Wednesday, June 29, 2022

ಇಂದೂ ಸಿಎಂ ಬೊಮ್ಮಾಯಿ ಸಿಟಿ ರೌಂಡ್ಸ್: ಮಳೆಹಾನಿ ಪ್ರದೇಶಗಳ ಸಮಗ್ರ ವೀಕ್ಷಣೆ

Must read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ನಿನ್ನೆ ನಾಮಕಾವಸ್ಥೆಗೆ ಸಿಟಿ ರೌಂಡ್ಸ್ ಮಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಇಂದು ಮತ್ತೆ ಸಮಗ್ರವಾಗಿ ವೀಕ್ಷಣೆ ಮಾಡಲಿದ್ದಾರೆ.

ಮಳೆಯಿಂದಾಗಿ 25 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೊಳಗಾಗಿದ್ದರೂ ಕೂಡ ಸಿಎಂ ಬೊಮ್ಮಾಯಿ ಮಾತ್ರ ನಿನ್ನೆ ತರಾತುರಿಯಲ್ಲಿ ಮಳೆಯಿಂದಾಗಿ ಹಾನಿಗೊಳಗಾಗಿರುವ ಪ್ರದೇಶವನ್ನು ವೀಕ್ಷಣೆ ಮಾಡಿದ್ದರು. ಸಿಎಂ ತೋರಿಕೆಯ ಸಿಟಿ ರೌಂಡ್ಸ್​​ಗೆ ವರಿಷ್ಠರು ಕಿಡಿಕಾರಿದ್ದರು.

ಬಿಬಿಎಂಪಿ ಚುನಾವಣೆ ಘೋಷಣೆಯಾಗುವ ಹಂತದಲ್ಲಿದೆ. ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯ ಸರಿಯಾಗಿಲ್ಲ ಅಂತ ವರದಿಗಳು ಬರುತ್ತಿದೆ. ಬೆಂಗಳೂರಿನ ಮೇಲೆ ತೀವ್ರ ಗಮನ ಅಗತ್ಯ. ಹೀಗಾಗಿ, ಮತ್ತೊಮ್ಮೆ ಸಿಟಿ ರೌಂಡ್ಸ್ ನಡೆಸುವಂತೆ ಬೊಮ್ಮಾಯಿವರಿಗೆ ಹೈಕಮಾಂಡ್​ನಿಂದ ಸೂಚನೆ ಬಂದಿದೆ. ಹೀಗಾಗಿ, ಇಂದು ಮತ್ತೆ ಸಮಗ್ರವಾಗಿ ವೀಕ್ಷಣೆ ಮಾಡಲಿದ್ದಾರೆ.

Latest article