Tuesday, October 26, 2021

ಪ್ರಧಾನಿ ಹೆಸರಲ್ಲಿದೆ ಖಾಸಗಿ ಟ್ರಸ್ಟ್..! – ಹಣ ಎಲ್ಲ ಖಾಸಗಿ..!- ಮೂವರು ಮಂತ್ರಿಗಳು ಇದೇ ಟ್ರಸ್ಟ್​ಗೆ ಟ್ರಸ್ಟಿಗಳು..! – ARE WE STUPID..?

Must read

ಪಿಎಂ ಕೇರ್ಸ್​ ಫಂಡ್​ನ ಉದ್ದೇಶ ಏನಿರಲು ಸಾಧ್ಯ? ಎಲ್ಲಿ ಸತ್ಯವಿರುತ್ತದೋ ಅಲ್ಲಿ ಸಹಜವಾಗಿ ಪಾರದರ್ಶಕತೆಯೂ  ಇರುತ್ತದೆ. ಈ ಪಿಎಂ ಕೇರ್ಸ್​ ಫಂಡ್​ ತುಂಬಾ ನಿಗೂಢವಾಗಿ, ರಹಸ್ಯವಾಗಿ ಕುಳಿತಿರುವುದರ ಹಿಂದೆ ಒಟ್ಟು ನಾಲ್ವರು ವ್ಯಕ್ತಿಗಳಿದ್ದಾರೆ. ಅದರಲ್ಲಿ ಮೊಟ್ಟ ಮೊದಲ ವ್ಯಕ್ತಿ ಈ ದೇಶದ ಪ್ರಧಾನಮಂತ್ರಿ. ಉಳಿದ ಮೂವರು ರಕ್ಷಣಾ ಮಂತ್ರಿ, ಗೃಹ ಮಂತ್ರಿ ಮತ್ತು ವಿತ್ತ ಮಂತ್ರಿಗಳು.  ಈ ನಾಲ್ವರು ವ್ಯಕ್ತಿಗಳಿಗೆ ಮಾತ್ರ ಈ ಹಣದ ರಹಸ್ಯ ತಿಳಿದಿದೆ ಎಂದರೆ ನೀವು ಅರ್ಥ ಮಾಡ್ಕೊಳ್ಳಿ. ಇದು ಅದಿನ್ನೆಷ್ಟು ರಹಸ್ಯವಾಗಿ ಸಂಗ್ರಹಿಸಿರುವ ನಿಧಿ ಮತ್ತು ಇವರು ಯಾಕೆ ಲೆಕ್ಕ ಕೊಡುತ್ತಿಲ್ಲ ಎಂದು.

ಪಿಎಂ ಕೇರ್ಸ್​ ಫಂಡ್​ ನೋಡಲಿಕ್ಕೆ ಸರ್ಕಾರದ ನಿಧಿಯೆಂದೇ ಕಾಣುತ್ತದೆ. ಆದರೆ ವಾಸ್ತವದಲ್ಲಿ ಇದು ಸರ್ಕಾರದ ನಿಧಿ ಅಲ್ಲವೇ ಅಲ್ಲ. ಇಲ್ಲಿ ಹೆಸರಿನ ಮೊದಲೇ ಪಿಎಂ ಎಂದಿದೆಯೆಲ್ಲಾ ಅದನ್ನು ನೋಡಿದ ಯಾರಿಗೇ ಆದರೂ ಇದು ಪ್ರೈಮ್​ ಮಿನಿಸ್ಟರ್ ಎಂದೇ ಎನಿಸುತ್ತದೆ. ಅದು ನಿಜವೂ ಕೂಡ. ಪ್ರೈಮ್​ ಮಿನಿಸ್ಟರ್​ ಹೆಸರಲ್ಲೇ ಹಣ ಸಂಗ್ರಹಿಸಲಾಗಿದ್ದರೂ ಇದು ಖಾಸಗಿ ಟ್ರಸ್ಟ್​ಗೆ ಹೋಗಿರುವ ಹಣ. ಅಲ್ಲಿಗೆ ಒಂದು ವಿಷಯ ಜಗಜ್ಜಾಹೀರಾಯಿತು. ಪ್ರಧಾನ ಮಂತ್ರಿಗಳೇ ಮಖ್ಯಸ್ಥರಾಗಿರುವ ಒಂದು ಟ್ರಸ್ಟ್,​ ಖಾಸಗಿ ಟ್ರಸ್ಟ್​ ಎಂದು. ಇದು ಎಲ್ಲಾದರೂ ಸಾಧ್ಯವಿರುವ ಮಾತೇ ಎನಿಸುತ್ತದೆ. ಆದರೆ ಇದು ಸಾಧ್ಯವಾಗಿದೆ ಎಂದರೆ ನೀವು ನಂಬಲೇಬೇಕು. ಇದೇ ಕಾರಣಕ್ಕೆ ಇವರು ಲೆಕ್ಕ ಕೊಡುತ್ತಿಲ್ಲ. ಖರ್ಚಿನ ಬಗ್ಗೆ ಬಾಯಿಬಿಡುತ್ತಿಲ್ಲ.

ಪಿಎಂ ಕೇರ್ಸ್​ ಫಂಡ್​ ಒಂದು ಖಾಸಗಿ ಟ್ರಸ್ಟ್​. ಇದು ದೇಶದ ಪ್ರಧಾನಿಗಳ ಹೆಸರಲ್ಲಿ ಸ್ಥಾಪಿತವಾಗಿದೆ. pmcaresfund.gov.in ಎಂದು ಇದರ ಗೂಗಲ್ ವಿಳಾಸವಿದ್ದರೂ GOV.IN ಎಂದು ಇದಕ್ಕೆ ಸರ್ಕಾರಕ್ಕೆ ಮಾತ್ರ ಸಿಗುವ URL ಸಿಕ್ಕಿದ್ದರೂ ಇದು ಸರ್ಕಾರದ್ದಲ್ಲ . ಅಲ್ಲಿಗೆ ತುಂಬಾ ವ್ಯವಸ್ಥಿತವಾಗಿ ರೂಪಿಸಿರುವ ಯೋಜನೆ ಅಲ್ಲವೇ ಇದು. ನೋಡುವುದಕ್ಕೆ ಹೇಳುವುದಕ್ಕೆ, ಬಿಂಬಿಸಿಕೊಳ್ಳುವುದಕ್ಕೆ ಸರ್ಕಾರದ್ದೇ ಎನ್ನುವಂತಿರಬೇಕು. ಆದರೆ ಹಣ ಮಾತ್ರ ಖಾಸಗಿ ಟ್ರಸ್ಟ್​ನ ತಿಜೋರಿಗೆ ಬಂದು ಬೀಳಬೇಕು. ಹಣ ಬಂದು ಬಿದ್ದ ಮೇಲೆ ಅದರ ಬಿಡಿಗಾಸಿನ ಲೆಕ್ಕವನ್ನ ಯಾರೂ ಕೇಳಬಾರದು ಮತ್ತು ಅವರು ಹೇಳಬಾರದು.

Also read:  ಪಿಎಂ ಕೇರ್ಸ್ ಫಂಡ್​ಗೆ ಸಂಬಂಧಿಸಿದ ದಾಖಲೆ ಪಡೆಯುವುದು ಹೇಗೆ ಗೊತ್ತಾ..?

ಈ ಟ್ರಸ್ಟ್​ನ ಆಫೀಸ್​ ಎಲ್ಲಿದೆ ಗೊತ್ತಾ? ಅದು ಪ್ರಧಾನ ಮಂತ್ರಿಗಳ ಕಾರ್ಯಾಲಯ. ಅಂದರೆ ದೇಶದ ಪ್ರಧಾನ ಮಂತ್ರಿಗಳ ಕಾರ್ಯಾಲಯವನ್ನ ಒಂದು ಖಾಸಗಿ ಟ್ರಸ್ಟ್​ ತನ್ನ ಕೇರ್​ ಆಫ್​ ವಿಳಾಸ ಮಾಡಿಕೊಂಡಿದೆ. ಇದು ವಿಶ್ವದಲ್ಲೇ ಕಂಡು ಕೇಳರಿಯದಂತ ಘಟನೆ. ಆಫೀಸ್​ ಅಡ್ರೆಸ್​ ಪ್ರಧಾನ ಮಂತ್ರಿಗಳ ಕಾರ್ಯಾಲಯ ಎಂದಿದ್ದ ಮೇಲೆ ಸರ್ಕಾರದ್ದೇ ಇರಬೇಕಲ್ಲವೇ ಎಂದುಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಈ ಟ್ರಸ್ಟ್​ ಖಾಸಗಿ. ಅದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳು ಪಿಎಂ ಕೇರ್ಸ್ ಫಂಡ್​ ಹೆಸರಿನ ವೆಬ್​ ಸೈಟ್​ನಲ್ಲೇ ಇವೆ.

ಈ ಟ್ರಸ್ಟ್​ ಖಾಸಗಿಯಾಗಿದ್ದ ಕಾರಣಕ್ಕಾಗಿಯೇ ಇದರ ಬಗ್ಗೆ ಇವರ್ಯಾರು ಲೆಕ್ಕ ಕೊಟ್ಟಿಲ್ಲ. ದೇಶದ ಪ್ರಧಾನಿಯಾದವರೂ ಇಲ್ಲಿರುವ ಸತ್ಯವೇನು ಎಂದು ಹೇಳುತ್ತಿಲ್ಲ. ಜನಗಳು ಕೊಟ್ಟಿರುವ ಹಣದ ಲೆಕ್ಕ ಕೊಡಲು ಗೌಪ್ಯತೆ ಬೇಕೆ? ಅಂಥ ರಹಸ್ಯವೇನಿದೆ ಇದರಲ್ಲಿ. ಕೋವಿಡ್​ನಿಂದ ಲಕ್ಷಾಂತರ ಜನ ಸೋಂಕಿತರಾದಾಗ, ಸತ್ತಾಗ ಈ ಪಿಎಂ ಕೇರ್ಸ್​ ಫಂಡ್​ ನೆರವಿಗೆ ಬರಲಿಲ್ಲ. ಮಕ್ಕಳು ಅನಾಥರಾದಾಗ ಇದೇ ಫಂಡ್​ ನೆರವಿಗೆ ಬರಲಿಲ್ಲ. ವ್ಯಾಕ್ಸಿನ್​ ಮಾರಾಟ ಮಾಡಿಕೊಂಡಾಗ ಇದೇ ಫಂಡ್​ ನಿಂದ ಬಿಡಿಗಾಸು ಬಿಚ್ಚಲಿಲ್ಲ. ಎಲ್ಲವೂ ಖಾಸಗಿ ಟ್ರಸ್ಟ್​ಗೆ ಹರಿದು ಹೋಗಿದ್ದಾಗ ಹೇಗೆ ಖರ್ಚು ಮಾಡುತ್ತಾರೆ ಹೇಳಿ. ARE WE STUPID?

More articles

Latest article