Tuesday, August 16, 2022

ಲೇಸರ್ ಶೋ​ಗೆ ಅದ್ಧೂರಿ ಚಾಲನೆ: ಬೃಹತ್​ ಪರದೆ ಮೇಲೆ ಸಿದ್ದರಾಮಯ್ಯ ಯಶೋಗಾಥೆ

Must read

ದಾವಣಗೆರೆ: ಸಿದ್ದರಾಮೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ವಿಶೇಷ ಲೇಸರ್ ಶೋ​ಗೆ ಅದ್ಧೂರಿ ಚಾಲನೆ ನೀಡಲಾಗಿದೆ.

ದಾವಣಗೆರೆಯ ಶಾಮನೂರು ಬೃಹತ್​ ಮಾಲ್ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೀವನ ಚರಿತ್ರೆ ಕುರಿತಂತೆ ವಿಶೇಷ ಲೇಸರ್​​ ಶೋ ಪ್ರದರ್ಶನ ಅನಾವರಣಾಗೊಂಡಿದೆ.

ಹೈದರಾಬಾದ್​ ಉದ್ಯಮಿ ಹಾಗೂ ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿ ಶ್ರೀಧರ್ ಎನ್ನುವವರು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು, 8-Dನಡಿ ಎಬಿ ಮ್ಯಾಪಿಂಗ್ ಜರ್ಮನ್​​ ತಂತ್ರಜ್ಞಾನದಲ್ಲಿ ಲೇಸರ್​ ಶೋ ಆರಂಭಗೊಂಡಿದೆ. ಸಾವಿರಾರು ಸಂಖ್ಯೆಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಈ ಲೇಸರ್​ ಶೋಗೆ ಸಾಕ್ಷಿಯಾಗಿದ್ದಾರೆ.

 

Latest article