Tuesday, October 26, 2021

ಕೋವಿಡ್​ ಹೆಸರಿನಲ್ಲಿ ಎತ್ತಿದ ಹಣ ಪಿಎಂ ಕೇರ್ಸ್​ ಫಂಡ್..! ಜನ ಸಾಯುತ್ತಿದ್ರೂ ನಯಾಪೈಸೆ ನೆರವಿಲ್ಲ..!

Must read

ದೇಶದ ಪ್ರಧಾನಿಗಳೆಂದರೆ ಅದು ದೇಶದ ಘನತೆ. ಅವರು ತೆಗೆದಕೊಳ್ಳುವ ತೀರ್ಮಾನಗಳು ದೇಶದ ಭವಿಷ್ಯವನ್ನ ಬರೆಯುತ್ತವೆ. ದೇಶ ಸಂಕಷ್ಟದಲ್ಲಿದ್ದಾಗ ಅವರ ನಿರ್ಧಾರ ತುಂಬಾನೇ ಮಹತ್ವದ್ದು. ಇಂತದ್ದೇ ಸಂಕಷ್ಟದಲ್ಲಿ ದೇಶ ಸಿಕ್ಕಿತ್ತು. ಅದು 2020ರ ಮಾರ್ಚ್​ ತಿಂಗಳು. ವಿಶ್ವಾದ್ಯಂತ ಕೋವಿಡ್​ ವೈರಸ್​ ಅಟ್ಟಹಾಸ ಮೆರೆಯುತ್ತಿತ್ತು.

ದೊಡ್ಡ ದೊಡ್ಡ ದೇಶಗಳು ಕೋವಿಡ್​ ರೋಗಿಗಳಿಗೆ ಆಸ್ಪತ್ರೆ ಒದಗಿಸಲು ಸಾಧ್ಯವಾಗದೇ ಕೈಚೆಲುತ್ತಿದ್ದವು. ಲಾಕ್​ಡೌನ್​ ಹೇರಿ ಅಸಹಾಯಕವಾಗಿದ್ದವು. ಇಂತಹದ್ದೇ ಸಮಯದಲ್ಲಿ ಲಾಕ್​ಡೌನ್​ ಯಾವಾಗ ಬೇಕಾದರೂ ಹೇರಬಹುದು ಎಂಬ ಆತಂಕದಲ್ಲಿ ಭಾರತವಿತ್ತು. ಆ ಸಮಯದಲ್ಲಿ ಎದ್ದು ನಿಂತ ದೇಶದ ಪ್ರಧಾನಿ, ಪಿಎಂ ಕೇರ್ಸ್​ ಫಂಡ್​ಗೆ ಕರೆಕೊಡ್ತಾರೆ. ಕೋವಿಡ್​ ಎನ್ನುವ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಜನ, ದೇಣಿಗೆ ಕೊಡಬೇಕು ಎಂದು ಮನವಿ ಮಾಡ್ತಾರೆ. ಆ ಒಂದೇ ಒಂದು ಕರೆಗೆ ಭಾರತ ಇದ್ದ ಸಂಕಷ್ಟದ ಕಾಲಕ್ಕೆ ದೇಣಿಗೆ ಕೊಟ್ಟಾದರೂ ದೇಶ ಉಳಿಸಿಕೊಳ್ಳಬೇಕೆಂದು ಅನೇಕರು ಅಪಾರ ಪ್ರಮಾಣದಲ್ಲಿ ದೇಣಿಗೆ ನೀಡಿದ್ದರು.

ಪಿಎಂ ಕೇರ್ಸ್​ಗೆ ಜನ ಹಣ ಕೊಟ್ಟಿದ್ದೇ ಬಂತು. ಆದರೆ ಆ ಪಿಎಂ ಕೇರ್ಸ್​ ಜನರ ಕಷ್ಟ ಕಾಲಕ್ಕೆ ನೆರವಾಗಲಿಲ್ಲ. ಲಾಕ್​ಡೌನ್​ ಘೋಷಣೆಯಾಗುತ್ತಲೇ ಕಂಗಾಲಾದ ವಲಸೆ ಕಾರ್ಮಿಕರು ಊರು ಬಿಟ್ಟರು. ನೂರಾರು ಕಿಮೀ ನಡೆದೂ ನಡೆದೂ ದಾರಿ ಮಧ್ಯೆ ಪ್ರಾಣ ಬಿಟ್ಟರು. ಅಂತಹ ವಲಸೆ ಕಾರ್ಮಿಕರಿಗೆ ಇದೇ ಪಿಎಂ ಕೇರ್ಸ್​ ಫಂಡ್​ ನಯಾ ಪೈಸೆ ಬಿಚ್ಚಲಿಲ್ಲ. ಕನಿಷ್ಠ ಅವರನ್ನ ಊರು ಸೇರಿಸಲು ಇದೇ ನಿಧಿಯಿಂದ ಹಣ ತೆಗೆದು ಬಸ್​, ಟ್ರಕ್​, ರೈಲು ವ್ಯವಸ್ಥೆಯನ್ನೂ ಮಾಡಲಿಲ್ಲ. ಅವರವರ ಪ್ರಾಣಕ್ಕೆ ಅವರವರೇ ಜವಾಬ್ದಾರಿ ಎನ್ನುವಂತಿತ್ತು ಕೇಂದ್ರದ ಧೋರಣೆ. ಆಗ ಜನಕ್ಕೆ ಒಂದು ಪ್ರಶ್ನೆ ಉದ್ಭವಿಸಿತ್ತು. ಈ ಪಿಎಂ ಕೇರ್ಸ್​ ಫಂಡ್​ ಹಣದಿಂದ ಆ ಜನಗಳಿಗೆ ನೆರವಾಗಬಹುದಿತ್ತಲ್ಲ. ಕೆಲವರು ಕೇಳಿಯೂ ಕೇಳಿದರು. ಆದರೆ ಪಿಎಂ ಕೇರ್ಸ್​ಗೆ ಬಂದಿರುವ ಹಣಕ್ಕೆ ಲೆಕ್ಕಕೊಡುವುದಿಲ್ಲ ಎಂದು ಬಿಟ್ಟಿತ್ತು ಕೇಂದ್ರ.

ಸಂಕಷ್ಟ ಕಾಲದಲ್ಲಿ ಚಂದಾ ಎತ್ತಿದ ದುಡ್ಡಿಗೆ ಲೆಕ್ಕ ಕೊಡುವುದಿಲ್ಲವೆಂದರೆ ಈ ದೇಶದಲ್ಲಿ ಅದಕ್ಕೇನು ಅರ್ಥ? ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ದೇಶದ ಜನರಿಗೆ ಸಂಕಷ್ಟದ ಹೆಸರಲ್ಲಿ ಹಣ ಕೇಳಿದ್ದು ಪ್ರಧಾನ ಮಂತ್ರಿಗಳು. ಈಗ ಅದೇ ಸಂಕಷ್ಟದ ಸಲುವಾಗಿ ಎಷ್ಟು ಹಣ ಇದೆ ಪಿಎಂ ಕೇರ್ಸ್​ನಲ್ಲಿ ಎಂದು ಲೆಕ್ಕ ಕೇಳಿದರೆ ಕೊಡುತ್ತಿಲ್ಲವಲ್ಲ ಎಂದು ದೇಶದ ಜನ ಅಕ್ಷರಶಃ ದಿಗ್ಭ್ರಾಂತರಾದರು. ಇಲ್ಲಿನ ಮಸಲತ್ತು ಜನಕ್ಕೆ ಅರ್ಥವಾಗಿರಲಿಲ್ಲ. ಆದರೆ ಅನುಮಾನ ಬಂದಿತ್ತು.

Also read:  ಪ್ರಧಾನಿ ಹೆಸರಲ್ಲಿದೆ ಖಾಸಗಿ ಟ್ರಸ್ಟ್..! - ಹಣ ಎಲ್ಲ ಖಾಸಗಿ..!- ಮೂವರು ಮಂತ್ರಿಗಳು ಇದೇ ಟ್ರಸ್ಟ್​ಗೆ ಟ್ರಸ್ಟಿಗಳು..! - ARE WE STUPID..?

2020 ಮಾರ್ಚ್​ 27ಕ್ಕೆ ಶುರುವಾದ ಪಿಎಂ ಕೇರ್ಸ್​ ಫಂಡ್​ ಕೇವಲ 4 ದಿನಗಳಲ್ಲಿ ಅಂದರೆ 2020 ಮಾರ್ಚ್ 31ಕ್ಕೆ ಭರ್ತಿ 3076 ಕೋಟಿಯಷ್ಟು ಹಣವನ್ನ ಸಂಗ್ರಹಿಸಿತ್ತು. ಅದಾದ ಮೇಲೆ ಸುಮಾರು ಒಂದೂವರೆ ವರ್ಷಗಳಿಗೂ ಮಿಗಿಲಾಗಿ ಪಿಎಂ ಕೇರ್ಸ್​ ಫಂಡ್​ ಕೋವಿಡ್​ ಹೆಸರಲ್ಲಿ ಚೆನ್ನಾಗಿ ಹಣ ಸಂಗ್ರಹ ಮಾಡುತ್ತಿದೆ. ಆದರೆ ಅದರ ಲೆಕ್ಕವನ್ನ ಮಾತ್ರ ಕೊಡುತ್ತಿಲ್ಲ. ಅಂದರೆ ಇದರ ಬಗ್ಗೆ ಜನ ಪ್ರಶ್ನೆ ಕೇಳಬಾರದೆ? ಇದುವರೆಗೂ ಇದೇ ಪಿಎಂ ಕೇರ್ಸ್​ ಫಂಡ್​ ನಿಂದ ಕೋವಿಡ್ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನೂ ಕೊಟ್ಟಿಲ್ಲ . ಹಾಗಿದ್ದರೆ ಪಿಎಂ ಕೇರ್ಸ್​ ಫಂಡ್​ನ ಉದ್ದೇಶ ಏನಿತ್ತು. ARE WE STUPID..?

More articles

Latest article