Friday, January 21, 2022

ಪಂಜಾಬ್​ನಲ್ಲಿನ ಪಿಎಂ ಭದ್ರತಾ ಲೋಪ ದೇಶದ ಜನರ ಗಮನ ಸೆಳೆದದ್ದೇಕೆ..?

Must read

ಇವತ್ತು ನಮ್ಮ ಪ್ರಧಾನಿಗಳ ಈ ಮಾತನ್ನ ಮತ್ತೆ ಮತ್ತೆ ಈ ಮಾತನ್ನ ನೆನಪು ಮಾಡಿಕೊಳ್ಳಲೇಬೇಕು. ಯಾಕೆ​ ಗೊತ್ತಾ..? ಪ್ರಧಾನಮಂತ್ರಿ ನರೇಂದ್ರಮೋದಿಯವರು ಅಧಿಕಾರಕ್ಕೆ ಬರುವ ಮೊದಲು ಕೋಟಿ ಕೋಟಿ ಭಾರತೀಯರ ಮುಂದೆ ಹೇಳಿದ ಮಾತಿದು. ದೇಶದ ಸಂಸತ್​ನ ಶುದ್ಧೀಕರಣ ಮಾಡುವೆ, ದೇಶದಲ್ಲಿ ಯಾವೊಬ್ಬ ಕ್ರಿಮಿನಲ್​ ಹಿನ್ನೆಲೆಯ ಶಾಸಕ-ಸಂಸದರನ್ನೂ ಇಟ್ಟುಕೊಳ್ಳೋದಿಲ್ಲ ಎಂದು ಹೇಳಿದ್ದರು.. ಆದ್ರೆ.. ಆದ್ರೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರದಲ್ಲಿ ಒಂದಲ್ಲ, ಎರಡಲ್ಲ.. ಬರೋಬ್ಬರಿ 37% ಬಿಜೆಪಿ ಶಾಸಕರು ಕ್ರಿಮಿನಲ್​ ಹಿನ್ನೆಲೆಯನ್ನ ಉಳ್ಳವರಾಗಿದ್ದಾರೆ.

ಈ ವಿಷಯ ಈಗ ಚರ್ಚೆಗೆ ಬರೋಕೂ ಒಂದು ಕಾರಣವಿದೆ.. ಮಂಗಳವಾರವಷ್ಟೇ ಯೋಗಿ ಆದಿತ್ಯನಾಥ ಸರ್ಕಾರದಲ್ಲಿ ಪ್ರಬಲ ಸಚಿವರಾಗಿದ್ದ, ದಲಿತ ಹಾಗೂ ಹಿಂದುಳಿದ ವರ್ಗಗಳ ನಾಯಕ ಸ್ವಾಮಿ ಪ್ರಸಾದ್​ ಮೌರ್ಯ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.. ಬಿಜೆಪಿ ತೊರೆದು ಸಮಾಜವಾದಿ ಪಕ್ಷವನ್ನ ಸೇರಿಕೊಂಡಿದ್ದಾರೆ.. ಇಂಟರೆಸ್ಟಿಂಗ್​ ಏನಂದ್ರೆ, ಸ್ವಾಮಿ ಪ್ರಸಾದ್​ ಮೌರ್ಯ ಅವರು ಬಿಜೆಪಿಯನ್ನ ತೊರೆದು 24 ಗಂಟೆಯೊಳಗೆ ಅವರಿಗೆ ಅರೆಸ್ಟ್​ ವಾರೆಂಟ್​ ಜಾರಿಯಾಗಿದೆ.

2014ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸ್ವಾಮಿ ಪ್ರಸಾದ್​ ಮೌರ್ಯ ಅವರಿಗೆ ಬುದವಾರ ಅರೆಸ್ಟ್​ ವಾರಂಟ್​ ಜಾರಿಯಾಗಿದೆ.. ಜನವರಿ 24ನೇ ತಾರೀಕಿಗೆ ನ್ಯಾಯಾಲಯಕ್ಕೆ ಹಾಜರಾಗಲೇಬೇಕು ಎಂದು ವಾರಂಟ್​ ಜಾರಿಗೊಳಿಸಲಾಗಿದೆ.. 2014ರಲ್ಲಿ ಸ್ವಾಮಿ ಪ್ರಸಾದ್​ ಮೌರ್ಯ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಾ ಪ್ರಚೋದನಾತ್ಮಕ ಭಾಷಣ ಮಾಡಿದ್ದ ಆರೋಪವನ್ನ ಎದುರಿಸುತ್ತಿದ್ದರು.. ಅದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ನಡೆದಿತ್ತು.. ಈಗ ನ್ಯಾಯಾಲಯ ಅವರನ್ನ ಹಾಜರಾಗುವಂತೆ ವಾರಂಟ್​ ಜಾರಿಗೊಳಿಸಿದೆ.

ಈಗ ಯೋಚನೆ ಮಾಡಿ.. ಈ ಸ್ವಾಮಿ ಪ್ರಸಾದ್​ ಮೌರ್ಯ ವಿರುದ್ಧ ನ್ಯಾಯಾಲಯದಲ್ಲಿ ಕೇಸ್​ ನಡೀತಾ ಇತ್ತು. ಜೊತೆಗೆ ಯೋಗಿ ಸರ್ಕಾರದಲ್ಲಿ 37ರಷ್ಟು ಶಾಸಕರ ವಿರುದ್ಧ ಕ್ರಿಮಿನಲ್​ ಕೇಸ್​ಗಳಿವೆ.. ಹಾಗಿದ್ರೂ ಅವರ ವಿರುದ್ಧ ನಮ್ಮ ಪ್ರಧಾನಿಗಳಾಗಲಿ, ಸಿಎಂ ಯೋಗಿಯವರಾಗಲಿ ಧ್ವನಿ ಎತ್ತಿಲ್ಲ.. ಈಗ ನ್ಯಾಯಾಲಯವೇ ಪ್ರಕರಣವನ್ನ ನೆನಪು ಮಾಡಿಕೊಟ್ಟಿದೆ.. ಪ್ರಧಾನಿ ಮೋದಿಯವರು ತಾವೇ ಮಾಡಿದ್ದ ಭಾಷಣವನ್ನ ಇಂದು ಮರೆತುಬಿಟ್ಟಿದ್ದಾರೆ..

Also read:  ನಮಗೆ ಕೊಟ್ಟ ಎಲ್ಲಾ ಅನುದಾನವನ್ನು ಬಿಜೆಪಿ ಸರ್ಕಾರ ತಡೆಹಿಡಿದಿದೆ: ಹೆಚ್​.ಡಿ.ರೇವಣ್ಣ

ಉತ್ತರ ಪ್ರದೇಶದಲ್ಲಿ ಇಂದು ಮತ್ತೊಬ್ಬ ಪ್ರಬಲ ಸಚಿವ ಬಿಜೆಪಿ ತೊರೆದಿದ್ದಾರೆ. ಚುನಾವಣೆಗೆ ಇನ್ನೊಂದು ತಿಂಗಳು ಇದೆ ಎನ್ನುವ ಹೊತ್ತಿನಲ್ಲಿ, ಯೋಗಿ ಸರ್ಕಾರದ ಶಾಸಕ ಸಚಿವರೆಲ್ಲಾ ಘರ್​ ವಾಪ್ಸಿ ಮಂತ್ರ ಪಠಿಸುತ್ತಿದ್ದಾರೆ.. ಇದಕ್ಕೆ ಕಾರಣ ಏನು ಅನ್ನೋ ಪ್ರಶ್ನೆಗೆ ಜನರೇ ಉತ್ತರ ಕೊಡ್ತಾ ಇದ್ದಾರೆ.. ಆ ಕಾರಣ ಬೇರೇನೂ ಅಲ್ಲ.. ಬೆಲೆ ಏರಿಕೆ.

ಈ ದೇಶದ ಸಾಮಾನ್ಯ ನಾಗರಿಕ.. ಹವಾಯಿ ಚಪ್ಪಲಿ ಧರಿಸಿ ಓಡಾಡುವ ಜನ ಕೂಡ ಹವಾಯಿ ಜಹಾಜ್​ನಲ್ಲಿ ಅರ್ಥಾತ್​ ಏರೋಪ್ಲೇನ್​ನಲ್ಲಿ ಓಡಾಡಬೇಕು ಅನ್ನೋದು ನನ್ನ ಕನಸು ಎಂದಿದ್ದರು ಪ್ರಧಾನಿ ಮೋದಿ.. ಆದ್ರೆ, ಇಂದು ದೇಶದಲ್ಲಿ ಜನ ಹವಾಯಿ ಚಪ್ಪಲಿ ಹಾಕೋಕೂ ಯೋಚನೆ ಮಾಡುವಂತಾ ಸ್ಥಿತಿ ನಿರ್ಮಾಣವಾಗಿದೆ.. ಯಾಕಂದ್ರೆ, ಜನರ ಪಾದರಕ್ಷೆಯ ಮೇಲಿನ 5 ಪರ್ಸೆಂಟ್​ ಜಿಎಸ್​ಟಿಯನ್ನ 12 ಪರ್ಸೆಂಟ್​ಗೆ ಏರಿಸಿದ್ದಾರೆ. ಚಪ್ಪಲಿ ಬೆಲೆಯೂ ಏರಿಕೆಯಾಗಿದೆ.. ಚಪ್ಪಲಿ ಹಾಕೋಕೆ ಯೋಚನೆ ಮಾಡುವ ಜನ ವಿಮಾನ ಏರೋಕಾಗುತ್ತಾ.. ಕನಸು ಕಾಣಬೇಕು.. ಅದನ್ನ ಈಡೇರಿಸಿಕೊಳ್ಳಬೇಕು.. ಅಟ್​ ಲಿಸ್ಟ್​ ಕನಸನ್ನ ಬೆನ್ನತ್ತಿಯಾದ್ರೂ ಹೋಗಬೇಕು.. ಯಾವ ಕನಸು ಕೂಡ ತಿರುಕನ ಕನಸಾಗಬಾರದು.

Also read:  ಇದು ಕನ್ನಡಿಗರಾದ ನಮಗೆ ನಿಜವಾದ ಅವಮಾನ..! ಮಾಜಿ ಪ್ರಧಾನಿಗಳ ತವರಿನ ಕಥೆಯೇ ಹೀಗಾದರೆ..?

ಬೆಲೆ ಏರಿಕೆಯ ಬಿಸಿ ಎಷ್ಟರ ಮಟ್ಟಿಗೆ ದೇಶವನ್ನ ಕಾಡುತ್ತಿದೆ ಅಂದ್ರೆ, ಜನತೆ ತತ್ತರಿಸಿ ಹೋಗಿದ್ದಾರೆ.. ಉದ್ಯೋಗವಿಲ್ಲದೇ ಹಬ್ಬದ ಸಮಯದಲ್ಲಿ ಮಕ್ಕಳಿಗೆ ಬಟ್ಟೆ ತೆಗೆದುಕೊಳ್ಳೋಕೆ ಆಗುತ್ತಿಲ್ಲ.. ಹಬ್ಬದ ಸಂಭ್ರಮವೇ ಕಾಣುತ್ತಿಲ್ಲ.. ಪೆಟ್ರೋಲ್​-ಡೀಸೆಲ್​ ಬೆಲೆ ಮುಗಿಲು ಮುಟ್ಟಿದೆ.. ಗ್ಯಾಸ್​ ಖರೀದಿಸೋಕೂ ಜನ ತಿಂಗಳುಗಟ್ಟಲೇ ಯೋಚನೆ ಮಾಡುತ್ತಿದ್ದಾರೆ.. ಉಜ್ವಲಾ ಸಬ್ಸಿಡಿ ಎನ್ನುವ ಪದವೇ ಮರೆತು ಹೋಗುತ್ತಿದೆ.. ಇಂತಹ ಸಂದರ್ಭದಲ್ಲಿ ಪಂಚ ರಾಜ್ಯಗಳ ಚುನಾವಣೆ ಎದುರಾಗಿದೆ.. ಜನರ ಆಕ್ರೋಶ ಕೂಡ ಆಳುವ ವರ್ಗದ ಅರಿವಿಗೆ ಬಂದಿದೆ.. ಇದೇ ಸಂದರ್ಭದಲ್ಲಿ ಪಂಜಾಬ್​ನಲ್ಲಿ ಒಂದು ಘಟನೆ ನಡೆದು ಹೋಯ್ತು..

ದೇಶದ ಪ್ರಧಾನಿಗಳ ಮಾರ್ಗವನ್ನೇ ತಡೆದುಬಿಟ್ಟರು.. SPGಯಂತಾ ಸುಭದ್ರ ಪಡೆ ಇದ್ದರೂ ಭದ್ರತಾ ಲೋಪ ಹೇಗಾಯ್ತು.. ಯಾವತ್ತೂ ಆಗದಂತಾ ಭದ್ರತಾ ಲೋಪ ಇದ್ದಕ್ಕಿದ್ದಂತೆ ಚುನಾವಣಾ ಸಮಯದಲ್ಲಿ ಆಗಿದ್ದು ಹೇಗೆ..? ಸ್ವತಃ ಗೃಹ ಮಂತ್ರಾಲಯವೇ ಅಮಿತ್​ ಶಾ ಅವರ ಅಡಿಯಲ್ಲಿದೆ.. ಹೀಗಿದ್ರೂ ಭದ್ರತಾ ಲೋಪ ಹೇಗಾಯ್ತು.. ಈ ಬಗ್ಗೆ ಸತ್ಯಾಂಶ ಹೊರಗೆ ಬರಲೇಬೇಕು.. ಯಾಕಂದ್ರೆ, ಚುನಾವಣಾ ಸಮಯದಲ್ಲಿ ನಡೆದ ಈ ಘಟನೆಯ ಹಿಂದೆ ಯಾರಿದ್ದಾರೆ.. ಇದರ ಹಿಂದಿನ ಉದ್ದೇಶಗಳೇನು ಎಲ್ಲವೂ ಎಳೆ ಎಳೆಯಾಗಿ ದೇಶದ ಜನರ ಮುಂದೆ ಬರಲೇಬೇಕು.. ಇದೇ ಕಾರಣಕ್ಕೆ ಸುಪ್ರೀಂ ಕೋರ್ಟ್​ ತನಿಖಾ ಸಮಿತಿಯನ್ನ ರಚಿಸಿದೆ.. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.. ದೇಶದ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ.. ಬೆಲೆ ಏರಿಕೆಯನ್ನ ಸಹಿಸಿಕೊಂಡಿದ್ದಾರೆ.. ಆದ್ರೆ, ಇನ್ನೆಷ್ಟು ದಿನ ಸಹಿಸಿಕೊಳ್ಳೋಕೆ ಆಗುತ್ತೆ.. ARE WE STUPID..?

Also read:  ಇದು ಕನ್ನಡಿಗರಾದ ನಮಗೆ ನಿಜವಾದ ಅವಮಾನ..! ಮಾಜಿ ಪ್ರಧಾನಿಗಳ ತವರಿನ ಕಥೆಯೇ ಹೀಗಾದರೆ..?

Latest article