Monday, November 29, 2021

PM ಕೇರ್ಸ್​ ಫಂಡ್​ಗೆ ಯಾರೆಲ್ಲಾ ಹಣ ಕೊಟ್ಟಿದ್ದಾರೆ ಗೊತ್ತಾ..? ಆದರೆ ಇಷ್ಟೊಂದು ರಹಸ್ಯವೇಕೆ..?

Must read

ಪ್ರಧಾನ ಮಂತ್ರಿ ನರೇಮದ್ರ ಮೋದಿಯವರು ಕರೆ ಕೊಡುತ್ತಿದ್ದಂತೆ ಪುಟ್ಟ ಪುಟ್ಟ ಮಕ್ಕಳು ತಮ್ಮ ಪಿಗ್ಗಿ ಬ್ಯಾಂಕ್​ನಲ್ಲಿ ಸಂಗ್ರಹ ಮಾಡಿದ್ದ ಹಣವನ್ನ, ಹಿರಿಯರು ಕೊಟ್ಟಿದ್ದ ಗಿಫ್ಟ್​ನ್ನ ದಾನ ಮಾಡಿಬಿಟ್ಟರು. ಪಿಎಂ ಕೇರ್ಸ್​ ಫಂಡ್​ ಅಂದ್ರೆ ಏನು ಅನ್ನೋದೇ ಗೊತ್ತಿಲ್ಲದ ಮಕ್ಕಳು ಕೂಡ ದೇಶ ರಕ್ಷಣೆ ನಮ್ಮ ಹೊಣೆ ಎಂದು ದಾನ ಮಾಡಿದರು. ಅದೆಷ್ಟೋ ಮಹಿಳೆಯರು ವರ್ಷಪೂರ್ತಿ ಬೆವರು ಹರಿಸಿ ದುಡಿದು ಸಂಗ್ರಹ ಮಾಡಿದ್ದ ಹಣವನ್ನ ಪಿಎಂ ಕೇರ್ಸ್​ ಫಂಡ್​ಗೆ ನೀಡಿದರು.

ಕೂಲಿ ಕೆಲಸ ಮಾಡುವವರಿಂದ ಹಿಡಿದು, ಸರ್ಕಾರಿ ಕೆಲಸದಲ್ಲಿರುವವರು, ಬೀದಿ ಬದಿ ವ್ಯಾಪಾರಿಗಳಿಮದ ಹಿಡಿದು, ದೇವಾಲಯದಲ್ಲಿ ಪೂಜೆ ಮಾಡುವ ಅರ್ಚಕರವರೆಗೆ ಪ್ರತಿಯೊಬ್ಬರು ಕೂಡ ತಾವು ಕೂಡಿಟ್ಟ ಹಣವನ್ನೆಲ್ಲಾ ಪಿಎಂ ಕೇರ್ಸ್​ ಫಂಡ್​ಗೆ ದಾನ ಮಾಡಿದರು. ಯಾಕೆ​ ಗೊತ್ತಾ..? ಅದು ದೇಶದ ಪ್ರಧಾನಮಂತ್ರಿಗಳೇ ಮನವಿ ಮಾಡಿ ಪಡೆದ ಫಂಡ್​. ದೇಶದ ಸರ್ಕಾರವೇ ರಿಕ್ವೆಸ್ಟ್​ ಮಾಡಿ ಸಂಗ್ರಹಿಸಿದ ಫಂಡ್​. ದೇಶದ ಜನರ ಜೀವ ಉಳಿಸಲೆಂದೇ ಸಂಗ್ರಹ ಮಾಡಿದ ಫಂಡ್​. ಆ ಒಂದೇ ಕಾರಣಕ್ಕೆ ಭಾರತೀಯರೆಲ್ಲಾ ಎದ್ದು ನಿಂತು ಅತ್ಯಂತ ಪ್ರೀತಿಯಿಂದ ದೇಶ ರಕ್ಷಣೆಗೆ ತಮ್ಮದನ್ನೆಲ್ಲಾ ದಾನ ಮಾಡಿದರು. ಆದರೆ ಜನರಿಂದ ಸಂಗ್ರಹ ಮಾಡಿದ ನಿಧಿಯ ಮಾಹಿತಿಯನ್ನ ಮುಚ್ಚಿಡೋದೇಕೆ..? ಮನವಿ ಮಾಡಿ ಪಡೆದ ಫಂಡ್​ ಬಗ್ಗೆ ಮಾಹಿತಿ ಕೊಡೋಲ್ಲ ಏಕೆ..? ದೇಶದ ಜನರೇ ಕೊಟ್ಟ ಹಣದ ಬಗ್ಗೆ ಜನರಿಗೆ ಮಾಹಿತಿ ಕೊಡೋಲ್ಲ ಏಕೆ..? ಪಿಎಂ ಕೇರ್ಸ್​ ಫಂಡ್​ ಮಾಹಿತಿ ಮುಚ್ಚಿಟ್ಟಿದ್ದರ ಹಿಂದಿನ ಉದ್ದೇಶವೇನು..?

ಪಿಎಂ ಕೇರ್ಸ್​ ಫಂಡ್​ಗೆ ಬಂದಿರುವ ಒಂದೊಂದು ಪೈಸಾ ಕೂಡ ದೇಶದ ಜನರ ಹಣ. ಜನ ಕಷ್ಟಪಟ್ಟು ದುಡಿದು ಕೂಡಿಟ್ಟ ಹಣ. ದೇಶದ ಜನರ ಪ್ರಾಣ ಉಳಿಸಲು ಕರ್ಚು ಮಾಡಿ ಎನ್ನುವ ಕಾರಣಕ್ಕೆ, ಆ ಒಂದೇ ಉದ್ದೇಶಕ್ಕೆ ಕೊಟ್ಟಂತಾ ಹಣ.. ಆದ್ರೆ, ಹಣ ಸಂಗ್ರಹವಾಗುವವರೆಗೆ ಸುಮ್ಮನಿದ್ದವರು, ಮಾಹಿತಿ ಕೇಳುತ್ತಿದ್ದಂತೆ ಪಿಎಂ ಕೇರ್ಸ್​ ಫಂಡ್​ನ್ನೇ ಒಂದು ಖಾಸಗಿ ಫಂಡ್​ ಎಂದುಬಿಟ್ಟರು.. ಆ ಖಾಸಗಿ ಫಂಡ್​ನ ಮಾಹಿತಿಯನ್ನ ಕೊಡೋಕೆ ಸಾಧ್ಯವೇ ಇಲ್ಲ ಎಂದು ನ್ಯಾಯಾಲಯದ ಮುಂದೆ ಹೇಳಿಬಿಟ್ಟರು.. ದೇಶದ 130 ಕೋಟಿ ಜನರಿಗೆ ಇದಕ್ಕಿಂತ ದೊಡ್ಡ ಆಘಾತ ಬೇರೊಂದಿಲ್ಲ.

Also read:  ನಮ್ ಜೊತೆ ಲವ್ ಆಯ್ತು ಮದ್ವೆನೂ ಆಯ್ತು - ಪ್ರಿಯಾಂಕ್ ಖರ್ಗೆ

ಇಲ್ಲಿ ಪಿಎಂ ಕೇರ್ಸ್ ಫಂಡ್​ಗೆ ಹಣಸಹಾಯ ಮಾಡಿ ಎಂದು ದೇಶದ ಜನರಲ್ಲಿ ಮನವಿ ಮಾಡಿಕೊಂಡವರು ನಮ್ಮದೇ ಪ್ರಧಾನಮಂತ್ರಿಗಳು. ಪಿಎಂ ಕೇರ್ಸ್​ ಫಂಡ್​ನ ಮುಖ್ಯಸ್ಥರು ಇದೇ ಪ್ರಧಾನಿಗಳು. ಗೃಹ ಮಂತ್ರಿಗಳು, ರಕ್ಷಣಾ ಸಚಿವರು, ವಿತ್ತ ಸಚಿವರು ಈ ಫಂಡ್​ನ ಟ್ರಸ್ಟೀಗಳು. ಜನರಿಂದ ಆಯ್ಕೆಯಾದ ಸರ್ಕಾರದ ಪ್ರತಿನಿಧಿಗಳೇ ಮುಖ್ಯಸ್ಥರಾಗಿದ್ರೂ ಇದೊಂದು ಖಾಸಗಿ ಫಂಡ್​ ಎಂದು ಹೇಳಿದ್ದಾರೆ. ಏನಿದರ ಅರ್ಥ ನಿಮಗೆಲ್ಲಾ ಗೊತ್ತಿರಲಿ.

ನಮ್ಮ ದೇಶದಲ್ಲಿ ಕಳ್ಳತನ ಮಾಡಿದ ಹಣವನ್ನ ಮಾತ್ರ ಮುಚ್ಚಿಡುತ್ತಾರೆ.. ಕದ್ದ ಹಣದ ಬಗ್ಗೆ ಮಾತ್ರ ಮಾಹಿತಿ ಕೊಡೋದಿಲ್ಲ. ಆದ್ರೆ, ಪಿಎಂ ಕೇರ್ಸ್​ ಫಂಡ್​ನ್ನ ಯಾರೂ ಕದ್ದು ಕಲೆಕ್ಟ್​ ಮಾಡಿಲ್ಲ. ಜಗತ್ತಿನ ಎದುರಲ್ಲೇ ಸಂಗ್ರಹವಾದ ಹಣ. ಆದ್ರೆ ಮುಚ್ಚಿಡುತ್ತಿರುವುದೇಕೆ..? ಎಷ್ಟು ಹಣ ಸಂಗ್ರಹವಾಗಿದೆ. ಎಷ್ಟು ಹಣ ಯಾವುದಕ್ಕೆ ಖರ್ಚಾಗಿದೆ. ಮಾಹಿತಿ ಕೊಟ್ರೆ ಯಾರ ಗಂಟು ಹೋಗುತ್ತೆ. ದೇಶದ 130 ಕೋಟಿ ಜನ ಕೇಳ್ತಾ ಇದ್ದಾರೆ. ಪ್ರಧಾನ ಮಂತ್ರಿಗಳು ಖಾಸಗಿ ಫಂಡ್​ನ್ನ ಹೇಗೆ ಕಲೆಕ್ಟ್​ ಮಾಡ್ತಾರೆ. ಇದು ಖಾಸಗಿ ಫಂಡ್​ ಅಲ್ಲ. ಇದು ದೇಶದ ಭಾವನೆಗಳ ಜೊತೆ ಬೆರೆತು ಹೋಗಿರುವ ಫಂಡ್​. ಜನರ ಮಾನವೀಯತೆಯನ್ನ ಸಾರುವ ಫಂಡ್​.. ಭಾರತೀಯರ ಹೃದಯವೈಶಾಲ್ಯತೆಯನ್ನ ಸಾರಬೇಕಾದ ಫಂಡ್​. ಇಂಥಹ ಫಂಡ್​ ಬಗ್ಗೆ ಮಾಹಿತಿ ಕೊಟ್ಟು ಜಗತ್ತಿಗೆ ಮಾದರಿಯಾಗಬೇಕಾದವರು. ಅದೇಕೆ ಮುಚ್ಚಿಡುತ್ತಿದ್ದಾರೋ ಕಾಶಿ ವಿಶ್ವನಾಥನೇ ಬಲ್ಲ.. ARE WE STUPID..?

Latest article