ಹುಬ್ಬಳ್ಳಿ: ಸಿದ್ದರಾಮಯ್ಯ ಆಪ್ತರ ಬೇಗುದಿ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ರಾಹುಲ್ ಗಾಂಧಿ ಗರಂ ಆಗಿದ್ದಾರೆ.
ಡಿ.ಕೆ.ಶಿವಕುಮಾರ್ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಅವರನ್ನು ತಡವಾಗಿ ಕರೆದೊಯ್ಯುವ ಪ್ಲಾನ್ ಮಾಡಿದ್ದರು ಎಂದು ಸಿದ್ದರಾಮಯ್ಯ ಅಭಿಮಾನಿಗಳು ಪರೋಕ್ಷವಾಗಿ ಆರೋಪಿಸಿದ್ದರು. ಮೊದಲು ಹುಬ್ಬಳ್ಳಿಯ ರಾಷ್ಟ್ರಧ್ವಜ ತಯಾರಿಕಾ ಕೇಂದ್ರಕ್ಕೆ ಭೇಟಿ, ನಂತರ ಚಿತ್ರದುರ್ಗದ ಮುರುಘಾ ಮಠಕ್ಕೆ ರಾಗಾ ಭೇಟಿಯ ಪ್ಲಾನ್ ಮಾಡಿದ್ದೇ ಡಿಕೆಶಿ ಎನ್ನಲಾಗಿದೆ. ಇದರಿಂದ ಸಹಜವಾಗಿಯೇ ಸಿದ್ದು ಬೆಂಬಲಿಗರಲ್ಲಿ ಅಸಮಾಧಾನ ಮೂಡಿತ್ತು.
ನಿನ್ನೆ ರಾತ್ರಿ ನಡೆದ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲೂ ಸಿದ್ದು ಬಣ ಅಸಮಾಧಾನ ಹೊರಹಾಕಿತ್ತು. ಈ ಹಿನ್ನೆಲೆಯಲ್ಲಿ ಡಿಕೆಶಿ ಮೇಲೆ ರಾಹುಲ್ ಗಾಧಿ ಗರಂ ಆಗಿದ್ದಾರೆ. ಕರ್ನಾಟಕಕ್ಕೆ ಬಂದ ಉದ್ದೇಶವನ್ನ ಮೊದಲು ಪಾಲಿಸಲು ಸೂಚಿಸಿದ್ದಾರೆ. ಹೀಗಾಗಿ, ಬೆಳಗ್ಗೆ ರಾಷ್ಟ್ರಧ್ವಜ ತಯಾರಿಕಾ ಘಟಕಕ್ಕೆ ಭೇಟಿ ನೀಡುವ ಪ್ಲಾನ್ ರದ್ದುಗೊಳಿಸಿದ್ದಾರೆ. ಸಿದ್ದು ಆಪ್ತರ ಒತ್ತಡಕ್ಕೆ ಮಣಿದು ನೇರವಾಗಿ ಚಿತ್ರದುರ್ಗಕ್ಕೆ ತೆರಳಿದ್ದಾರೆ.