನೇ ಹಂತದ ಅನ್ ಲಾಕ್​​ನಲ್ಲಿ ಇನ್ನಷ್ಟು ಕ್ಷೇತ್ರಕ್ಕೆ ರಿಲೀಫ್ ನೀಡಲು ಸಿದ್ಧತೆ ನಡೆಸುತ್ತಿದೆ.

ಕೊರೊನಾ ಸೋಂಕನ್ನು ನಿಯಂತ್ರಿಸಲು ತಾಂತ್ರಿಕ ಸಲಹಾ ಸಮಿತಿ ನೀಡಿದ್ದ ಸಲಹೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಎರಡನೆಯ ಅಲೆಯ ವೇಳೆ ಇಡೀ ರಾಜ್ಯದಲ್ಲಿ ಲಾಕ್​ಡೌನ್​ ಘೋಷಿಸಿತ್ತು. ಅದೀಗ ಹಂತಹಂತವಾಗಿ ಅನ್​ಲಾಕ್​ ಆಗುತ್ತಿದೆ. ಜೂನ್ 21 ರಿಂದ ಅನ್​ಲಾಕ್ 2.O ಜಾರಿಗೆ ತಾಂತ್ರಿಕ ಸಲಹಾ ಸಮಿತಿ ಇದೀಗ ಗ್ರೀನ್ ಸಿಗ್ನಲ್ ನೀಡಿದೆ. ಹಾಗಾಗಿ ರಾಜ್ಯದಲ್ಲಿ ಜೂನ್ 21 ರಿಂದ ಎರಡನೇ ಹಂತದ ಅನ್ ಲಾಕ್ ನಲ್ಲಿ ಕೆಲವು ಕ್ಷೇತ್ರಗಳಿಗೆ ಹಾಕಿರುವ ನಿರ್ಬಂಧ ಸಡಿಲ ಮಾಡಲು ಸರ್ಕಾರ ಮುಂದಾಗಿದೆ.

ಕೊರೊನಾ ಸೋಂಕು ಇಳಿಕೆಯಾದ ಕಾರಣದಿಂದ ರಾಜ್ಯದ 19 ಜಿಲ್ಲೆ ಗಳನ್ನ ಜೂನ್-14 ರಿಂದ ಅನ್ ಲಾಕ್ ಮಾಡಿದೆ‌. ಅನ್ ಲಾಕ್ ಮೊದಲ ಹಂತದಲ್ಲಿ ಸ್ಟೀಲ್ ಅಂಗಡಿ, ಸಿಮೆಂಟ್ ಅಂಗಡಿ, ಕೈಗಾರಿಗಳು, ಬೀದಿ ಬದಿ ವ್ಯಾಪರಿಗಳಿಗೆ ವಿನಾಯಿತಿ ನೀಡಿದ್ದ ಸರ್ಕಾರ ಇದೀಗ ಅನ್ ಲಾಕ್ ಎರಡನೇ ಹಂತದಲ್ಲಿ ಅಂದರೆ ಮುಂದಿನ ಸೋಮವಾರದಿಂದ ಅನ್​ಲಾಕ್ 2.O ಜಾರಿಗೆ ಬರಲಿದೆ.

ರಾಜ್ಯದಲ್ಲಿ ಅನ್‌ಲಾಕ್ 2.O ಜಾರಿಯಾಗುವ ಹಿನ್ನೆಲೆಯಲ್ಲಿ ಜೂ.21ರಿಂದ ಕರ್ನಾಟಕದಲ್ಲಿ ಬಸ್ ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ಶೇ.50ರಷ್ಟು ಪ್ರಯಾಣಿಕರೊಂದಿಗೆ ಬಸ್ ಸಂಚರಿಸುವ ಸಾಧ್ಯತೆ ಇದೆ. ಜೊತೆಗೆ ಬಟ್ಟೆ ಅಂಗಡಿ, ಸಲೂನ್, ಚಿನ್ನದ ಅಂಗಡಿ, ಸಣ್ಣ ಸಣ್ಣ ಮಾರುಕಟ್ಟೆ, ಮಾಲ್ ಗಳಿಗೆ ಷರತ್ತು ಬದ್ದ ಅನುಮತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ.

ಇನ್ನು ಕೊರೊನ ಸೋಂಕು ನಿರೀಕ್ಷಿತ ಪ್ರಮಾಣದಲ್ಲಿ ಇಳಿಕೆಯಾಗದ ಕಾರಣದಿಂದ ಕೆಲವು ಕ್ಷೇತ್ರಗಳ ಕಠಿಣ ನಿರ್ಬಂಧ ಮುಂದುವರಿಸಲು ಸರ್ಕಾರ ಮುಂದಾಗಿದೆ.. ಪಾಸಿಟಿವಿಟಿ ರೇಟ್ 5 ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದವರಿಯಲಿದ್ದು, ಅನ್ ಲಾಕ್ ಇರುವ ಜಿಲ್ಲೆಗಳಲ್ಲಿಯೂ ಥಿಯೇಟರ್, ಪಬ್, ಬಾರ್, ಜಿಮ್, ಸ್ವಿಮ್ಮಿಂಗ್ ಪೂಲ್, ಕ್ರೀಡಾಂಗಣಗಳು, ಶಾಲೆ, ಕಾಲೇಜು ಯಥಾಸ್ಥಿತಿ ಕ್ಲೋಸ್ ಆಗಿರಲಿವೆ. ಇವುಗಳನ್ನೆಲ್ಲ ಓಪನ್‌ ಮಾಡಲು ಮೂರನೇ ಹಂತದ ಅನ್​ಲಾಕ್ ವರೆಗೂ ಕಾಯಲೇಬೇಕಾಗಿದೆ.

Also read:  'ಕೊರೊನಾ ಪ್ರಕರಣಗಳು ಹೆಚ್ಚಾಗಲು ಸರ್ಕಾರದ ನೀತಿ ಕಾರಣ' - ವಿಪಕ್ಷ ನಾಯಕ ಸಿದ್ದರಾಮಯ್ಯ

Latest article