Tuesday, October 26, 2021

ಪಿಎಂ ಕೇರ್ಸ್ ಫಂಡ್ ಬಗ್ಗೆ ಉತ್ತರವೇ ಸಿಗದ ಪ್ರಶ್ನೆಗಳು..? – ARE WE STUPID..?

Must read

ಪಿಎಂ ಕೇರ್ಸ್ ಫಂಡ್ ಬಗ್ಗೆ ಇಲ್ಲೊಂದಿಷ್ಟು ಪ್ರಶ್ನೆಗಳಿವೆ.. ಪಿಎಂ ಕೇರ್ಸ್ ಫಂಡ್ RTI ವ್ಯಾಪ್ತಿಗೇಕೆ ಬರುವುದಿಲ್ಲ..? ಇದು ದೇಶದ ಪ್ರಧಾನ ಮಂತ್ರಿಗಳು ಕರೆಕೊಟ್ಟ ನಿಧಿಯಲ್ಲವೇ..? ಪಿಎಂ ಕೇರ್ಸ್ ಫಂಡ್ನಲ್ಲಿ ಎಷ್ಟು ಹಣ ಬಂದಿದೆ ಎಂದು ಏಕೆ ಹೇಳುತ್ತಿಲ್ಲ..? PMCARESFUND.GOV.IN ಎಂಬ ವಿಳಾಸ ಬಳಸಿ ಮೋಸ ಮಾಡಬಹುದೇ..? PMO ಎಂದರೆ ಪ್ರಧಾನ ಮಂತ್ರಿಗಳ ಕಾರ್ಯಾಲಯವೇ ಈ ಫಂಡ್ನ ಅಡ್ರೆಸ್ ಅಲ್ಲವೇ..? ಪಿಎಂ ಕೇರ್ಸ್ ಫಂಡ್ ಹಣವನ್ನ ಇಲ್ಲಿಯವರೆಗೂ ಮುಟ್ಟುಗೋಲು ಹಾಕಿಲ್ಲ ಏಕೆ..? ಪ್ರಧಾನಿ ಹೆಸರಿನ ನಿಧಿ ಖಾಸಗಿ ಟ್ರಸ್ಟ್ ಪಾಲಾಗಿದ್ದು ಹೇಗೆ..?
ಈ ಪ್ರಶ್ನೆಗಳಿಗೆ ಇಲ್ಲಿಯವರೆಗೂ ಯಾರೂ ಉತ್ತರಿಸುವ ಗೋಜಿಗೆ ಹೋಗಿಲ್ಲ. ಅರ್ಥಾತ್ ಈ ಫಂಡ್​ನಲ್ಲಿ ಆಗಿರಬಹುದಾದ ಮೋಸ, ಭ್ರಷ್ಟಾಚಾರ, ನಯವಂಚನೆ, ದೇಶದ್ರೋಹವನ್ನ ಊಹಿಸಲೂ ಸಾಧ್ಯವಿಲ್ಲ. ಎಲ್ಲಿಯವರೆಗೆ ಈ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲವೋ ಅಲ್ಲಿಯವರೆಗೆ ಇಂತಹ ಅನುಮಾನಗಳು ಬರುತ್ತಲೇ ಇರುತ್ತವೆ.. ARE WE STUPID..?

More articles

Latest article