ಬೆಂಗಳೂರು: ₹25ಕೋಟಿ ವಂಚನೆಗೆ ಯತ್ನಿಸಿದ ಆರೋಪಿ ಅರುಣಾ ಕುಮಾರಿಯನ್ನು ಯಾಕೆ ತೋಟಕ್ಕೆ ಕರೆಸಿಕೊಂಡ್ರಿ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ನಟ ದರ್ಶನ್ಗೆ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮಗೆ ಅರುಣಾ ಕುಮಾರಿ ಪರಿಚಯ ಇಲ್ಲ ಅಂದ್ರೆ ಯಾಕೆ ಆಕೆಯನ್ನು ತೋಟಕ್ಕೆ ಮನೆಗೆ ಕರೆಸಿಕೊಂಡ್ರಿ. ಇದೇ ದರ್ಶನ್ ಮತ್ತು ಸ್ನೇಹಿತರು ಮಹಿಳೆಗೆ ಯಾಕೆ ಬೆದರಿಕೆ ಹಾಕ್ತಾರೆ. ನಾನು ಯಾರ ಪರವಾಗಿಯೂ ಇಲ್ಲ. ಜನ ಸಾಮಾನ್ಯರ ಪರವಾಗಿ ಇದ್ದೇನೆ ಎಂದು ಹೇಳಿದ್ದಾರೆ.
ಇನ್ನು ನಿರ್ಮಾಪಕ ಅನ್ನದಾತರು ಅಂತೀರಾ. ಅವರಿಗೆ ತಲೆ ಸಿಳ್ತೀನಿ ಅಂದ್ರಿ, ಈಗ ರಾಜಿ ಆಗಿದ್ದೀರಾ. ₹1ಕೋಟಿ ವಂಚನೆ ಮಾಡಿದ್ರೆ ಜೈಲಿಗೆ ಕಳಿಸ್ತಾರೆ. ₹25 ಕೋಟಿ ವಂಚನೆ ಯತ್ನಕ್ಕೆ ರಾಜಿ ಮಾಡ್ತಿರಾ, ಪೊಲೀಸ್ ಠಾಣೆಯಲ್ಲಿ ಸೆಟಲ್ಮೆಂಟ್ ಮಾಡ್ತೀರಾ ಎಂದು ವ್ಯಂಗ್ಯವಾಡಿದ್ದಾರೆ.