Monday, November 29, 2021

ಮನೆಗೆ ನುಗ್ಗಿ ಮಹಿಳೆಯರು, ಮಕ್ಕಳನ್ನ ಎಳೆದೊಯ್ದ ಪೊಲೀಸರು…ಕಾನೂನು ಪಾಲಿಸಬೇಕಿದ್ದವರಿಂದಲೇ ದರ್ಪ..ARE WE STUPID..?

Must read

ಮದ್ಯಪಾನ ಮುಕ್ತ ಭಾರತವನ್ನ ನಿರ್ಮಾಣ ಮಾಡಬೇಕು ಎನ್ನುವುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. ಆದ್ರೆ ಇಂದು ಮದ್ಯ ಮಾರಾಟದ ವಿರುದ್ಧ ಹೋರಾಟ ಮಾಡುವವರನ್ನೇ ಪೊಲೀಸರು ಕ್ರಿಮಿನಲ್​ಗಳ ರೀತಿಯಲ್ಲಿ ಕಾಣುತ್ತಿದ್ದಾರೆ. ಇದಕ್ಕೆ ಜೀವಂತ ಸಾಕ್ಷಿ ಚಿಕ್ಕಮಗಳೂರು ಜಿಲ್ಲೆ ಕಡೂರು ಸಮೀಪದ ಮುಸ್ಲಾಪುರದಲ್ಲಿ ನಡೆದಿದೆ. ಮದ್ಯ ಮಾರಾಟಗಾರರ ವಿರುದ್ಧ ಹೋರಾಟ ಮಾಡಿದವರ ಮನೆಗಳಿಗೆ ಮಧ್ಯರಾತ್ರಿ ನುಗ್ಗಿದ್ದ ಪೊಲೀಸರು, ಮಹಿಳೆಯರು ಎನ್ನುವುದನ್ನೂ ಲೆಕ್ಕಿಸದೇ ಬಲವಂತವಾಗಿ ಬಂಧಿಸಿ ಕರೆದೊಯ್ದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದ ಜನ ಭಾನುವಾರ ಮದ್ಯ ಮಾರಾಟದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ನಮ್ಮ ಊರಿಗೆ ಬಾರ್​ ಬೇಡ ಎಂದು ಆಗ್ರಹಿಸಿದ್ದರು. ಈ ವೇಳೆ ಬಾರ್​ ಸಿಬ್ಬಂದಿ ಹಾಗೂ ಗ್ರಾಮಸ್ಥರ ನಡುವೆ ಗಲಾಟೆ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಬಾರ್​ ಮಾಲೀಕರು ಪೊಲೀಸರಿಗೆ ದೂರನ್ನ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬೆಳಗಿನ ಜಾವ 4 ಗಂಟೆಗೆ ವಿಚಾರಣೆಗೆ ಆಗಮಿಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಮಲಗಿದ್ದಾರೆ ಎನ್ನುವುದು ತಿಳಿದರೂ ಮನೆಯ ಮೇಲೆ ಹತ್ತಿ ಹಂಚುಗಳನ್ನ ಒಡೆದಿದ್ದಾರೆ. ಬಾಗಿಲನ್ನ ಮುರಿದಿದ್ದಾರೆ. ಈ ವೇಳೆ ಮಹಿಳೆಯರ ಕೂಗಾಟ ಕೇಳಿ ಗ್ರಾಮಸ್ಥರು ಧಾವಿಸಿದ್ದರು. ಆದರೆ, ಯಾರಿಗೂ ಕೇರ್​ ಮಾಡದೇ ಅವಾಚ್ಯ ಶಬ್ಧಗಳಿಂದ ನಿಂಧಿಸಿ ಮಹಿಳೆಯರು, ಬಾಲಕರು ಸೇರಿದಂತೆ 7 ಜನರನ್ನ ಎಳೆದೊಯ್ದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪೊಲೀಸರು ವಿಚಾರಣೆ ನಡೆಸಬೇಕು ಅನ್ನೋದಾಗಿದ್ರೆ ಬೆಳಗ್ಗೆ ಸೂರ್ಯ ಹುಟ್ಟಿದ ಮೇಲೆ ಬಂದು ವಿಚಾರಣೆ ನಡೆಸಬಹುದಿತ್ತು. ಬೆಳಗಿನ ಜಾವ ಕತ್ತಲೆ ಸಮಯದಲ್ಲಿ ಪೊಲೀಸರು ಬಂದಿದ್ದೇಕೆ. ಮನೆಯ ಬಾಗಿಲನ್ನ ಮುರಿದಿದ್ದೇಕೆ ಎನ್ನುವುದು ಗ್ರಾಮಸ್ಥರ ಆಕ್ರೋಶ. ಅಲ್ಲದೇ, ಗ್ರಾಮದ ಪ್ರತಿಯೊಬ್ಬರು ಕೂಡ ತಮ್ಮ ಊರಿನಲ್ಲಿ ಮದ್ಯದ ಅಂಗಡಿ ಬೇಡ ಎಂದು ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದಾರೆ. ಈ ವಿಚಾರವಾಗಿ ಗ್ರಾಮಸ್ಥರ ಪರ ನಿಲ್ಲಬೇಕಾದ ಕಡೂರು ಪೊಲೀಸರು ಮದ್ಯದ ಅಂಗಡಿ ಮಾಲೀಕರ ಪರವಾಗಿ ನಿಂದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ..

ಈ ಪ್ರಕರಣದಲ್ಲಿ ಪೊಲೀಸರು ತಮ್ಮ ಕರ್ತವ್ಯ ಮಾಡಿದ್ದಾರೆ ನಿಜ. ಆದ್ರೆ ಸರಿ ಹೊತ್ತಲ್ಲಿ ಮಹಿಳೆಯರ ಮನೆಗೆ ಕೇವಲ ಪುರುಷ ಪೊಲೀಸರು ನುಗ್ಗಿದ್ದೇಕೆ. ಅವರ ಮನೆಯ ಬಾಗಿಲನ್ನ ಮುರಿದಿದ್ದೇಕೆ.. ಅವರ ಮನೆಯ ಹಂಚುಗಳನ್ನ ಒಡೆದದ್ದೇಕೆ.. ಗಾಂಧೀಜಿ ಹೇಳಿದಂತೆ ಗ್ರಾಮಸ್ಥರು ತಮ್ಮ ಊರಿಗೆ ಮದ್ಯದ ಅಂಗಡಿ ಬೇಡ ಎಂದು ಮನವಿ ಮಾಡಿದ್ದರು. ಆಗ ಬಾರದ ಪೊಲೀಸರು ಈಗ ಇಷ್ಟೊಂದು ಕಳಕಳಿಯಿಂದ ಆಗಮಿಸಿದ್ದೇಕೆ.. ಗ್ರಾಮಸ್ಥರ ಪ್ರಶ್ನೆಗಳಿಗೆ ಪೊಲೀಸರಲ್ಲಿ ಉತ್ತರ ಇದೆಯಾ..? ಗ್ರಾಮದಲ್ಲಿ ಜನ ಸಂಕಷ್ಟಕ್ಕೆ ಸಿಲುಕಿದಾಗ ಜನಪ್ರತಿನಿಧಿಗಳು ಎಲ್ಲಿ ಹೋಗಿದ್ದಾರೆ..? ARE WE STUPID..?

Also read:  ಪಿಎಂ ಕೇರ್ಸ್ ಫಂಡ್ ಬಗ್ಗೆ ಉತ್ತರವೇ ಸಿಗದ ಪ್ರಶ್ನೆಗಳು..? - ARE WE STUPID..?

 

 

Latest article