Tuesday, May 17, 2022

ತಾಕತ್ ಇದ್ರೆ ಎದುರಿಗೆ ಬಂದು ಫೈಟ್​ ಮಾಡಿ: ಸ್ವಪಕ್ಷದವರ ವಿರುದ್ಧ ಗುಡುಗಿದ ರಾಜೂಗೌಡ

Must read

ಯಾದಗಿರಿ: ತಮ್ಮ ವಿರುದ್ಧ ಕೇಳಿಬಂದ ಆರೋಪಕ್ಕೆ ಬಿಜೆಪಿ ಶಾಸಕ ರಾಜೂಗೌಡ ಪ್ರತಿಕ್ರಿಯಿಸಿದ್ದು, ಸ್ವಪಕ್ಷದವರ ವಿರುದ್ಧ ಗುಡುಗಿದ್ದಾರೆ.

ಈ ಆರೋಪದ ಆಡಿಯೋದ ಹಿಂದೆ ಮಹಾನಾಯಕನ ಕೈವಾಡವಿದೆ. ನಾನಂತೂ ಮಹಾನಾಯಕನ ಕೈವಾಡದ ಬಗ್ಗೆ ಸುಮ್ಮನೇ ಬಿಡುವುದಿಲ್ಲ. ಆ ಮಹಾನಾಯಕನನ್ನು ಬಯಲಿಗೆ ತಂದೇ ತರುತ್ತೇನೆ ಎಂದು ಕಿಡಿಕಾರಿದ್ದಾರೆ.

ನನಗೆ ಹೊರಗಿನ ಶತ್ರುಗಳು ಇಲ್ಲ, ಒಳಗಿನ ಶತ್ರುಗಳಿದ್ದಾರೆ. ನಾನು ಮೊದಲು ಮಂತ್ರಿಗೆ ಆಸೆಪಟ್ಟಿದ್ದು ನಿಜ, ಕೇಳಿದ್ದು ನಿಜ. ಈ ರೀತಿಯ ಆಡಿಯೋ ಬಿಡಲಿ, ಬಿಟ್ಟಷ್ಟು ನನಗೆ ಒಳ್ಳೆಯದು. ನಾನು ಹುಟ್ಟು ಹೋರಾಟಗಾರ, ಇಂತಹವರ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕ್ಷುಲಕ ಕಾರಣ ಇಟ್ಟುಕೊಂಡು ಈ ರೀತಿ ಮಾಡುವವರಿಗೆ ದೇವರು ಒಳ್ಳೆಯದು ಮಾಡಲ್ಲ. ಇದರ ಹಿಂದಿನ ನಾಯಕರಿಗೆ ಒಳ್ಳೆಯದಾಗಲ್ಲ. ತಾಕತ್ ಇದ್ರೆ ಎದುರಿಗೆ ಬಂದು ಫೈಟ್​ ಮಾಡಿ, ಬೆನ್ನಿಗೆ ಚೂರಿ ಹಾಕಬೇಡಿ. ಈ ಆರೋಪದಲ್ಲಿ ಒಂದು ಪರ್ಸೆಂಟ್​ ನನ್ನ ಕೈವಾಡ ಇದ್ದರೆ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುತ್ತೇನೆ. ನಾನು ಕಳಂಕರಹಿತ ರಾಜಕಾರಣಿ ಎಂದಿದ್ದಾರೆ.

ಇನ್ನು ಮಹಿಳೆಯೊಬ್ಬಳು ಸರ್ಕಾರಿ ನೌಕರಿ ಕೊಡಿಸುವುದಾಗಿ ಜನರನ್ನು ವಂಚಿಸುತ್ತಿರುವುದಲ್ಲದೆ, ವ್ಯಕ್ತಿಯೊಬ್ಬರ ಜೊತೆ ಮೊಬೈಲ್‌ ಮಾತುಕತೆಯಲ್ಲಿ ಶಾಸಕ ರಾಜೂಗೌಡರ ಹೆಸರು ಪ್ರಸ್ತಾಪಿಸಿದ್ದ ಆಡಿಯೋ ವೈರಲ್​ ಆಗಿತ್ತು.

Latest article