Tuesday, August 16, 2022

ಖಾದಿ ಕಾರ್ಮಿಕರ ಹಣವನ್ನು ಬಿಜೆಪಿ ದೊಡ್ಡವರ ಜೇಬಿಗೆ ಹಾಕುತ್ತಿದೆ-ರಾಹುಲ್ ಗಾಂಧಿ

Must read

ಹುಬ್ಬಳ್ಳಿ: ಹುಬ್ಬಳ್ಳಿ ರಾಷ್ಟ್ರಧ್ವಜ ತಯಾರಕ ಘಟಕಕ್ಕೆ ಕಾಂಗ್ರೆಸ್​ ಮುಖಂಡ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ.

ರಾಷ್ಟ್ರಧ್ವಜ ತಯಾರಕ ಘಟಕದ ಸಿಬ್ಬಂದಿ ಜೊತೆ ಸಮಾಲೋಚನೆ ನಡೆಸಿದ ರಾಹುಲ್ ಗಾಂಧಿ ರಾಷ್ಟ್ರಧ್ವಜ ಸಂಹಿತೆ ತಿದ್ದುಪಡಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾದಿ ಮತ್ತು ಚರಕ ದೇಶದ ಸಂಕೇತ. ಇವು ದೇಶವನ್ನು ಪ್ರತಿನಿಧಿಸುತ್ತವೆ. ಬಿಜೆಪಿಯವರಿಗೆ ಗುಡಿ ಮತ್ತು ಸಣ್ಣ ಕೈಗಾರಿಕೆಗಳು ಬೇಡ. ಖಾದಿ ಕಾರ್ಮಿಕರ ಹಣವನ್ನು ತೆಗೆದುಕೊಂಡು ದೊಡ್ಡವರ ಜೇಬಿಗೆ ಹಾಕುತ್ತಿದೆ. ಬಿಜೆಪಿ ರಾಷ್ಟ್ರಧ್ವಜ ತಿದ್ದುಪಡಿ ವಿಚಾರದಲ್ಲಿ ಮಾತ್ರವಲ್ಲ, ನೋಟ್‌ಬ್ಯಾನ್, ಜಿಎಸ್‌ಟಿ, ಕೃಷಿ ಕಾಯ್ದೆ  ಇವೆಲ್ಲವೂ ಕೂಡ ಬಡವರ ಹಣವನ್ನು ಪಡೆದು ಕೆಲವರ ಜೇಬು ತುಂಬಲು ಜಾರಿಗೆ ತಂದಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.

Latest article