Wednesday, June 29, 2022

ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆಯಿದೆ- ವಿಪಕ್ಷ ನಾಯಕ ಸಿದ್ದರಾಮಯ್ಯ

Must read

ಬೆಂಗಳೂರು: ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆಯಿದೆ. ಬಿಬಿಎಂಪಿ, ಬಿಡಬ್ಲ್ಯೂಎಸ್​ಎಸ್​ಬಿ,ಬಿಡಿಎ ನಡುವೆ ಸಮನ್ವಯ ಕೊರತೆಯಿದೆ. ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಶಿವಾಜಿ ನಗರದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಮಾಡಬೇಕಾದ ಕೆಲಸ ಮಳೆಗಾಲದಲ್ಲಿ ಮಾಡುತ್ತಿದ್ದಾರೆ. ರಾಜಕಾಲುವೆ ಒತ್ತುವರಿ ಮಾಡಲಾಗಿದೆ. ರಾಜಕಾಲುವೆ ಸ್ವಚ್ಛ ಮಾಡದೆ ನೀರು ನುಗ್ಗುತ್ತಿದೆ. ಸರ್ವ ವ್ಯಾಪಿ,ಸರ್ವ ಸ್ಪರ್ಷಿ ಅಂತ ಹೇಳಿಕೊಳ್ಳುತ್ತಾರೆ. ಸರ್ಕಾರದವರು. ಒಳ್ಳೆಯ ಪದ ಬಳಕೆ ಬಿಟ್ಟು ಕೆಲಸ ಮಾಡಲಿ ಎಂದು ಬಿಜೆಪಿ ಸರ್ಕಾರ ವಿರುದ್ಧ ಅಸಮಾಧಾನ ಹೊರಹಾಕಿದರು.

ಇನ್ನು ಬೆಂಗಳೂರು ಅಭಿವೃದ್ಧಿ ಖಾತೆ ಸಿಎಂ ಬಳಿಯಿದೆ. ಅವರೇ ಈ ಕೆಲಸ ಮಾಡಬೇಕು. ನಾನು ಇದ್ದಾಗ ಪ್ರತ್ಯೇಕವಾಗಿ ಬೇರೆಯವರಿಗೆ ನೀಡಿದ್ದೆ. ಸಿಎಂ ಬಳಿ ಉಳಿದಿರೋದ್ರಿಂದ ನಗರದ ಸಮಸ್ಯೆ ದುಪ್ಪಟ್ಟಾಗಿವೆ. ಬಿಬಿಎಂಪಿ ಚುನಾವಣೆ ಮುಂದೂಡಿಕೆ ಇದೇ ಕಾರಣ. ಸೋಲಿನ ಭೀತಿಯಿಂದ ಚುನಾವಣೆ ನಡೆಸಿಲ್ಲ. ವಾರ್ಡ್​ಗಳಲ್ಲಿ ಜನಪ್ರತಿನಿಧಿಗಳು ಇಲ್ಲ. ಅಧಿಕಾರಿಗಳ ಕೈಗೆ ಬಿಬಿಎಂಪಿ ನೀಡಿದ್ದಾರೆ. ನಗರದ ಅಭಿವೃದ್ಧಿಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದ್ದಾರೆ.

Latest article