Wednesday, May 18, 2022

ಅನೌನ್ಸ್ ಮಾಡದೇ ಗಾಡಿ ಎತ್ತಿಕೊಂಡು ಹೋಗುವ ಟೋಯಿಂಗ್​ ಸಿಬ್ಬಂದಿ ಮೇಲೆ ದೂರು

Must read

ಬೆಂಗಳೂರು: ನಗರದಲ್ಲಿ ಟೋಯಿಂಗ್ ಬಗ್ಗೆ ಸಾಕಷ್ಟು ಸಮಸ್ಯೆಗಳು ಕೇಳಿ ಬರುತ್ತಿದೆ. ಟೋಯಿಂಗ್ ಸಿಬ್ಬಂದಿ ಅನೌನ್ಸ್ ಮಾಡದೇ ಗಾಡಿ ಎತ್ತಿಕೊಂಡು ಹೋಗುತ್ತಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಅದರ ಬಗ್ಗೆ ಸಂಚಾರಿ ಜಂಟಿ ಪೊಲೀಸ್ ಆಯುಕ್ತರ ಜೊತೆ ನಾನು ಮಾತನಾಡುತ್ತೇನೆ. ಈ ರೀತಿ ಅನಧಿಕೃತವಾಗಿ ಗಾಡಿ ತೆಗೆದುಕೊಂಡು ಹೋದರೆ ಅಂತವರ ಮೇಲೆ ದೂರು ದಾಖಲಿಸಬಹುದು ಎಂದು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೇಸ್​ಬುಕ್​ ಲೈವ್​ನಲ್ಲಿ ಅನೇಕ ಜನರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಟೋಯಿಂಗ್  ಸಿಬ್ಬಂದಿ ಅನೌನ್ಸ್ ಮಾಡದೆ ಗಾಡಿ ಎತ್ತಿಕೊಂಡು ಹೋದರೆ ಅಂತಹ ಟೋಯಿಂಗ್​ ಎಜೇನ್ಸಿಯ ಲೈಸೆನ್ಸ್ ಕ್ಯಾನ್ಸಲ್ ಮಾಡಲಾಗುತ್ತದೆ. ಇದರ ಬಗ್ಗೆ ದೂರು ದಾಖಲಿಸಲು ಪ್ರತ್ಯೇಕವಾದ ಕೌಂಟರ್ ಮಾಡುತ್ತೇವೆ ಎಂದಿದ್ದಾರೆ.

ಇನ್ನು ತರಕಾರಿ ವ್ಯಾಪಾರಿಗಳು ಮೈಕ್​​ಗಳನ್ನು ಬಳಸಿ ಮಾರುತ್ತಿದ್ದಾರೆ. ಇದರಿಂದ ಮಕ್ಕಳ ಅನ್​ಲೈನ್​ ಕ್ಲಾಸ್​ಗೆ ತೊಂದರೆಯಾಗುತ್ತಿದೆ. ಮನೆಯಲ್ಲಿರುವ ಹಿರಿಯರಿಗೂ ಕೂಡ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಸಮಸ್ಯೆ ಹೇಳಿಕೊಂಡಿದ್ದಾರೆ. ಅದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

Latest article