Thursday, January 20, 2022

ಪಟ್ಟು ಬಿಡದ ರಮೇಶ್​​ ಜಾರಕಿಹೊಳಿ: ಹೈಕಮಾಂಡ್​ ಬಳಿಕ RSS ಮುಖಂಡರ ಮನೆಗೆ ಭೇಟಿ

Must read

ಬೆಳಗಾವಿ: ಆರ್.ಎಸ್.ಎಸ್ ಪ್ರಮುಖ ಅರವಿಂದರಾವ್ ದೇಶಪಾಂಡೆ ಮನೆಗೆ ಮಾಜಿ ಸಚಿವ ರಮೇಶ್​​ ಜಾರಕಿಹೊಳಿ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಬಳಿಕ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಬಗ್ಗೆ ಹಾಗೂ 2023ರ ಚುನಾವಣೆ ಕುರಿತು ಮೊನ್ನೆ ಕಲಬುರ್ಗಿಯಲ್ಲಿ ನಡೆದ ಸಂಘದ ಬೈಠಕ್​ನಲ್ಲಿ ಚರ್ಚೆಯಾಗಿದೆ. ಹೀಗಾಗಿ ಮಾರ್ಗದರ್ಶನ ಪಡೆಯಲು ಬಂದಿದ್ದೇನೆ ಎಂದರು.

ಸಚಿವ ಸಂಪುಟ ವಿಸ್ತರಣೆಯಲ್ಲಿ ಹೊಸಬರಿಗೆ ಆದ್ಯತೆ ನೀಡಬೇಕೆಂಬ ವಿಚಾರವಾಗಿ ಮಾತನಾಡಿದ ರಮೇಶ್​​ ಜಾರಕಿಹೊಳಿ, ನಾನು ಸಚಿವ ಸ್ಥಾನಕ್ಕೆ ಪ್ರಯತ್ನ ಮಾಡಿಲ್ಲ. ಅದು ನಮ್ಮ ಪಕ್ಷದ ವರಿಷ್ಠರು, ಸಿಎಂ ತೀರ್ಮಾನ ಮಾಡುತ್ತಾರೆ. ಎಲ್ಲವನ್ನು ಬಹಿರಂಗವಾಗಿ ಮಾತನಾಡಲು ಬರುವುದಿಲ್ಲ. ಪಕ್ಷದ ವೇದಿಕೆಯಲ್ಲಿ ಕೆಲವು ಚರ್ಚೆಯಾಗಿದೆ, ಶೀಘ್ರದಲ್ಲೇ ಒಳ್ಳೆಯದಾಗುವ ವಿಶ್ವಾಸವಿದೆ. ಇನ್ನು ಮುಂದಿನ ಚುನಾವಣೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ ಎಂದರು.

Latest article