Monday, January 30, 2023

ಪೂನಾ ಮೂಲದ ಉದ್ಯಮಿಗೆ ಶಿವಮೊಗ್ಗದ ಕೋಟೆ ಠಾಣೆ ಪೊಲೀಸರ ಶಾಕ್

Must read

ಪೂನಾ ಮೂಲದ ಉದ್ಯಮಿಗೆ ಶಿವಮೊಗ್ಗದ ಕೋಟೆ ಠಾಣೆ ಪೊಲೀಸರು ಶಾಕ್ ನೀಡಿದ್ದಾರೆ.   ಪೂನಾ ಮೂಲದ ಉದ್ಯಮಿಯಾದಂತಹ ತಹಸೀನ್ ಪೂನಾವಾಲ ಮೊನ್ನೆಯಷ್ಟೇ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ವಿರುದ್ಧ ಎಫ್‌ಐಆರ್‌ ಹಾಕುವಂತೆ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್‌ಗೆ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದರು.  ಸದ್ಯ ಸಾಧ್ವಿ ಪ್ರಜ್ಞಾಸಿಂಗ್ ವಿರುದ್ಧ ದೂರು‌ ನೀಡಿದ್ದ ಉದ್ಯಮಿಗೆ ಪೊಲೀಸರು ನೋಟಿಸ್ ನೀಡಿದ್ದು ಇಂದು ಬೆಳಗ್ಗೆ 11 ಗಂಟೆಯೊಳಗೆ ಪೊಲೀಸ್ ಠಾಣೆಗೆ ಖುದ್ದು ಹಾಜರಾಗುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಕೆಲದಿನಗಳ ಹಿಂದೆ ಸಂಸದೆ ಸಾಧ್ವಿ ಶಿವಮೊಗ್ಗದಲ್ಲಿ ಆಯೋಜಿಸಿದ್ದ ಹಿಂಜಾವೇ ತ್ರೈ ವಾರ್ಷಿಕ ಸಮ್ಮೇಳನದಲ್ಲಿ ಸುಮಾರು 45 ನಿಮಿಷ ಮಾತನಾಡಿದ್ದು,ಈ ವೇಳೆ ತರಕಾರಿ ಹೆಚ್ಚುವ ಚಾಕುವಿನ ಬಗ್ಗೆ ಹೇಳಿಕೆಯನ್ನು ನೀಡಿದ್ದರು. ಲವ್​ ಜಿಹಾದ್​ನ ಬಗ್ಗೆ ಮಾತನಾಡುತ್ತಾ ಮನೆಯಲ್ಲಿರುವ ತರಕಾರಿ ಹೆಚ್ಚುವ ಚಾಕುವನ್ನ ಹೆಚ್ಚು ಶಾರ್ಪ್​ ಆಗಿಟ್ಟಿರಿ ಎಂದಿದ್ದರು. ಈ ಹೇಳಿಕೆ ಉತ್ತರ ಭಾರತದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಇದರಿಂದ ಸಾಧ್ವಿಯವರು ಪ್ರಚೋಧನಕಾರಿ ಹೇಳಿಕೆಯನ್ನು ನೀಡಿದ್ದಾರೆ. ಸಾಮಾಜಿಕ ಸ್ವಾಸ್ಥ್ಯಕ್ಕೆ ಭಂಗ ತರುತ್ತಿದ್ದಾರೆ. ಹೀಗಾಗಿ ಅವರ ಮೇಲೆ ಕಂಪ್ಲೆಂಟ್ ಮಾಡಿ 153-A, 153-B, 268, 295-A, 298, 504, 508 ಕಾಯ್ದೆ ಅಡಿಯಲ್ಲಿ ಎಫ್​ಐಆರ್ ದಾಖಲಿಸುವಂತೆ ತೆಹಸೀನ್​ ಪೂನಾವಾಲಾ ಶಿವಮೊಗ್ಗ ಎಸ್‌ಪಿಗೆ ಅಡ್ರೆಸ್​ ಮಾಡಿ, ಮನವಿ ಮಾಡಿದ್ದರು.

Latest article