ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಅವರ ಕನಸು ಇಂದು ಸೂಪರ್ ಸ್ಟಾರ್ ಸೋಮಣ್ಣ ನೆರೆವೇರಿಸಿದ್ದಾರೆ ಅಂತಾ ಸಚಿವ ವಿ.ಸೋಮಣ್ಣರನ್ನು ಸೂಪರ್ ಸ್ಟಾರ್ ಎಂದು ಸಂಸದೆ ಸುಮಲತಾ ಹೊಗಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಸ್ವಾಭಿಮಾನಿ ಜನತೆಗೆ ಧನ್ಯವಾದಗಳು. ಇದು ಐತಿಹಾಸಿಕ ದಿನವಾಗಿದೆ. ಸ್ಲಂ ನಿವಾಸಿಗಳಿಗೆ ವಸತಿ ಸಿಕ್ಕಿದೆ. 2015ರಲ್ಲಿ ಅಂಬರೀಶ್ ವಸತಿ ಸಚಿವರಾಗಿದ್ದರು. ಅಂಬರೀಶ್ ಕನಸಿನ ಯೋಜನೆ ಇದಾಗಿತ್ತು. ಅಂಬರೀಶ್ ಹೃದಯದಲ್ಲಿ ಏನು ಹೇಳುತ್ತಿದ್ದರು ಅದನ್ನೇ ಮಾಡುತ್ತಿದ್ದರು. 7 ವರ್ಷವಾದ ಮೇಲೆ ಅಂಬರೀಶ್ ಅವರ ಕನಸು ನನಸಾಗಿದೆ ಎಂದು ಸಂತಸ ಹಂಚಿಕೊಂಡರು.
ಇನ್ನು ಹಿರಿಯ ಅಣ್ಣನ ಸ್ಥಾನದಲ್ಲಿ ವಿ.ಸೋಮಣ್ಣ ಇದ್ದಾರೆ. ಸೂಪರ್ ಸ್ಟಾರ್ ಥರ ಅವರು ಕೆಲಸ ಮಾಡಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಕನಸು ಇಂದು ಸೂಪರ್ ಸ್ಟಾರ್ ಸೋಮಣ್ಣ ನೆರೆವೇರಿಸಿದ್ದಾರೆ. ಸದ್ಯ ನಿಮ್ಮ ಸಮಸ್ಯೆ ಈಡೇರಿಕೆಯಾಗಿದೆ. ಕೆರೆಯಂಗಳದಲ್ಲೂ ಆದಷ್ಟು ಬೇಗ ನಿವೇಶನ ರೆಡಿಯಾಗಿ ಹಂಚಿಕೆಯಾಗುತ್ತದೆ. ಇದರಲ್ಲಿ ಅಧಿಕಾರಿಗಳ ಶ್ರಮ ಕೂಡ ಇದೆ. ಅವರಿಗೆ ನನ್ನ ಧನ್ಯವಾದಗಳು. ಸಚಿವ ಸೋಮಣ್ಣ ಅವರಿಗೆ ತುಂಬು ಹೃದಯದ ಅಭಿನಂದನೆ ಎಂದಿದ್ದಾರೆ.