Tuesday, May 17, 2022

ಸಿಎಂ ಇಬ್ರಾಹಿಂಗೆ ಪರೋಕ್ಷವಾಗಿ ಬಿಜೆಪಿಗೆ ಆಹ್ವಾನ ನೀಡಿದ ಶ್ರೀರಾಮುಲು

Must read

ಬಳ್ಳಾರಿ: ಸಿಎಂ ಇಬ್ರಾಹಿಂ ಬಿಜೆಪಿಗೆ ಬರುತ್ತಾರೆ ಅಂದ್ರೆ ನಾನು ನಮ್ಮ ನಾಯಕರ ಜೊತೆ ಮಾತಾಡುವೆ ಎನ್ನುವ ಮೂಲಕ ಸಚಿವ ಶ್ರೀರಾಮುಲು ಪರೋಕ್ಷವಾಗಿ ಬಿಜೆಪಿಗೆ ಆಹ್ವಾನ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ 18ರಷ್ಟು ಮುಸಲ್ಮಾನರಿದ್ದಾರೆ. ಕಾಂಗ್ರೆಸ್​ನವರು ಅವರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ ಅಷ್ಟೇ. ಸಿಎಂ ಇಬ್ರಾಹಿಂ ಹಿರಿಯ ನಾಯಕರು. ಅವರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಂಡಿಲ್ಲ. ನಮ್ಮನ್ನ ಕಾಂಗ್ರೆಸ್ ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ ಅಂತ ಇಬ್ರಾಹಿಂ ಹೇಳಿದರು. ಅಧ್ಯಕ್ಷಸ್ಥಾನ, ಮುಖ್ಯಮಂತ್ರಿಯಂತಹ ಸ್ಥಾನ ಕೊಡದೇ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಸ್ವತಃ ಇಬ್ರಾಹಿಂ ಹೇಳಿದ್ದಾರೆ. ಸ್ವಯಂ ಘೋಷಿತ ಅಹಿಂದ ನಾಯಕರು ಈಗ ಉತ್ತರ ಕೊಡಬೇಕು ಎಂದು ಸಿದ್ದರಾಮಯ್ಯಗೆ ಟಾಂಗ್​ ನೀಡಿದರು.

ಹಿಂದುಳಿದ ವರ್ಗಗಳ ನಾಯಕರನ್ನು ಬಳಕೆ ಮಾಡಿಕೊಂಡು ಈಗ ಕೈಬಿಡುತ್ತಿದ್ದಾರೆ. ಸ್ವಯಂ ಘೋಷಿತ ಅಹಿಂದ ನಾಯಕರು ಅನೇಕ ಸಮಸ್ಯೆ ಕ್ರಿಯೇಟ್ ಮಾಡಿದ್ದಾರೆ. ಸಿದ್ದರಾಮಯ್ಯ ಹೆಗಲಿಗೆ ಹೆಗಲು ಕೊಟ್ಟಿದ್ರು ಇಬ್ರಾಹಿಂ, ಅಂತವರಿಗೆ ಹೀಗೆ ಮಾಡಿದ್ದಾರೆ. ನನ್ನ ಜೊತೆಯೂ ಇಬ್ರಾಹಿಂ ಚೆನ್ನಾಗಿದ್ದಾರೆ. ನನ್ನ ಬಳಿ ಅಳಲು ತೋಡಿಕೊಂಡರು. ಅವರು ಬಿಜೆಪಿ ಬರೋದಾದ್ರೆ ನಮ್ಮ‌ ನಾಯಕರು ಹಾಗೂ ಅಧ್ಯಕ್ಷರ ಜೊತೆ ಮಾತಾಡುವೆ.
ಅವರು ಬರ್ತಾರೆ ಅಂದ್ರೆ ನಮ್ಮ ನಾಯಕರು ಬೇಡ ಅನ್ನಲ್ಲ.

ಡಿಕೆಶಿ ಜೊತೆ ನಮ್ಮ ಪಕ್ಷದವರು ಯಾರು ಸಂಪರ್ಕದಲ್ಲಿಲ್ಲ‌. ಬಾಯಿ ಚಪಲಕ್ಕೆ ಡಿಕೆಶಿ ಹಾಗೂ ಕಾಂಗ್ರೆಸ್ ನಾಯಕರು ಮಾತನಾಡ್ತಾರೆ. ನನ್ನ ಸಂಪರ್ಕದಲ್ಲಿ ಯಾರು ಕಾಂಗ್ರೆಸ್ ನಾಯಕರಿಲ್ಲ ಎಂದು ಹೇಳಿದರು.

Latest article