Tuesday, October 26, 2021

ದೇಶದ ಜನಕ್ಕೆ ಪಿಎಂ ಕೇರ್ಸ್ ಫಂಡ್ ಎನ್ನುವ ಶಾಕ್ ಟ್ರೀಟ್ಮೆಂಟ್..! – ಕೋವಿಡ್ ಹೆಸರಿನ ನಿಧಿ ಖಾಸಗಿಯವರ ಪಾಲು, ಪ್ರಧಾನಿ ಸೈಲೆಂಟ್..! – ARE WE STUPID..?

Must read

ಕೋವಿಡ್​ ಎರಡನೇ ಅಲೆ ಹೊಸ್ತಿಲಲ್ಲಿದ್ದರೂ ಬೇಕಾಬಿಟ್ಟಿಯಾಗಿ ಇದೇ ದೇಶದ ಆಗಿನ ಆರೋಗ್ಯ ಸಚಿವ ನಡೆದುಕೊಂಡಿದ್ದರು. ಕೋವಿಡ್​ ವೈರಸ್​ನ ಎಂಡ್​ ಗೇಮ್​ ಇದು ಎಂದು ಬೀಗಿದ್ದರು. ಇದೇ ಟೈಮ್​ನಲ್ಲಿ ದೇಶದಲ್ಲಿ ನಾಗರಿಕ ಸಮಾಜದಲ್ಲಿ ನಡೆಯಬಾರದ ಘಟನೆ ನಡೆದುಹೋಗಿತ್ತು. ಎಲ್ಲ ಕಡೆ ವೈರಸ್​ ತಾಂಡವವಾಡುತ್ತಿದ್ದಾಗ ಇವರು ಚುನಾವಣಾ ರ್ಯಾಲಿಗಳನ್ನ ಮಾಡಿದ್ದರು. ಕೋವಿಡ್​ ಬಂದು ಅಪ್ಪಳಿಸಿ ಜನ ಬೀದಿ ಬೀದಿಯಲ್ಲಿ ಸಾಯೋಕೆ ಶುರುವಾಗಿತ್ತು. ಆ್ಯಂಬುಲೆನ್ಸ್​ ಕೊರತೆ, ಆಸ್ಪತ್ರೆ ಕೊರತೆ, ಬೆಡ್​ಗಳ ಕೊರತೆ, ಆಕ್ಸಿಜನ್​ ಕೊರತೆ, ಖಾಸಗಿ ಆಸ್ಪತ್ರೆಗಳ ಸುಲಿಗೆ ಇಂತಹ ನೂರಾರು ದೂರುಗಳು ಬಂದವು. ಆಗಲೂ ಇದೇ ಪಿಎಂ ಕೇರ್ಸ್​ ಫಂಡ್​ ಬಿಡಿಗಾಸಿನ ನೆರವು ನೀಡಲಿಲ್ಲ. ಅದರಲ್ಲಿ ಎಷ್ಟು ಹಣ ಇದೆ ಎಂದು ಇವರು ಹೇಳಲಿಲ್ಲ. ಪಿಎಂ ಕೇರ್ಸ್​ ಫಂಡ್​ಗೆ ಹಣ ಸಂಗ್ರಹಿಸಬೇಕಾದಾಗ ಹೇಳಿದ್ದ ಮಾತು. ಇದು ಕೋವಿಡ್​ ವಿರುದ್ಧ ಹೋರಾಡಲು ಎಂದು. ಜನ ಸತ್ತರೂ ಈ ಫಂಡ್​ ಕೋವಿಡ್​ ವಿರುದ್ಧ ಹೋರಾಡಲೇ ಇಲ್ಲ. ಏಕೆ ಗೊತ್ತಾ? ಇದು ಖಾಸಗಿ ಫಂಡ್​. ಖಾಸಗಿ ಟ್ರಸ್ಟ್​ ನ ಫಂಡ್​. ಹೆಸರು ಮಾತ್ರ ದೇಶದ ಪ್ರಧಾನಿಗಳದ್ದು. ಹೇಗಿದೆ ಶಾಕ್​ ಟ್ರೀಟ್ಮೆಂಟ್​.

ಈ ದೇಶದ ಜನ ನಿಮ್ಮ ಮಾತಿನ ಬಗ್ಗೆ ಅದೆಂಥ ನಂಬಿಕೆ ಇಟ್ಟಿದ್ದರು. ಎಲ್ಲ ನುಚ್ಚುನೂರಾಗಿದೆ ಈಗ. ಕಾರಣ ವ್ಯಾಕ್ಸಿನ್​ಗಾಗಿ ನೀವು ನಿಗದಿ ಮಾಡಿದ ದರ. ಜನ ಸಾಯುತ್ತಿದ್ದಾಗಲೂ ವ್ಯಾಕ್ಸಿನ್​ ಮಾರಾಟಕ್ಕೆ ಮುಂದಾಗಿದ್ದು ಬಹುಶಃ ಈ ದೇಶದಲ್ಲಿ ಮಾತ್ರ. ಮಕ್ಕಳು ಅನಾಥರಾದಾಗಲೂ ಈ ದೇಶದ ಪ್ರಧಾನಿಯಿಂದ ಆ ಮನೆಯಲ್ಲಿನ ಕೋವಿಡ್​ ಸಾವುಗಳಿಗೆ ಒಂದು ನೆರವು ಪ್ರಕಟವಾಗಲಿಲ್ಲ. ಜನ ಸಾಯಬೇಕಾದರೆ ಪೂರೈಸಿದ್ದು ಕಳಪೆ ವೆಂಟಿಲೇಟರ್​ಗಳನ್ನ. ಅದೇ ಕಳಪೆ ವೆಂಟಿಲೇಟರ್​ ಕಂಪನಿಗಳ ಪರ ವಕಾಲತ್ತು ವಹಿಸಿದ್ದನ್ನ ನೋಡಿ ಖುದ್ದು ನ್ಯಾಯಮೂರ್ತಿಗಳೇ ದಂಗಾಗಿದ್ದರು.  ಜನ ಪರ ಕಾಳಜಿ ಮೆರೆಯಬೇಕಿದ್ದ ಕಾಲದಲ್ಲಿ ಕಂಪನಿ ಪರ ವಕಾಲತ್ತು ವಹಿಸಿದ್ದು ಇದೇ ಸರ್ಕಾರ. ಈ ದೇಶದ ಜನ ಪಿಎಂ ಕೇರ್ಸ್​ ಫಂಡ್​ ಗೆ ಹಣವನ್ನೂ ಕೊಟ್ಟರು. ನಂಬಿದ್ದರು. ಆದರೆ ಅವರಿಂದ ಹಣವನ್ನ ದಾನವಾಗಿ ಸ್ವೀಕರಿಸಿದ ಮೇಲೆ ಅದೇ ಹಣವನ್ನ ಖಾಸಗಿ ಟ್ರಸ್ಟ್​ ಖಾತೆಗೆ ಸೇರಿಸಿದ್ದು ಇವರೇ! ಹೇಗಿದೆ ಇವರು ಕೊಟ್ಟ ಈ ಡೋಸ್​?

Also read:  ಈ ದೇಶದ ಭಾವನೆಗಳ ಜೊತೆ ಬೆರೆತಿದೆ PM ಕೇರ್ಸ್​ ಫಂಡ್..! ಆದರೆ ಮಾಹಿತಿ ಮಾತ್ರ ನೋಡೋದಿಲ್ಲ..!

ದೇಶದ ಜನಕ್ಕೆ ಕೊಟ್ಟ ಈ ಶಾಕ್​ ಟ್ರೀಟ್ಮೆಂಟ್​ನಿಂದ ಜನ ಇನ್ನೂ ಚೇತರಿಸಿಕೊಂಡಿಲ್ಲ. ಯಾಕೆ ಗೊತ್ತಾ? ಮಗಳ ಮದುವೆಗೆ ಇಟ್ಟಿದ್ದ ಹಣವನ್ನ ಪಿಎಂ ಕೇರ್ಸ್ ಫಂಡ್​ಗೆ ಕೊಟ್ಟವರಿದ್ದಾರೆ. ಪ್ರಧಾನ ಮಂತ್ರಿಗಳು ಕರೆಕೊಟ್ಟಿದ್ದರಲ್ಲವೇ? ಆ ನಂಬಿಕೆ ಇಲ್ಲಿ ದೊಡ್ಡದು. ಅನೇಕ ಮಕ್ಕಳು ಇದೇ ಪಿಎಂ ಕೇರ್ಸ್​ ಫಂಡ್​ಗೆ ದಾನ ಮಾಡಿದ್ದಾರೆ. ಗೋಲಕದ, ಹುಂಡಿಯ ಹಣವನ್ನ ಪಿಎಂ ಕೇರ್ಸ್​ಗೆ ಕೊಟ್ಟಿದ್ದಾರೆ. ವೃದ್ಧರು ತಮ್ಮ ರಿಟೈರ್​ಮೆಂಟ್​ ಹಣವನ್ನ ಇಲ್ಲಿ ದೇಣಿಗೆ ನೀಡಿದ್ದಾರೆ. ಕೆಲವರು ಆಸ್ತಿ ಮಾರಿ ಹಣ ಕೊಟ್ಟಿರಲೂ ಬಹುದು. ಪಿಎಂ ಎನ್ನುವ ಒಂದು ನಂಬಿಕೆ ಇಷ್ಟೆಲ್ಲಾ ಹಣವನ್ನ ದಾನ ಮಾಡುವಂತೆ ಮಾಡಿತ್ತು. ಆದರೆ ಪಿಎಂ ಮಾಡಿದ್ದೇನು? ಪಿಎಂ ಕೇರ್ಸ್​ ಮಾಡಿದ್ದೇನು? ಜನಕ್ಕೆ ಬಿಡಿಗಾಸೂ ನೆರವಿಲ್ಲದೆ, ಎಲ್ಲ ಹಣವನ್ನೂ ಖಾಸಗಿ ಟ್ರಸ್ಟ್​ಗೆ ವರ್ಗಾಯಿಸಿ, ಇದರ ಲೆಕ್ಕವನ್ನೂ ಕೊಡದೆ, ಇದನ್ನು RTI ವ್ಯಾಪ್ತಿಗೆ ಬರದಂತೆ ಮಾಡಿದ್ದು ಪರಾಕ್ರಮವೇ? ದೇಶದ ಜನರ ನಂಬಿಕೆಯ ಮೇಲೆ ಬರೆ ಎಳೆಯುವ ಕೆಲಸವಲ್ಲವೇ ಇದು? ARE WE STUPID..?

Also read:  ಖಾಸಗಿ ಡೊನೇಷನ್​ಗಾಗಿ ಪ್ರಧಾನಿ ಕಚೇರಿ ಬಳಕೆ..? ಇದೆಂತಾ ಕಾನ್ಫಿಡೆನ್ಸ್..? – ARE WE STUPID..?

 

 

More articles

Latest article