Monday, November 29, 2021

ಪ್ರತಿಪಕ್ಷಗಳ ನಡುವಿನ ವಾಕ್ಸಮರ, ವೈಯಕ್ತಿಕ ಟೀಕೆ-ಇಂಥಾ ಹೊತ್ತಲ್ಲಿ ಇದೆಂಥಹಾ ರಾಜಕೀಯ..?

Must read

ರಾಜ್ಯ ರಾಜಕೀಯದಲ್ಲಿ ಟ್ವೀಟ್ ವಾರ್ ಜೋರಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ನಡುವಿನ ವಾಕ್ಸಮರ ಮುಂದುವರಿದಿದೆ. ಆರ್ ಎಸ್ ಎಸ್ ಸಂಘಟನೆ ವಿಚಾರದಲ್ಲಿ ಶುರುವಾದ ಜಗಳ ಇದೀಗ ವೈಯುಕ್ತಿಕ ತೇಜೋವಧೆಯವರೆಗೆ ಬಂದು ನಿಂತಿದೆ. ನಾಯಕರ ಈ ವೈಯುಕ್ತಿಕ ನಿಂದನೆಗಳು ಕುಟುಂಬ ಸದಸ್ಯರ ಮನಸ್ಸಿಗೆ ಘಾಸಿ ತಂದಿಟ್ಟಿವೆ.

ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲರ ನಡುವೆ ವೈಯುಕ್ತಿಕ ತೇಜೋವಧೆ ನಡೆದಿವೆ. ಅವರನ್ನ ಇವರು ಬೈಯ್ಯೋದು ಇವರನ್ನ ಅವರು ಉಗುಳೋದು ಶುರುವಾಗಿದೆ.

ಟೀಕೆಗಳಿಗೆ ಬಳಸುವ ಭಾಷೆ, ಪದ ಬಳಕೆ ಹದ್ದು ಮೀರಿದೆ. ತಮ್ಮ ನಡುವಿನ ಜಗಳಕ್ಕ ಕುಟುಂಬ ಸದಸ್ಯರನ್ನ ಎಳೆದು ತರುವಲ್ಲಿಗೆ ಟೀಕೆ ಮುಟ್ಟಿದೆ. ಕೀಳುಮಟ್ಟದ ಭಾಷೆಯನ್ನ ಬಳಸಿ ಬೈಯ್ದಾಡಿಕೊಳ್ಳುವ ಮಟ್ಟಕ್ಕೆ ಬಂದು ನಿಂತಿದ್ದಾರೆ. ರಾಜಕೀಯ ನಾಯಕರ ಈ ಭಾಷೆಯ ಬಗ್ಗೆ ರಾಜ್ಯದ ಜನ ಅಸಮಧಾನಗೊಂಡಿದ್ದಾರೆ.

ಆರ್ ಎಸ್ ಎಸ್ ಹಾಗೂ ಬಿಜೆಪಿ ನಾಯಕರ ಭ್ರಷ್ಟಾಚಾರದ ಬಗ್ಗೆ ಕುಮಾರಸ್ವಾಮಿ ಲೇವಡಿ ಮಾಡಿದ್ದರು. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದ ಸಿಎಂ, ನೀಲಿ ಚಿತ್ರ ವೀಕ್ಷಿಸಿ ಸಿಕ್ಕಿಬಿದ್ದ ಸಚಿವರು, ಸಿಡಿ ಸಚಿವರು ಅಂತ ಬಿಎಸ್ ವೈ, ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿಯವರನ್ನ ಲೇವಡಿ ಮಾಡಿದ್ದರು. ಇದಕ್ಕೆ ಕೌಂಟರ್ ಕೊಟ್ಟಿದ್ದ ಬಿಜೆಪಿ ನಿನ್ನೆ(ಅ.20) ಬೈಗಮಿ ಎಂಬ ಶಬ್ಧ ಬಳಸಿ ಕುಮಾರಸ್ವಾಮಿ ಲೇವಡಿ ಮಾಡಿತ್ತು.

ಸ್ವಜನಪಕ್ಷಪಾತ, ಮತ್ತೊಂದು ಸಂಸಾರ, ಕುಟುಂಬ ರಾಜಕಾರಣ ಹಾಗೂ ನಿಮ್ಮ ಭ್ರಷ್ಟಾಚಾರದ ಬಗ್ಗೆ ನಮಗೂ ಗೊತ್ತಿದೆ ಅಂತ ವ್ಯಂಗಿಸಿತ್ತು. ಬಿಜೆಪಿ ನಾಯಕರ ಈ ಬೈಗಮಿ ಪದ ಬಳಕೆಗೆ ತೀರ್ವ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ಸಿಂದಗಿಯಲ್ಲಿ ತಿರುಗೇಟು ನೀಡಿರುವ ಕುಮಾರಸ್ವಾಮಿ ನನ್ನ ಸಂಸಾರವನ್ನ ಮುಚ್ಚಿಟ್ಟಿಲ್ಲ. ನಾನು ತಪ್ಪು ಮಾಡಿದ್ದು ನಿಜ. ಅದನ್ನ ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದೇನೆ. ಯಾವುದನ್ನೂ ಮುಚ್ಚಿಟ್ಟಿಲ್ಲ. ಆದ್ರೆ ಕಟೀಲರು ಆರ್ ಎಸ್ಎಸ್ ನಾಯಕರನ್ನ ಏನೆಲ್ಲಾ ಮಾಡಿದ್ದಾರೆ ಅನ್ನೋದು ಗೊತ್ತಿದೆ. ವೈಯುಕ್ತಿಕ ವಿಚಾರಗಳನ್ನ ನಾನು ಬಯಲು ಮಾಡಿದ್ರೆ ನಿಮ್ಮ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತೆ ಅಂತ ಕೌಂಟರ್ ಕೊಟ್ಟಿದ್ದಾರೆ.

Also read:  ಸೂಪರ್​​ ಹಿಟ್ ‘ದೃಶ್ಯಂ’ ಸೀಕ್ವೆಲ್​ ಬರೋದು​ ಕನ್ಫರ್ಮ್

ಇನ್ನು ರಾಹುಲ್ ಗಾಂಧಿ ಡ್ರಗ್ಸ್ ಪೆಡ್ಲರ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಆರೋಪಿಸಿದ್ದರು. ಕಟೀಲರ ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು ಮುರಕೊಂಡು ಬಿದ್ದಿದ್ದಾರೆ. ಕಟೀಲು ಹಲ್ಲಿಲ್ಲದ ಹಾವಿದ್ದಂತೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ,ಆರ್ ಎಸ್ ಎಸ್ ನಾಯಕರನ್ನ ಲೇವಡಿ ಮಾಡಿದ್ದಾರೆ. ಇನ್ನು ನಿನ್ನೆ ಯುವ ಕಾಂಗ್ರೆಸ್ ಕಾರ್ಯಕರ್ತರು ಬೆಳಗ್ಗೆ ಕಾಂಗ್ರೆಸ್ ಭವನದ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಸಂಜೆ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕೋಕೆ ಹೊರಟಿದ್ದರು. ಮಾರ್ಗಮಧ್ಯದಲ್ಲೇ ಪೊಲೀಸರು ಪ್ರತಿಭಟನಾಕಾರರನ್ನ ವಶಕ್ಕೆ ಪಡೆದುಕೊಂಡ್ರು. ಇತ್ತ ಕಟೀಲರ ಹೇಳಿಕೆಯನ್ನ ಸಮರ್ಥನೆ ಮಾಡಿಕೊಳ್ಳಲು ಬಿಜೆಪಿ ನಾಯಕರೇ ಹಿಂದೇಟು ಹಾಕಿದ್ರು.

ಅದೇನೇ ಇರ್ಲಿ ಉಪಚುನಾವಣೆ ಮುಂದಿಟ್ಟುಕೊಂಡು ನಾಯಕರು ಈ ರೀತಿಯಾಗಿ ಕೀಳುಮಟ್ಟದ ಭಾಷೆಯನ್ನ ಬಳಸೋದು ಸರಿಯೇ..? ಇವತ್ತು ಮಾತನಾಡೋಕೆ ಹಲವಾರು ವಿಷಯಗಳಿವೆ. ಜನಸಾಮಾನ್ಯರ ಸಮಸ್ಯೆಗಳಿವೆ. ಇವುಗಳ ಬಗ್ಗೆ ಧ್ವನಿ ಎತ್ತಬೇಕಾದ ಪ್ರತಿಪಕ್ಷ ನಾಯಕರು ಹಾದಿಬೀದಿಯಲ್ಲಿ ಬೈಯ್ದಾಡಿಕೊಳ್ಳೋದು ಸರಿಯೇ..? ಹೋಗ್ಲಿ ಆಡಳಿತ ಪಕ್ಷದವರು, ತಪ್ಪುಗಳನ್ನ ಸರಿಮಾಡಿಕೊಂಡು ಜನಪರ ಆಡಳಿತ ಕೊಡುವತ್ತ ಗಮನಹರಿಸುವುದು ಬಿಟ್ಟು ಈ ರೀತಿಯಾಗಿ ಕೀಳುಮಟ್ಟದ ಟೀಕೆ ಮಾಡಿಕೊಂಡು ಹೋದ್ರೆ ಪರಿಸ್ಥಿತಿ Are we stupid..?

Latest article